
ಬೀದರ್:ಜೂ.23: “ಯೋಗ ಫಾರ್ ಹೆಲ್ದಿ ಏಜಿಂಗ್” ಧ್ಯೇಯವಾಕ್ಯದಡಿ ಪತಂಜಲಿ ಮಹಿಳಾ ಘಟಕ ಬೀದರ್ ಜಿಲ್ಲೆ, ಅಂತರರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಸಂಘಟನೆ ಹಾಗೂ ರೂಪಾ ಕಲೆ ಸಾಹಿತ್ಯ ಮತ್ತು ಸಾಂಸ್ಕøತಿಕ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ವಿವಿಧ ಶಾಲೆಗಳು ಮತ್ತು ಬಡಾವಣೆಗಳಲ್ಲಿ 10 ದಿನಗಳ ಕೌಂಟ್‍ಡೌನ್ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಜನವಾಡ, ಧೂಪತ ಮಹಾಗಾವ, ಕಮಠಾಣ, ಬೀದರ್ ನಗರದ ವಿವಿಧ ಶಾಲೆಗಳು ಹಾಗೂ ಜ್ಯೋತಿ ಮತ್ತು ಗುಮ್ಮೆ ಬಡಾವಣೆಗಳಲ್ಲಿ ಯೋಗ ತರಬೇತಿ, ಧ್ಯಾನ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಪತಂಜಲಿ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಪಾಟೀಲ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸಾರ್ವಜನಿಕರು ಭಾಗವಹಿಸಿದರು.
ಯೋಗದ ಮಹತ್ವ, ಆರೋಗ್ಯಕರ ಜೀವನಶೈಲಿ ಹಾಗೂ ದೈನಂದಿನ ಯೋಗಾಭ್ಯಾಸದ ಅಗತ್ಯತೆಯ ಕುರಿತು ಅರಿವು ಮೂಡಿಸಲಾಯಿತು. ಮುಂದಿನ ದಿನಗಳಲ್ಲಿಯೂ ಜಿಲ್ಲೆಯ ಇನ್ನಷ್ಟು ಶಾಲೆಗಳು ಮತ್ತು ಬಡಾವಣೆಗಳಲ್ಲಿ ಉಚಿತ ಯೋಗ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ರೂಪಾ ಪಾಟೀಲ್ ತಿಳಿಸಿದ್ದಾರೆ.
ಕಾರ್ಯಕ್ರಮಗಳಲ್ಲಿ ಗೌರೀಶ್ ಪಾಟೀಲ್, ಅನಿಲ್ ಹಂಗರಗಿ, ಮಂಜುಳ ಹಂಗರಗಿ, ರೋಹಿಣಿ ಪಾಟೀಲ್, ಲತಿಕಾ ಸೇಡೋಳೆ, ಪ್ರಿಯಾಂಕಾ ಪಾಟೀಲ್, ಸಂತೋಷ್ ಸರ್, ಸುವರ್ಣ ಚಿಮಕೋಡ, ಶರಣಪ್ಪ ಚಿಮಕೋಡ, ಭಾರತಿ ಪಾಟೀಲ್, ಪ್ರತಿಭಾ ಡಿ., ಶಶಿಕಲಾ ಸಂಗ್ರಾಮ್, ವಿದ್ಯಾವತಿ ಹಿರೇಮಠ, ಆನಂದ್ ಉದಗಿರ, ಪ್ರಕಾಶ್ ಕನಜೋಳೆ, ಸುನಿಲ್ ವೈಜಾಪುರೆ, ಡಾ. ಸುಜಾತಾ ಹೊಸಮನಿ, ನಾಗನಾಥರಾವ್, ಮಾಸ್ಟರ್ ನಿಂಗಣ್ಣ, ರುಕ್ಮಿಣಿ ಮೇಡಂ, ರಾಜಕುಮಾರ್ ಪಾಟೀಲ್, ಜಗನ್ನಾಥ್ ಸರ್, ಚಂದ್ರಕಾಂತ್ ನೀಡೋದಕರ, ಸಾಧನಾ ಗಣಪುರ, ಲಕ್ಷ್ಮೀ ಬಿರಾದಾರ, ರಾಜಕುಮಾರಿ ಅಗರ್ವಾಲ್, ಸಂಧ್ಯಾ ಪಾಟೀಲ್, ಲೀನಾ ಅಗ್ರವಾಲ್, ನೀಲಿಮಾ ಕುಲಕರ್ಣಿ, ವಸುಂಧರಾ ಚಂಗಲೇರಾ, ಸರಳ ಮಾನಕಾರಿ, ನಿಕಿತಾ ಹಂಗರಗಿ, ವನಿತಾ ಬಚ್ಚಾ, ರಶ್ಮಿ ರಾಮತೀರ್ಥ, ವಿಜಯ ರಂಗದಾಳ್, ಗೀತಾ ಹಂಗರಗಿ, ಲಲಿತಾ ಹಂಗರಗಿ, ವಿದ್ಯಾ ಸ್ವಾಮಿ, ವಿಜಯ ಸ್ವಾಮಿ, ಪ್ರೇಮಿಲಾ ಚೋಳಕರ್, ಪದ್ಮಾ ಚಂದರಗಿ, ಶ್ರಾವಂತಿ ಬಚ್ಚಾ, ಶ್ರಾವಣಿ ಬಚ್ಚಾ, ರಾಣಿ ಪಾಟೀಲ್, ರಾಜೇಶ್ವರಿ ಬಿರಾದಾರ, ಅನ್ನಪೂರ್ಣ ಲಕ್ಷೆಟ್ಟ, ಸಿಂಚನ ಪಾಟೀಲ್, ಗೋರಖನಾಥ್ ಕುಂಬಾರ, ಮಲ್ಲಿಕಾರ್ಜುನ ಪಾಟೀಲ್, ಶ್ರೀನಿವಾಸ ಬಿರಾದಾರ ಹಾಗೂ ರಾಣಿ ಗಾಜಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.





























