
ಕೆಂಭಾವಿ:ನ.9: ಪಟ್ಟಣದ ಪುರಸಭೆ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡ ಕೆಂಭಾವಿ ಪ್ರಿಮಿಯರ್ ಲೀಗ್ ಕಬಡ್ಡಿ ಪಂದ್ಯಾವಳಿಯನ್ನು ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೆÇಲೀಸಪಾಟೀಲ ಉದ್ಘಾಟಿಸಿದರು.
ಕೆಂಭಾವಿ
ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಕ್ರೀಡಾಸ್ಪೂರ್ತಿಯಿಂದ ಆಟದಲ್ಲಿ ಭಾಗವಹಿಸಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೆÇಲೀಸ ಪಾಟೀಲ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡ ಕೆಂಭಾವಿ ಪ್ರಿಮಿಯರ್ ಲೀಗ್ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ನಿರ್ಣಾಯಕರ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರಬೇಕು. ಆಟದಲ್ಲಿ ಯಾವದೇ ಗೊಂದಲಕ್ಕೆ ಆಸ್ಪದ ನೀಡದಂತೆ ಟೂರ್ನಿಯನ್ನು ನಡೆಸಿಕೊಂಡು ಹೋಗಬೇಕು. ಕಬಡ್ಡಿಯಂತಹ ಗ್ರಾಮೀಣ ಕ್ರೀಡೆಗಳನ್ನು ಹೆಚ್ಚು ಹೆಚ್ಚು ಯುವಕರು ಆಡುವಂತಾಗಬೇಕು ಎಂದು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ ಮಾತನಾಡಿ, ಕ್ರೀಡೆಗಳನ್ನು ಉತ್ತಮವಾಗಿ ಆಯೋಜನೆ ಮಾಡುವವರಿದ್ದರೆ ದೇಣಿಗೆ ಕೊಡುವವರು ಸಾಕಷ್ಟು ಜನರಿದ್ದಾರೆ ಎಂಬುದಕ್ಕೆ ಈ ಟೂರ್ನಾಮೆಂಟ್ ಉತ್ತಮ ಉದಾಹರಣೆ. ಯುವಕರು ದುಶ್ಚಟಕ್ಕೆ ಬಲಿಯಾಗದೆ ಇಂತಹ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಹಿರೇಮಠದ ಷ.ಬ್ರ.ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಖಂಡರಾದ ಪುರಸಭೆ ಅಧ್ಯಕ್ಷ ರಹೆಮಾನ ಪಟೇಲ ಯಲಗೋಡ, ಶಿವನಗೌಡ ಮಾಲಿಪಾಟೀಲ, ವಿಲಾಸರಾವ ದೇಶಪಾಂಡೆ, ವಿರೇಂದ್ರ ಧರಿ, ಸಾಹೇಬಲಾಲ ನಾಶಿ, ಪಿಎಸ್‍ಐ ಹಣಮಂತ ಮ್ಯಾಗೇರಿ, ಯಲಗೋಡ, ರಾಮನಗೌಡ ಪೆÇಲೀಸ ಪಾಟೀಲ, ಶರಣಪ್ಪ ಯಾಳಗಿ, ರವಿ ಸೊನ್ನದ, ರಾಘವೇಂದ್ರ ಕವಲ್ದಾರ, ಶಿವಪ್ಪ ಕಂಬಾರ, ಸಿದ್ದು ಡಿಗ್ಗಾವಿ, ಸರ್ವದ ಡಿಗ್ಗಾವಿ, ಶಶಿಕುಮಾರ ನಾಯಕ, ವಿರೇಶ ಭಜಂತ್ರಿ, ಕಮಿಟಿ ಸದಸ್ಯರಾದ ಸಂಗಮೇಶ ಆಲಗೂರ, ಶರಣು ಸಾಹುಕಾರ, ರಾಘವೇಂದ್ರ ಹುಜರತಿ, ಮಂಜುನಾಥ ಕವಲ್ದಾರ, ತೋಟಪ್ಪ ಕವಲ್ದಾರ, ಮಂಜುನಾಥ ಮೋಪಗಾರ, ಮಾರುತಿ ಮೋಪಗಾರ, ಮೊಹಶಿನ್ ನಾಶಿ, ಜಾಕೀರ ನಾಶಿ ಸೇರಿದಂತೆ ಅನೇಕರಿದ್ದರು.
ಎಸ್‍ಬಿಡಿ ಅಭಿಮಾನಿಗಳ ಬಳಗದಿಂದ ಪ್ರಥಮ ಬಹುಮಾನ ರೂ.25 ಸಾವಿರ ಹಾಗೂ ಕಪ್ ಮತ್ತು ದ್ವಿತೀಯ ಬಹುಮಾನ ರೂ.15 ಸಾವಿರ ಹಾಗೂ ಕಪ್ ನೀಡಿದ್ದಾರೆ. ರೇವಣಸಿದ್ದಯ್ಯ ಮಠ ನಿರೂಪಿಸಿದರು.

























