Home ಜಿಲ್ಲೆ ಕಲಬುರಗಿ ಶಿಶು ಸಾಹಿತ್ಯದ ಜನಕ ಪಂಜೆ ಮಂಗೇಶರಾಯರು

ಶಿಶು ಸಾಹಿತ್ಯದ ಜನಕ ಪಂಜೆ ಮಂಗೇಶರಾಯರು

ಕಲಬುರಗಿ: ಫೆ.೨೩:ಇಂದಿನ ಮಕ್ಕಳೇ ನಾಳಿನ ನಾಗರಿಕರಾಗಿರುವದರಿಂದ ಬಾಲ್ಯದಲ್ಲಿಯೇ ಅವರಿಗೆ ಮೌಲ್ಯಗಳನ್ನು ಬಿತ್ತುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಅನೇಕ ಮೌಲ್ಯಗಳುಳ್ಳ ಸಣ್ಣ ಕಥೆಗಳನ್ನು ಸರಳವಾಗಿ ತಿಳಿಯುವಂತೆ ರಚಿಸಿ ಮಕ್ಕಳ ಸಾಹಿತ್ಯದ ಜನಕರೆನಿಸಿಕೊಂಡ ಪಂಜೆ ಮಂಗೇಶರಾಯರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ನ್ಯೂ ರಾಘವೇಂದ್ರ ಕಾಲನಿಯ ‘ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಪಂಜೆ ಮಂಗೇಶರಾಯರ ೧೫೨ನೇ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಮಂಗೇಶರಾಯರು ಸಣ್ಣಕಥೆ, ಹರಟೆ, ಕಥನಕವನ ಕ್ಷೇತ್ರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಉಪಧ್ಯಾಯರಾಗಿ, ಲೇಖಕಖರಾಗಿ ಸೇವೆ ಸಲ್ಲಿಸಿದ್ದಾರೆ. ಬ್ರಿಟಿಷ್ ವಸಾಹತುಶಾಹಿಗೆ ಬಹಳ ಸ್ಪಷ್ಟವಾಗಿ ಪ್ರತಿಕ್ರಿಯಿಸಿದ ಕನ್ನಡ ಕವಿಗಳಲ್ಲಿ ಪ್ರಮುಖರಾಗಿದ್ದಾರೆ. ಇವರು ಅನೇಕ ಕೃತಿಗಳನ್ನು ರಚಿಸಿ, ಪ್ರಶಸ್ತಿ, ಪುರಷ್ಕಾರಕ್ಕೆ ಭಾಜನರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ, ಶಿಕ್ಷಕ ಆದಶ್ ವಡ್ಡನಕೇರಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.