Home ಜಿಲ್ಲೆ ಬೆಂಗಳೂರು ವಿವಿಧ ದೇವರುಗಳ ಪಲ್ಲಕ್ಕಿ ಉತ್ಸವಗಳು

ವಿವಿಧ ದೇವರುಗಳ ಪಲ್ಲಕ್ಕಿ ಉತ್ಸವಗಳು

ವಿಜಯಪುರ.ಮಾ೯: ಪಟ್ಟಣದ ಶ್ರೀ ಧರ್ಮರಾಯಸ್ವಾಮಿ ದ್ರೌಪತಮ್ಮನವರ ಹೂವಿನ ಕರಗ ಮಹೋತ್ಸವದ ಅಂಗವಾಗಿ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ವಿವಿಧ ದೇವರುಗಳ ಪಲ್ಲಕ್ಕಿ ಉತ್ಸವ ಆಗಮಿಸಿದ್ದು, ಹೂವಿನ ಪಲ್ಲಕ್ಕಿ, ಮುತ್ತಿನ ಪಲ್ಲಕ್ಕಿ, ವಿವಿಧ ವಿದ್ಯುತ್ ದೀಪ ಅಲಂಕಾರಗಳಿಂದ ಅಲಂಕೃತಗೊಂಡ ಪಲ್ಲಕ್ಕಿಗಳು, ಪಟ್ಟಣದ ಮುಖ್ಯಬೀದಿಗಳಲ್ಲಿ ಸಂಚರಿಸಿ ಎಲ್ಲರನ್ನೂ ಆಕರ್ಷಿಸಿತು.


ಪುರಸಭಾ ಮಾಜಿ ಅಧ್ಯಕ್ಷ ಲೇಟ್ ಚಿನ್ನಯ್ಯನವರ ಮಗ ಪ್ರಶಾಂತ್ ರವರು ವಿನಾಯಕ ಸ್ವಾಮಿ ಪಲ್ಲಕ್ಕಿ ಉತ್ಸವವನ್ನು, ಲೇಟ್ ವಿ ಗೋಪಾಲ್ರವರ ಮಕ್ಕಳು ದ್ರೌಪತಮ್ಮ ಅರ್ಜುನ ಸ್ವಾಮಿ ಪಲ್ಲಕ್ಕಿ ಉತ್ಸವವನ್ನು, ಎಂ ರಮೇಶ್, ಕೃಷ್ಣಪ್ಪ, ಚನ್ನಕೃಷ್ಣಪ್ಪ ರವರುಗಳು ಭೀಮ ಸ್ವಾಮಿ ಪಲ್ಲಕ್ಕಿ ಉತ್ಸವವನ್ನು, ಶ್ರೀ ಕ್ಷೇತ್ರ ಹಾರ್ಡಿಪುರದಿಂದ ಶ್ರೀನಿವಾಸಪ್ ರವರು ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವವನ್ನು, ಸಂತೆ ಮೈದಾನದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ವತಿಯಿಂದ ಅಯ್ಯಪ್ಪ ಸ್ವಾಮಿ ಪಲ್ಲಕ್ಕಿ ಉತ್ಸವ, ಸಫಲಮ್ಮ ದೇವಿ ಪಲ್ಲಕ್ಕಿ ಉತ್ಸವವನ್ನು ಸುರೇಶ್ ಮತ್ತು ವೆಂಕಟೇನಹಳ್ಳಿ ಗ್ರಾಮಸ್ಥರು ನಡೆಸಿಕೊಟ್ಟರು.


ದಂಡಿಗನಹಳ್ಳಿ ಗ್ರಾಮಸ್ಥರಿಂದ ಶ್ರೀ ಗಂಗಮ್ಮ ತಾಯಿ ಪಲ್ಲಕ್ಕಿ ಉತ್ಸವ, ಮಿತ್ತನಹಳ್ಳಿ ಯಲವಳ್ಳಿ ಗ್ರಾಮಸ್ಥರಿಂದ ಗ್ರಾಮ ದೇವತೆ ಶ್ರೀ ತೋಪಮ್ಮ ದೇವಿ ಪಲ್ಲಕ್ಕಿ ಉತ್ಸವ, ಚೆಂದೇನಹಳ್ಳಿ ರಾಜಣ್ಣನವರು ಶ್ರೀ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವವನ್ನು, ಮುನಿಕೃಷ್ಣ, ರಾಮಕೃಷ್ಣ, ಕುಮಾರ್, ಅಂಗಡಿ ರಮೇಶ್ ರವರುಗಳು ಮಹೇಶ್ವರಮ್ಮ ದೇವಿ ಪಲ್ಲಕ್ಕಿ ಉತ್ಸವವನ್ನು, ಕರಗದ ಪೂಜಾರಿಗಳಾದ ಭೀಮಣ್ಣ ಹಾಗೂ ದೇವಾಲಯದ ಪೂಜಾರಿಗಳಾದ ಲೇಟ್ ಕೇಶವಣ್ಣನವರ ಕುಟುಂಬದವರು ದಂಡು ಮಾರಮ್ಮ ದೇವಿ ಪಲ್ಲಕ್ಕಿ ಉತ್ಸವವನ್ನು, ಪುರದ ಶನಿ ಮಹಾತ್ಮ ಸ್ವಾಮಿ ದೇವಾಲಯದ ಕಿರಣ್ ಸ್ವಾಮಿಗಳು ಪುರ ಗ್ರಾಮದ ಶನಿಮಹಾತ್ಮ ಸ್ವಾಮಿ ಪಲ್ಲಕ್ಕಿ ಉತ್ಸವವನ್ನು ನಡೆಸಿಕೊಟ್ಟಿದ್ದು, ಒಂದೊಂದು ಪಲ್ಲಕ್ಕಿಗಳು ವಿವಿಧ ರೀತಿಯ ವಿನ್ಯಾಸಗಳಿಂದ ಆಕರ್ಷಣೀಯವಾಗಿತ್ತು