
ಸೈದಾಪುರ:ನ.೧: ಸಮಗ್ರ ರಾಷ್ಟ್ರದ ಐಕ್ಯತೆ, ಅಖಂಡತೆ ಭದ್ರತೆ, ಮತ್ತು ಸುರಕ್ಷತೆಗಾಗಿ ಶ್ರಮಿಸಿದ ಸರ್ದಾರ್ ವಲ್ಲಭಬಾಯಿ ಪಟೇಲರು ಇಂದು ದೇಶದ ಏಕತೆಯ ಪ್ರತೀಕವಾಗಿದ್ದಾರೆ ಎಂದು ಸೈದಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ವಿನಾಯಕ ನಾಯಕ್ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಏಕತೆಗಾಗಿ ಓಟ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇಶ ಕಟ್ಟುವವರಿಗಿಂತ ದೇಶ ಹೊಡೆಯುವವರೇ ಹೆಚ್ಚಾಗಿರುವ ಈ ದಿನಗಳಲ್ಲಿ ಪಟೇಲರು ಮಾದರಿಯಾಗಿ ನಿಲ್ಲುತ್ತಾರೆ. ಅವರ ದೂರದೃಷ್ಠಿ ಹಾಗೂ ಕಾರ್ಯಗಳ ಮೂಲಕ ಆಧುನಿಕ ಭಾರತ ದೇಶವನ್ನು ಕಾಪಾಡುವ ಕಾರ್ಯ ಪ್ರತಿಯೊಬ್ಬರ ಮೇಲಿದೆ. ಇಂದಿನ ಪೀಳಿಗೆಯವರಿಗೆ ಪಟೇಲರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬರು ಇತರರನ್ನು ಪ್ರೇರೇಪಿಸಬೇಕು ಎಂದರು.
ಇದಕ್ಕೂ ಮೊದಲು ಏಕತೆಗಾಗಿ ಓಟ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಪಟ್ಟಣದ ಠಾಣಾ ಸಿಬ್ಬಂದಿಯವರು, ವಕೀಲರು, ಉದ್ದಿಮೆದಾರರು ವ್ಯಾಪಾರಸ್ಥರು , ಯುವಕರು ಸೇರಿಕೊಂಡು ಠಾಣೆಯಿಂದ ಹೊರವಲಯದ ಆಂಜನೇಯ ದೇವಸ್ಥಾನದವರೆಗೆ ಸಾಗಿ ಮ್ಯಾರಥಾನ್ ಓಟವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಪಿಎಸ್‌ಐ ಭೀಮರಾಯ ಕೂಡ್ಲೂರು, ನ್ಯಾಯವಾದಿ ಸಂತೋಷ ಬಾದಾಮಿ, ಮನೋಹರ ಎನ್, ಆರ್ಯವೈಶ್ಯ ಸೇವಾ ಸಂಘದ ಕಾರ್ಯದರ್ಶಿ ಸುರೇಶ ಪುರಿ, ಪ್ರಭು ಗೂಗಲ್, ಡಾ.ಶಿವಲಿಂಗರೆಡ್ಡಿ, ಶಿಕ್ಷಕ ಬಸವರಾಜ ಹಳೋಳ್ಳಿ, ಶರಣಪ್ಪ ಬೆಳಗುಂದಿ, ಧರ್ಮರಾಜ, ಸಿದ್ದು ಪೂಜಾರಿ, ರಾಘವೇಂದ್ರ ಪತ್ತಿ, ಭೀಮಣ್ಣ ಮಡಿವಾಳ್ಕರ್,ಮಹೇಶ ಜೇಗರ್, ಪೋಲಿಸ್ ಇಲಾಖೆಯ ಬಸವರಾಜ , ಶೇಖರ ಕಣೇಕಲ್, ರಾಜಕುಮಾರ, ನೂರೂದ್ಧಿನ್,ಅವಿನಾಶ ಮನ್ನೆ, ಶಿವುಗೌಡ , ಸೋಮಶೇಖರ್, ವಿನೋದ್ ಐರೆಡ್ಡಿ, ರಾಜು, ಸತೀಶ ಶಿವನೂರ್,ಸೇರಿದಂತೆ ಇತರರಿದ್ದರು.

































