
ಚಿತ್ತಾಪುರ: ಶ್ರಾವಣ ಮಾಸದ ಅಂತ್ಯದ ಸಂದರ್ಭದಲ್ಲಿ ನಾಲವಾರ ಗ್ರಾಮದಲ್ಲಿ ಶ್ರೀ ಕೋರಿ ಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಡಾ. ಸಿದ್ಧ ತೋಟೆಂದ್ರ ಮಹಾಸ್ವಾಮಿಗಳನ್ನು ಪಲ್ಲಕ್ಕಿಯ ಮೂಲಕ ಶ್ರೀಮಠದಿಂದ ಮೂಲ ಮನೆಯವರಿಗೆ ಮೆರವಣಿಗೆಯನ್ನು ಮಾಡಲಾಯಿತು, ಬಿಜಾಪುರ ಕಲಾತಂಡದಿಂದ ರಸ್ತೆಯುದ್ಧಕ್ಕೂ ನೃತ್ಯ ಪ್ರದರ್ಶಿಸಲಾಯಿತು ಗ್ರಾಮದ ಭಕ್ತಾದಿಗಳು ಪಲ್ಲಕ್ಕಿಗೆ ನೀರು ಸಮರ್ಪಿಸುವುದರ ಮೂಲಕ ಗುರುಗಳ ಆಶೀರ್ವಾದಕ್ಕೆ ಪ್ರಾಪ್ತರಾದರು. ಭಕ್ತಾದಿಗಳ ಹರ್ಷದ್ಗಾರ ಕಲಾತಂಡದ ನೃತ್ಯ ಹಾಗೂ ಮೇಳ ನಾಧ್ಯಗಳ ಮಧ್ಯೆ ಕೈಲಾಸವೆ ದರಗಿಳಿದ ದೃಶ್ಯ ಅವತರಿಸಿದಂತೆ ಆಯಿತು























