
ವಿಜಯಪುರ:ಮೇ.೨೭:ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಸ್ಪರ್ಧಾತ್ಮಕ ತರಬೇತಿಯನ್ನು ಕೊಡುವುದರಿಂದ ಭವಿಷ್ಯದಲ್ಲಿ ಅವರು ಉತ್ತಮ ಜ್ಞಾನವನ್ನು ಹೊಂದಿ ದೊಡ್ಡ ದೊಡ್ಡ ಅಧಿಕಾರಿಗಳಾಗಲು ಸಾಧ್ಯ, ಕನಕ ನವೋದಯ ಕೋಚಿಂಗ್ ಸೆಂಟರ್ ನಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ವಿವಿಧ ವಸತಿ ಶಾಲೆಗಳಿಗೆ ಆಯ್ಕೆ ಆಗಿದ್ದು ಹೆಮ್ಮೆಯ ಸಂಗತಿ, ಈ ಕನಕ ಪಬ್ಲಿಕ್ ಶಾಲೆಯು ಒಳ್ಳೆಯ ಪ್ರತಿಭಾವಂತ ಆಡಳಿತ ಮಂಡಳಿಯನ್ನು ಮತ್ತು ಶಿಕ್ಷಕರನ್ನು ಒಳಗೊಂಡಿದೆ ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಲು ಮುಂದಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಹೇಶ ಪೋದ್ದಾರ ಹೇಳಿದರು.
ಅವರು ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪಬ್ಲಿಕ್ ಸ್ಕೂಲ್ ಹಾಗು ನವೋದಯ ಕೋಚಿಂಗ್ ಸೆಂಟರ್ ನಲ್ಲಿ ಹಮ್ಮಿಕೊಂಡ ವಿವಿಧ ವಸತಿ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕೆಯನ್ನು ನೀಡುವುದರ ಮುಖೇನ ಅವರ ಸರ್ವಾಂಗಿನ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನ ನೀಡಲು ಮುಂದಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ್ ವಾಲಿಕರ ಮಾತನಾಡಿ ತಂದೆ, ತಾಯಿ, ಶಿಕ್ಷಕರು ಮಕ್ಕಳ ಪಾಲಿನ ಹೀರೋ ಹೀರೋಯಿನ್‌ರು, ನಮ್ಮ ಬದುಕಿನ ರೀತಿ ಮಕ್ಕಳ ಮೇಲೆ ಪರಿಣಾಮವನ್ನು ಬೀರುತ್ತದೆ. ತಂದೆ, ತಾಯಿ, ಶಿಕ್ಷಕರು ಮಕ್ಕಳಿಗೆ ಆದರ್ಶವಾಗಿರಬೇಕು, ಕನಕ ಪಬ್ಲಿಕ್ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರವು ಮಕ್ಕಳಿಗೆ ಸಿಗುತ್ತದೆ ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ. ಕುಶಾಲ ಬರಗೂರು ಮಾತನಾಡಿ ಇವತ್ತು ಮಕ್ಕಳಿಗೆ ಓದುವ ಅಭಿರುಚಿಯನ್ನ ಮೂಡಿಸಬೇಕೆಂದು ಹೇಳಿದರು. ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕ ರವಿ ಕಿತ್ತೂರು ಮಾತನಾಡಿ ಮೊಬೈಲ್ ಟಿವಿಗಳ ಗೀಳು ಕಡಿಮೆ ಮಾಡಿ ಪುಸ್ತಕ ಓದುವ ಪ್ರೀತಿಯನ್ನು ಹೊಂದಬೇಕೆAದು ಹೇಳಿದರು. ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಸಂಗಮೇಶ ಚೂರಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಏಕಾಗ್ರತೆಯನ್ನು ಹೊಂದಬೇಕೆAದು ಹೇಳಿದರು.
ಮುರಾರ್ಜಿ ಮತ್ತು ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆ, ಸುವರ್ಣಮುಖಿ ವಸತಿ ಶಾಲೆ ಹಾಗೂ ವಿವಿಧ ವಸತಿ ಶಾಲೆಗೆ ಆಯ್ಕೆಯಾದ ಮಕ್ಕಳಿಗೆ ಮತ್ತು ೧೦ನೆಯ ತರಗತಿಯಲ್ಲಿ ಅತ್ಯುತ್ತಮ ರಾಂಕ್ ಪಡೆದುಕೊಂಡ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಜಯಪ್ರಭು ಕೊಳಮಲಿ, ವಿ. ಜಿ. ಹಗರಗೊಂಡ, ಎಲ್. ಕೆ. ಬಿರಾದಾರ, ಬಾಬು ತಳೇವಾಡ, ಪ್ರೊ. ಎ. ಎಚ್. ಕೊಳಮಲಿ, ವಿಠ್ಠಲ ಮಾನೆ, ಪಾಟ್ಲು ಕರಾಡೆ, ಸುಭಾಷ್ ಪವಾರ, ವಿಠ್ಠಲಗೌಡ ಬಿರಾದಾರ, ಯಲ್ಲುಗೌಡ ಬಿರಾದಾರ, ರಾಮಸ್ವಾಮಿ ಕೊಳಮಲಿ, ಶ್ರೀಶೈಲ್ ಕಂಬಳಿ, ಸಿದ್ದಪ್ಪ ಕಂಬಳಿ, ಸಂಗಮೇಶ ಕೊಳಮಲಿ, ಗಣಪತಿ ಒಡೆಯರ, ಸಿದ್ದಪ್ಪ ಪೂಜಾರಿ, ಬಾಜೀರಾಯ ಕರೆ ಉಪಸ್ಥಿತರಿದ್ದರು.
ಶಿಕ್ಷಕಿ ಲಕ್ಷ್ಮಿ ಮುಂಜೇಲಿ ಸ್ವಾಗತಿಸಿದರು, ಶಿಕ್ಷಕಿ ಸುಧಾರಾಣಿ ಬಿರಾದಾರ ನಿರೂಪಿಸಿ ವಂದಿಸಿದರು.


























