ತಾಳಿಕೋಟೆ:ಅ.10: ಕಳೆದ 2 ವರ್ಷಗಳಿಂದ ಲಾಗಾಯತ ದೃಶ್ಯಬಿಂಬ ಕಲಾಪ್ರತಿಷ್ಠಾನ ವಿಜಯಪುರ ಅವರು ಶ್ರೀ ಖಾಸ್ಗತೇಶ್ವರ ಪವಾಡಗಳನ್ನು ಚಿತ್ರಿಸುವ ಕುರಿತು ನಮ್ಮ ನದುರಿಗೆ ತಂದಿದ್ದರು ಅದು ಇತ್ತೀಚಿನ ದಿನಗಳಲ್ಲಿ ಆ ಕಾರ್ಯ ದೃಶ್ಯಬಿಂಬ ಕಲಾಪ್ರತಿಷ್ಠಾನ ವಿಜಯಪುರ ಹಾಗೂ ಶ್ರೀ ಖಾಸ್ಗತೇಶ್ವರ ಮಠದ ಸಂಯೋಗದೊಂದಿಗೆ ಇಂದು ನುರಿತ ಕಲಾವಿದರಿಂದ ವಿವಿಧ ಪವಾಡಗಳ ಚಿತ್ರಗಳನ್ನು ಬಿಡಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿರುವದು ಸಂತಸ ತಂದಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗದೇವರು ನುಡಿದರು.
ಗುರುವಾರರಂದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಸಭಾ ಭವನದಲ್ಲಿ ಕಳೆದ 5 ದಿನಗಳಿಂದ ದೃಶ್ಯಬಿಂಬ ಕಲಾ ಪ್ರತಿಷ್ಠಾನ ವಿಜಯಪುರ ಶ್ರೀ ಖಾಸ್ಗತೇಶ್ವರ ಮಠ ಸಂಯೋಗದೊಂದಿಗೆ ಏರ್ಪಡಿಸಲಾದ ರಾಜ್ಯಮಟ್ಟದ ಚಿತ್ರಕಲಾ ಶಿಭಿರದ ಮುಕ್ತಾಯ ಸಮಾರಂಭವನ್ನು ದೀಪಬೆಳಗಿಸುವದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಶ್ರೀಗಳು ಪೇಟಿಂಗ್ ಎಂಬುದು ಈಗಾಗಲೇ 13 ಜನ ನುರಿತ ಕಲಾವಿದರು ಶ್ರೀ ಖಾಸ್ಗತರ ವಿರಕ್ತ ಮಹಾಸ್ವಾಮಿಗಳ ಪವಾಡಗಳನ್ನು ಚಿತ್ರಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಲ್ಲದೇ ಈ ಹಿಂದೆ ಗತಿಸಿಹೋದಂತಹ ಇತಿಹಾಸ ಮರುಕಳಿಸುವಂತೆ ಮಾಡಿರುವದನ್ನು ನೋಡಿದರೆ ಈ ಕಾರ್ಯ ಶಾಶ್ವತವಾಗಿ ಶ್ರೀ ಮಠದಲ್ಲಿ ಉಳಿಯಲಿದೆ ಎಂದರು. ಹೊಸಯುಗ ಖಾಸ್ಗತ ಮಠಕ್ಕೆ ಆಗಬೇಕೆನ್ನುವದು ಆಸೆ ನನ್ನದಾಗಿತ್ತು ಆ ಆಸೆ ಈಡೇರುತ್ತಾ ಸಾಗಿದೆ ಎಂಬಂತಾಗಿದೆ ಕಾರ್ಯಕ್ರಮವೆಂಬುದು ಚಿಕ್ಕದಾಗಿದ್ದರೂ ಚೊಕ್ಕದಾಗಿದೆ ಎಂದರು. ಭಕ್ತರು ಈ ಪೇಟಿಂಗ್ ಫೋಟೋಗಳನ್ನು ನೋಡಿ ಶ್ರೀ ಮಠದ ಇತಿಹಾಸವನ್ನು ಅವಲೋಕಿಸಿ ಅವರು ವ್ಹಾ..ವ್ಹಾ.. ಅಂದಾಗ ಶ್ರೀ ಮಠದ ಘನತೆ ಗೌರವವೆಂಬುದು ಎದ್ದು ಕಾಣುತ್ತಲಿದೆ ಎಂದು ಹೇಳಿದ ಶ್ರೀಗಳು ನುರಿತ ಕಲಾವಿದರು ತಮ್ಮ ಕುಂಚಿನಿಂದ ಕಲೆಯನ್ನು ಪೇಟಿಂಗ್ ಮೂಲಕ ಚಿತ್ರ ಬಿಡಿಸಿ ತೋರಿಸಿರುವದು ಇದು ಅದ್ಬುತ ಕಾರ್ಯವಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರ ಸದಸ್ಯರಾದ ರಾಜೇಶ್ವರಿ ಮೋಪಗಾರ ಅವರು ಮಾತನಾಡಿ ಆದ್ಯಾತ್ಮಿಕ ಶೈಕ್ಷಣಿಕ ಧಾರ್ಮಿಕ ಸಾಂಸ್ಕøತಿಕ ಕ್ಷೇತ್ರವಾಗಿ ಭರದಿಂದ ಬೆಳೆಯುತ್ತಾ ಸಾಗಿದ ತಾಳಿಕೋಟೆ ಪಟ್ಟಣದಲ್ಲಿಯ ಶ್ರೀ ಖಾಸ್ಗತ ಮಠದ ಹೆಸರು ನಾಡಿನೆಲ್ಲಡೆಯಲ್ಲಿಯೂ ಈ ಹಿಂದಿನಿಂದ ಪಸರಿಸುತ್ತಾ ಸಾಗಿದೆ ಇಂತಹ ಕಲೆಯ ಹಾಗೂ ಕಲಾಕಾರರನ್ನು ಸಂಘಟಿಸುವದರೊಂದಿಗೆ ದೃಶ್ಯಬಿಂಬ ಕಲಾಪ್ರತಿಷ್ಠಾನ ಹಾಗೂ ಶ್ರೀ ಖಾಸ್ಗತಮಠದ ಸಂಯೋಗದೊಂದಿಗೆ ನಡೆದಿರುವ ಪವಾಡ ದೃಶ್ಯಗಳ ಚಿತ್ರಿಕರಣ ಮಾಡಿರುವ ಕಲಾವಿದರ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದರು. ಶ್ರೀ ಖಾಸ್ಗತೇಶ್ವರಮಠದ ಮಹಾನ್ ಚಿಂತಕರಾಗಿರುವಂತಹ ಶ್ರೀ ಸಿದ್ದಲಿಂಗದೇವರು ಸೂರ್ಯನಂತೆ ಬಿಂಬಿಸುತ್ತಾ ಎಲ್ಲೆಡೆಯಲ್ಲಿಯೂ ಬೆಳಗುತ್ತಾ ಸಾಗಿದ್ದಾರೆ ನಾಡಿನಾದ್ಯಂತ ಶ್ರೀ ಮಠದ ಕೀರ್ತಿ ಬೆಳಗಲಿ ಹಾಗೂ ಭಕ್ತೋದ್ದಾರ ಜನೋದ್ದಾರವಾಗಲಿ ಎಂದು ಉದ್ದೇಶ ಹೊತ್ತು ದೃಶ್ಯಬಿಂಬ ಕಲೆಯನ್ನು ಅರಿತುಕೊಳ್ಳುವದಕ್ಕಾಗಿ 5 ದಿನ ಶಿಭಿರವನ್ನು ನಡೆಸಿದ್ದಾರೆ ಶೀಘ್ರದಲ್ಲಿಯೇ ಇಂತಹ ಮಠ ಮಾನ್ಯಗಳಿಗೆ ಹಾಗೂ ಸಂಸ್ಥೆಗಳಿಗೆ ಸಹಾಯಸಹಕಾರವೆಂಬುದು ಅಗತ್ಯವಾಗಿದೆ ಇಂತಹ ಸಹಾಯಸಹಕಾರದಿಂದ ಸಂಘಟನೆಗಳ ಶ್ರೀ ಮಠಗಳ ಬೆಳವಣಿಗೆಯಾಗಲಿದೆ ಎಂದು ಶ್ರೀ ಮಠದ ಕಾರ್ಯ ವೈಖರಿಗಳನ್ನು ಮೆಚ್ಚಿ ಗುಣಗಾನ ಮಾಡಿದರು.
ಇನ್ನೋರ್ವ ನಿವೃತ್ತ ಪ್ರಾಚಾರ್ಯ ಪ್ರೋ. ಶೇಷಾಚಲ ಹವಾಲ್ದಾರ ಅವರು ಮಾತನಾಡಿ ಜಗತ್ತಿನಲ್ಲಿಯ ಮೊಟ್ಟಮೊದಲ ಭಾಷೆಯೆಂಬುದು ಚಿತ್ರಕಲೆಯಾಗಿದೆ ಚಿತ್ರಕಲೆಗಳನ್ನು ಪ್ರದರ್ಶಿಸಿದ ಅದ್ಭುತ ಕಲೆ ಚಿತ್ರಗಳು ಪ್ರದರ್ಶನಗೊಂಡಿವೆ ಇಲ್ಲಿ ಕಲಾವಿದರು ಬಿಡಿಸಿದ ಪ್ರತಿಯೊಂದು ಚಿತ್ರಗಳು ಶ್ರೀ ಮಠದ ಇತಿಹಾಸವನ್ನು ಬಿತ್ತಲಿವೆ ಮುಖ್ಯವಾದ ಚಿತ್ರಗಳಲ್ಲಿ ಕಲಾವಿದ ಗಂಗಾಧರ ಕೆ.(ಬಾಗೇವಾಡಿ) ಇವರು ಬಿಡಿಸಿದ ವಿರಕ್ತಶ್ರೀಗಳಿಂದ ಆಶೀರ್ವಾದ ಪಡೆದ ಪೇಟಿಂಗ್ ಚಿತ್ರ ಎಲ್ಲರನ್ನು ಆಕರ್ಷಿಸುತ್ತಾ ಸಾಗಿದೆ ಎಂದ ಅವರು ಇನ್ನೂ ಕೆಲವು ಕಲಾಕಾರರು ಬಿಡಿಸಿದ ಚಿತ್ರಗಳೂ ಸಹ ಆಕರ್ಶದಾಯಕವಾಗಿದೆ ಶ್ರೀಮಠದ ಇತಿಹಾಸವನ್ನು ವಿವರಿಸುವಂತೆ ಕಾಣುತ್ತಲಿದೆ ಎಂದರು.
ಪ್ರತಿಷ್ಠಾನದ ಸಂಚಾಲಕರಾದ ಕಾಶೀನಾಥ ಸಜ್ಜನ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಮಯದಲ್ಲಿ ಈ ಶಿಭಿರದಲ್ಲಿ ಪಾಲ್ಗೊಂಡ 13 ಜನ ಕಲಾವಿದರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರನೀಡಿ ಗೌರವಿಸಲಾಯಿತು.
ಈ ಶಿಭಿರಕ್ಕೆ ಸಹಾಯ ಸಹಕಾರ ನೀಡಿದಂತಹ ದಾನಿಗಳಿಗೆ ಹಾಗೂ ತಾಳಿಕೋಟೆಯ ಚಿತ್ರಕಲಾವಿದರಾದ ಬಸವರಾಜ ದೊಡಮನಿ ಅವರಿಗೆ ಗಂಗಾಧರ ಬಡಿಗೇರ, ಮಾಧುಸಿಂಗ್ ದೇವಿ, ಯಡ್ರಾಮಿ ಅವರಿಗೂ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಶಿಕ್ಷಕರು ಹಾಗೂ ಸಾಹಿತಿಗಳಾದ ಅಶೋಕ ಹಂಚಲಿ, ಪ್ರತಿಷ್ಠಾನದ ಅಧ್ಯಕ್ಷ ಸತೀಶ ಕೇಮಶೆಟ್ಟಿ, ಕಾರ್ಯದರ್ಶಿ ಶಿವನಗೌಡ ಬಿರಾದಾರ, ಸಚೀನ್ ಅಸ್ಕಿ, ಸಂಸ್ಥೆಯ ಉಪಾದ್ಯಕ್ಷ ಭೀಮನಗೌಡ ಗುಣಕನಾಳ, ಪುರಸಭಾ ಸದಸ್ಯ ಜಯಸಿಂಗ್ ಮೂಲಿಮನಿ, ಕುಮಾರೇಶ್ವರ ಪಬ್ಲಿಕ್ ಶಾಲೆಯ ಕಾಶೀನಾಥ ಸಜ್ಜನ ಮೊದಲಾದವರು ಉಪಸ್ತಿತರಿದ್ದರು.
ಶಿಕ್ಷಕ ಸಿದ್ದು ಕರಡಿ ಸ್ವಾಗತಿಸಿದರು. ಶಿಕ್ಷಕ ಸಾಯಬಗೌಡ ಬಿರಾದಾರ ನಿರೂಪಿಸಿ ವಂದಿಸಿದರು.
13 ಜನ ಕಲಾವಿದರು ಬಿಡಿಸಿದ 13ಚಿತ್ರಗಳನ್ನು ಭವ್ಯಮೆರವಣಿಗೆ ಮೂಲಕ ಶ್ರೀ ಖಾಸ್ಗತೇಶ್ವರ ಮಠಕ್ಕೆ ತರಲಾಯಿತು.

























