ಪಾಲಕರು ಮಕ್ಕಳಿಗೆ ಸಂಸ್ಕಾರ ಕೊಡಿ ; ಬಿಕೆ ಪಾರ್ವತಿ ಬೆಹೆನ್‍ಜೀ

ಬೀದರ:ಜ.24: ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೀದರ ನಗರದ ರಾಂಪೂರೆ ಕಾಲೋನಿಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಕೇಂದ್ರದಲ್ಲಿ ವಿಶೇಷ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಸುದ್ದಿಸಮಯ ನ್ಯೂಜ್ ಗೌರವ ಸಂಪಾದಕರಾದ ಶ್ರೀಮತಿ ಅರುಣಾ ರವೀಂದ್ರ ಸ್ವಾಮಿಯವರು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.
ಕೇಂದ್ರದ ಪ್ರಮುಖರಾದ ಬಿಕೆ ಪಾರ್ವತಿ ಬೆಹೆನ್‍ಜೀಯವರು ಮಾತನಾಡುತ್ತ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಜವಾಬ್ದಾರಿ ಪಾಲಕರ ಮೇಲಿದೆ. ನಾವು ಹೇಗೆ ನಡೆದುಕೊಳ್ಳುತ್ತೇವೆಯೋ ಹಾಗೆಯೇ ಅವರು ಕೂಡಾ ವರ್ತಿಸುತ್ತಾರೆ. ನಾವು ಮೊಬೈಲ್ ಹಿಡಿದು ಕುಳಿತರೆ ಅವರೂ ಮೊಬೈಲ್ ಹಿಡಿಯುತ್ತಾರೆ. ನಾವು ಪುಸ್ತಕ ಓದಲು ಕುಳಿತರೆ ಅವರೂ ಪುಸ್ತಕ ಹಿಡಿಯುತ್ತಾರೆ. ಹೀಗಾಗಿ ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳು ನಾವಾಗಬೇಕೇ ವಿನಃ ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಅವರನ್ನು ಹಾಳು ಮಾಡಬಾರದು. ಹೆಜ್ಜೆ ಹೆಜ್ಜೆಗೂ ಮಕ್ಕಳ ಮೇಲೆ ನಿಗಾ ಇಡಬೇಕು. ಇಂದಿನ ಕಾಲದಲ್ಲಿ ಮಕ್ಕಳು ಸಣ್ಣ ಸಣ್ಣ ವಿಷಯಕ್ಕೂ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿರುವ ಉಹಾಹರಣೆಗಳು ನಮ್ಮ ಮುಂದಿವೆ. ಮಕ್ಕಳನ್ನು ಕಣ್ಮುಂದೆ ಸಂಸ್ಕಾರದಿಂದ ಬೆಳೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಸವಿ ಯೂಥ್ ಕ್ಲಬ್ ಅಧ್ಯಕ್ಷೆ ಶೃತಿ ಕೊಟಾರ್ಕಿ ಪೆÇೀಕಲ್ವಾರ್, ಜಾಯ್ ಕಿಡ್ಸ್ ಶಾಲೆಯ ಅಧ್ಯಕ್ಷೆ ಸಂಧ್ಯಾ ಸಿ.ಪಾಟೀಲ, ಎಂ.ಎಸ್.ಪಾಟೀಲ ಫಂಕ್ಷನ್ ಹಾಲ್‍ನ ಪ್ರಮುಖರಾದ ಕವಿತಾ ವಿಜಯಕುಮಾರ ಪಾಟೀಲ ಸೇರಿದಂತೆ ಕಾರ್ಯಕ್ರಮದಲ್ಲಿ ಕೇಂದ್ರದ ಸಹೋದರ ಸಹೋದರಿಯರು ಹಾಗೂ ವಿವಿಧ ಕಡೆಗಳಿಂದ ಆಗಮಿಸಿದ ಭಕ್ತರು ಉಪಸ್ಥಿತರಿದ್ದರು.