
ಜಮಖಂಡಿ:ಜ.28: ತಾಲೂಕಿನ ಮಧುರಖಂಡಿ ಗ್ರಾಮದ ಸಾಯಿ ಸಂಕಲ್ಪ ಅಂತರ ರಾಷ್ಟ್ರೀಯ ಶಾಲೆಯಲ್ಲಿ ಆಯೋಜಿಸಿದ್ದ ಮಾತಾ ಪಿತೃ ವಂದನಾ ಕಾರ್ಯಕ್ರಮವು ತುಂಬಾ ಭಾವನಾತ್ಮಕ ಮತ್ತು ಪ್ರೇರಣಾದಾಯಕವಾಗಿತ್ತು. ಮಕ್ಕಳು ತಮ್ಮ ತಂದೆ ತಾಯಿಯ ಪಾದ ಪೂಜೆ ಮಾಡುವ ಮೂಲಕ ಅವರ ಬಗ್ಗೆ ಗೌರವ ಮತ್ತು ಕೃತಜ್ಞತೆ ವ್ಯಕ್ತಪಡಿಸಿದರು.
ಇದರಲ್ಲಿ ವಿಷೇಶವಾಗಿ ಜಮಖಂಡಿಯ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಮಲ್ಲು ಗಣಾಚಾರಿ ಧರ್ಮಪತ್ನಿ ರಾಜೇಶ್ವರಿ ಅವರು ತಮ್ಮ ಹೆಣ್ಣು ಮಗುವಿಗೆ ಪಾದ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದರು. ಇದು ಹೆಣ್ಣು ಮಕ್ಕಳ ಮಹತ್ವ ಮತ್ತು ಅವರ ಬಗ್ಗೆ ಇರುವ ಗೌರವವನ್ನು ತೋರಿಸುತ್ತದೆ.
ಹೆಣ್ಣು ಮಗು ಮನೆಯ ಬೆಳಗುವ ದೀಪ ಮತ್ತು ಮನೆಯ ಮಹಾಲಕ್ಷ್ಮಿ ಎಂಬ ಮಾತುಗಳು ನಿಜವಾಗಿಯೂ ಭಾರತೀಯ ಸಂಸ್ಕøತಿಯಲ್ಲಿ ಆಳವಾಗಿ ಬೇರೂರಿವೆ. ಹೆಣ್ಣು ಮಕ್ಕಳು ಮನೆಯ ಸೌಭಾಗ್ಯ ಮತ್ತು ಸಂಸ್ಕಾರದ ಪ್ರತೀಕವಾಗಿದ್ದಾರೆ. ಅವರು ಮನೆಯಲ್ಲಿ ಸದಾ ಸಂಭ್ರಮವನ್ನು ತರುತ್ತಾರೆ ಮತ್ತು ಅವರ ಉಪಸ್ಥಿತಿ ಮನೆಯನ್ನು ಸ್ವರ್ಗವನ್ನಾಗಿ ಮಾಡುತ್ತದೆ.
ಹೆಣ್ಣು ಮಕ್ಕಳು ಕೇವಲ ಮನೆಗೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಅವರು ಶಿಕ್ಷಣ, ಕ್ರೀಡೆ, ವಿಜ್ಞಾನ, ರಾಜಕೀಯ ಮತ್ತು ಇತರ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ.
ದೇವತೆಗಳು ಹೆಣ್ಣು ಮಕ್ಕಳಾಗಿ ಹುಟ್ಟುತ್ತಾರೆ ಮತ್ತು ಯಾವ ಮನೆಯಲ್ಲಿ ಹೆಣ್ಣು ಮಗು ಹುಟ್ಟುತ್ತಾಳೋ ಆ ಮನೆ ನಂದಾದೀಪವಾಗುತ್ತದೆ ಎಂಬ ನಂಬಿಕೆ ನಿಜಕ್ಕೂ ಸತ್ಯವಾಗಿದೆ.




























