ಬಸವಕಲ್ಯಾಣ:ಅ.೩೦: ರಾಷ್ಟ್ರದ ಸ್ವಾತಂತ್ರ‍್ಯೋತ್ಸವದ ಜೊತೆಗೆ ಐಕ್ಯತೆ, ಅಖಂಡತೆ, ಸಮಗ್ರತೆಗಾಗಿ ಶ್ರಮಿಸಿದ ಧೀಮಂತ ಸರ್ದಾರ್ ವಲ್ಲಭಭಾಯ್ ಪಟೇಲರು ಎಂದು ಸಿಪಿಐ ಅಲಿಸಾಬ್ ಹೇಳಿದರು.
ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ ಪ್ರಯುಕ್ತ ‘ರಾಷ್ಟ್ರೀಯ ಏಕತಾ ದಿನಾಚರಣೆ’ ವಿಷಯದ ಪ್ರಬಂಧ ಸ್ಪರ್ಧೆ ಮತ್ತು ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹರಿದು ಹಂಚಿ ಹೋದ ಇಡೀ ದೇಶದ ಏಕತೆಗಾಗಿ ಪಟೇಲ್ ಶ್ರಮಿಸಿದ್ದರು ಎಂದರು.
ವಿದ್ಯಾರ್ಥಿಗಳು ಸ್ವಾತಂತ್ರ‍್ಯ ಹೋರಾಟಗಾರ ಜೀವನ ಮತ್ತು ಮೌಲ್ಯಗಳನ್ನು ಅರಿವ ಅಗತ್ಯವಿದೆ. ನಮ್ಮ ದೇಶ, ನಮ್ಮ ದೇಶದ ಸಂಸ್ಕೃತಿಕ ಏಕತೆಗಾಗಿ ದುಡಿವ ಅಗತ್ಯವಿದೆ. ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕು ಎಂದರು.
ಕನ್ನಡ ಈ ನಾಡಿನ ಭಾಷೆ. ಬಸವಾದಿ ಶರಣರು, ತತ್ವಪದಕಾರರು ಸೇರಿ ಹಲವರು ಕನ್ನಡ ಜಗತ್ತು ಕಟ್ಟಿದ್ದಾರೆ. ನಮ್ಮ ಮೊದಲ
ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟೆ ಮಾತನಾಡಿ, ಫ್ರೆಂಚ್ , ಡಚ್, ಬ್ರಿಟಿಷ್ ಅಧಿಕಾರದಲ್ಲಿ ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿದ ಭಾರತವನ್ನು ಒಗ್ಗೂಡಿಸುವ ಮೂಲಕ ದೇಶಕ್ಕೆ ಐಕ್ಯತೆ ತಂದು ಕೊಟ್ಟವರು ಸರ್ದಾರ್ ಪಟೇಲರು. ಅದಕ್ಕಾಗಿಯೇ ಅವರ ಜನ್ಮದಿನ ರಾಷ್ಟ್ರೀಯ ಏಕತಾ ದಿವಸವಾಗಿ ಆಚರಿಸಲಾಗುತ್ತದೆ ಎಂದರು.
ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಭಾಷಿಕ, ಪ್ರಾದೇಶಿಕ, ಸಾಂಸ್ಕೃತಿಕ ವೈವಿಧ್ಯ ಹೊಂದಿರುವ ಭಾರತ ತನ್ನ ಬಹುತ್ವ ಮತ್ತು ತಾತ್ವಿಕ ಬಹುಧಾರೆಗಳ ಮೂಲಕ ಬಹು ಸಾಂಸ್ಕೃತಿಕ ಪರೀಪರೆ ಉಳಿಸಿಕೊಂಡಿದೆ. ಪಟೇಲ್ ಅವರ ರಾಷ್ಟ್ರೀಯತೆ ಬಹುತ್ವದ ಐಕ್ಯತೆಯ ಪ್ರತಿಪಾದನೆಯಲ್ಲಿದೆ ಎಂದರು .
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, , ಶ್ರೀ ಬಸವೇಶ್ವರ ಪಿಜಿ ಕಾಲೇಜು ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ,
ಶ್ರೀ ಬಸವೇಶ್ವರ ಪಿಯು ಕಾಲೇಜು ಪ್ರಾಚಾರ್ಯ ಡಾ ರುದ್ರಮಣಿ ಮಠಪತಿ, ಅಕ್ಕಮಹಾದೇವಿ ಮಹಿಳಾ ಕಾಲೇಜು ಪ್ರಾಚಾರ್ಯೆ ಡಾ ಮಾಯಾ ಮುರಾಳೆ ಡಾ. ಬಸವರಾಜ ಖಂಡಾಳೆ, ವಿವೇಕಾನಂದ ಶಿಂದೆ, ಅಶೋಕರೆಡ್ಡಿ, ಗುರುದೇವಿ ಕಿಚಡೆ, ಶೀತಲ್ ರೆಡ್ಡಿ, ನಾಗರಾಜ ನಾಸೆ, ಕೃಷ್ಣ ಗೌಳಿ, ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಿಪಿಐ ಅಲಿಸಾಬ್ ಅವರು ಪ್ರಥಮ ೫೦೦, ದ್ವಿತೀಯ ೨೦೦ ರುಪಾಯಿಗಳು ಮತ್ತು ಶ್ರೀ ಬಸವೇಶ್ವರ ಪದವಿ ಕಾಲೇಜು ವತಿಯಿಂದ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕ ರೂಪದಲ್ಲಿ ಬಹುಮಾನ ನೀಡಲಾಯಿತು.
ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ರವೀಂದ್ರನಾಥ ಠಾಗೋರ್ ಅವರ ಭಾವಚಿತ್ರಗಳನ್ನು
ಬಿಎಸ್ಸಿ ಮತ್ತು ಬಿಸಿಎ ವಿದ್ಯಾರ್ಥಿಗಳು ಕಾಲೇಜಿಗೆ ಕೊಡುಗೆಯಾಗಿ ನೀಡಿದರು.ಐಕ್ಯುಎಸಿ ಸಂಯೋಜಕ ಪವನ್ ಪಾಟೀಲ ಸ್ವಾಗತಿಸಿದರು.ಗಂಗಾಧರ ಸಾಲಿಮಠ ನಿರೂಪಿಸಿದರು.

























