
ವಿಜಯಪುರ:ಮೇ.30:ಕೆಪಿಎಸ್ ಮ್ಯಾಗ್ನೆಟ್ ಕಾಖಂಡಕಿ ಗ್ರಾಮದ. ದಳವಾಯಿ ವಸ್ತಿ ಶಾಲೆ ಮುಚ್ಚದಿರಲು ಆಗ್ರಹಿಸಿ ಪಾಲಕರು ಹಾಗೂ ವಿದ್ಯಾರ್ಥಿಗಳು ಸೇರಿ, ಎಐಡಿಎಸ್‍ಓ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಶಾಲೆಯ ಮುಂದೆ ‘ನಮ್ಮೂರ ಶಾಲೆ ನಮ್ಮದು, ನಮ್ಮೂರಲ್ಲೆ ಉಳಿಯಲಿ’ ಎಂಬ ಬ್ಯಾನರ್ ಕಟ್ಟಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿ ಎಐಡಿಎಸ್‍ಓ ಸಂಘಟನೆಯ ರಾಜ್ಯ ಮುಖಂಡರಾದ ಗೋವಿಂದ “ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಇಂದ ಬರುತ್ತಿರುವ ದುಡ್ಡಿಗೋಸ್ಕರ ಕೆಪಿಎಸ್ ಮ್ಯಾಗ್ನೆಟ್ ಹೆಸರಲ್ಲಿ ಸರ್ಕಾರ ಶಾಲೆ ಮುಚ್ಚಲು ಹೊರಟಿರುವುದು ಖಂಡನೀಯ. ಒಂದು ನಾಗರಿಕ ಸಮಾಜ ಸೃಷ್ಟಿಸಲು ಕಾರಣವಾಗುವ ಶಿಕ್ಷಣ ನೀಡಲು ಶಾಲೆಗಳು ಅವಶ್ಯಕ. ವಸ್ತಿ ಶಾಲೆಗಳು ಬಂದಾದರೆ ಶಿಕ್ಷಣಕ್ಕಾಗಿ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ದೂರದ ಶಾಲೆಗೆ ಹೋಗುವುದು ಎಷ್ಟು ದುಷ್ಟರ ಎಂಬುದು ಪ್ರತಿಯೊಬ್ಬ ಪಾಲಕರಿಗೂ ಗೊತ್ತು. ಶಿಕ್ಷಣ ಎಂಬುದು ಲಾಭ ನಷ್ಟವನ್ನು ನೋಡುವ ಕ್ಷೇತ್ರವಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಶಿಕ್ಷಣ ಅವಶ್ಯಕ ಎಂಬುದನ್ನು ಮನಗಂಡು ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ಎಂದರು.
” ನಾವು ಕಟ್ಟುವ ಪ್ರತಿಯೊಂದು ತೆರಿಗೆಯ ಹಣವು ಜನಪರ ಕೆಲಸಕ್ಕೆ ಖರ್ಚಾಗಬೇಕು. ಪ್ರತಿಯೊಬ್ಬ ಬಡವರ ಮಕ್ಕಳಿಗೂ ಶಿಕ್ಷಣ ಸಿಗುವಂತೆ ಆಗಬೇಕು. ಖಾಲಿ ಇರುವ 60 ಸಾವಿರ ಶಿಕ್ಷಕರ ಹುದ್ದೇಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು.” ಎಂದು ಆಗ್ರಹಿಸಿದರು.
ಪ್ರತಿಭಟನಾ ಸಭೆಯಲ್ಲಿ ದಳವಾಯಿ ವಸ್ತಿಯ ಶಾಲೆಯ ಉಳಿಸಿ ಅಧ್ಯಕ್ಷರಾದ ಸೋಮು ಅಡವಿ,ನಾರಾಯಣಪ್ಪ ಶ್ಯಾವಕ್ಕ, ಸುರೇಖಾ ತಾಂಬೆ, ಲಕ್ಷ್ಮೀ ಸೋನುಬಾಯಿ, ಚಗುನ ರಮೇಶ ಇನ್ನಿತರರು ರೈತ ಮಯಖಂಡರು ಹಾಗೂ ವಿದ್ಯಾರ್ಥಿಗಳು ಇದ್ದರು.


























