
ವಿಜಯಪುರ, ಡಿ.25:ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ, ನಗರದ ಪ್ರತಿಷ್ಠಿತ ಆಕ್ಸಫರ್ಡ ಶಾಲೆಯ ವಿದ್ಯಾರ್ಥಿನಿಯರಾದ ಮಿಸ್ಬಾ ಐಗಳಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದರೆ (ಹಿಂದಿ ಭಾಷಣ), ಅನನ್ಯಾ ಗೌರಿಮಠ ಜಿಲ್ಲಾ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ಈ ವಿದ್ಯಾರ್ಥಿನಿಯರಿಗೆ ಶಾಲೆಯ ಆಡಳಿತ ಮಂಡಳಿಯ ಸಂಗಮೇಶ ಬಬಲೇಶ್ವರ, ಬಸವರಾಜ ಕೌಲಗಿ, ಪ್ರದೀಪ ಲಿಂಗದಳ್ಳಿ ಹಾಗೂ ಶಾಲೆಯ ಸಿಬ್ಬಂದಿ ಶುಭ ಹಾರೈಸಿದ್ದಾರೆ























