Home ಜಿಲ್ಲೆ ರಸ್ತೆ ಉಬ್ಬಿಗೆ ಬಣ್ಣ

ರಸ್ತೆ ಉಬ್ಬಿಗೆ ಬಣ್ಣ

ಲಕ್ಷ್ಮೇಶ್ವರ,ಫೆ25: ಲಕ್ಷ್ಮೇಶ್ವರ ಹರದಗಟ್ಟಿ ಮಧ್ಯದ ಲೋಕೋಪಯೋಗಿ ಇಲಾಖೆಯ ರಸ್ತೆಗೆ ಹರದಗಟ್ಟಿ ತಿರುವಿನಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿಉಬ್ಬು ಗಳನ್ನು ಹಾಕಲಾಗಿತ್ತು.


ಆದರೆ ಈ ಉಬ್ಬಿಗೆ ಯಾವುದೇ ಬಿಳಿಯ ಬಣ್ಣವನ್ನು ಹಚ್ಚದೆ ಇದ್ದಿದ್ದರಿಂದ ಈ ರಸ್ತೆಯಲ್ಲಿ ಮೋಟರ್ ಸೈಕಲ್ ಸವಾರರು ರಿಕ್ಷಾ ಉರುಳಿ ಬಿದ್ದು ಅನೇಕ ಅಪಘಾತಗಳು ಅವಘಡಗಳು ಸಂಭವಿಸಿದ್ದವು.
ಹರದಗಟ್ಟಿ ಗ್ರಾಮದ ಯುವಕರು ರಸ್ತೆ ಉಬ್ಬಿಗೆ ತಾವೇ ಹಣ ಸಂಗ್ರಹಿಸಿ ಶ್ರಮದಾನದ ಮೂಲಕ ಬಿಳಿ ಬಣ್ಣವನ್ನು ಹಚ್ಚಿ ಸಾರ್ವಜನಿಕರ ಗಮನ ಸೆಳೆದರು.


ಈ ಸಂದರ್ಭದಲ್ಲಿ ಜಗದೀಶ್ ಲಮಾಣಿ ರೋಹನ್ ಲಮಾಣಿ ಬಸವರಾಜ್ ಲಮಾಣಿ ಪರಮೇಶ ಲಮಾಣಿ ಶಿವಕುಮಾರ್ ತಳವಾರ ಸಾಯಿನಾಥ ನಾಯಕ್ ಮುತ್ತು ಲಮಾಣಿ ಸೇರಿದಂತೆ ಅನೇಕ ಯುವಕರು ಇದ್ದರು.