Home ಜಿಲ್ಲೆ ಲಾಡಗೇರಿ ಬಡಾವಣೆಯಲ್ಲಿನ ತುಂಬಿ ತುಳುಕುತ್ತಿರುವ ಚರಂಡಿಗಳು, ಕಣ್ಮುಚ್ಚಿ ಕುಳಿತ ಸ್ಥಳಿಯ ಸದಸ್ಯರು-ಅಧಿಕಾರಿಗಳು

ಲಾಡಗೇರಿ ಬಡಾವಣೆಯಲ್ಲಿನ ತುಂಬಿ ತುಳುಕುತ್ತಿರುವ ಚರಂಡಿಗಳು, ಕಣ್ಮುಚ್ಚಿ ಕುಳಿತ ಸ್ಥಳಿಯ ಸದಸ್ಯರು-ಅಧಿಕಾರಿಗಳು

ಬೀದರ್: ಮಾ.17:ನಗರದ ವಾರ್ಡ್ ನಂ. 32ರಲ್ಲಿ ಇರುವ ಲಾಡಗೇರಿ ಬಡಾವಣೆಯಲ್ಲಿರುವ ಚರಂಡಿಗಳು ತುಂಬಿ ತುಳುಕುತ್ತಿದ್ದು, ಕಾಲೋನಿಯಲ್ಲಿ ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗಿ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಷ್ಟೆಲ್ಲ ತೊಂದರೆ ಉಂಟಾದರೂ ಆ ಭಾಗದ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ ಎಂದು ಅಲ್ಲಿಯ ನಿವಾಸಿಯಲ್ಲೊಬ್ಬರಾದ ಶಿವಕುಮಾರ ತಂದೆ ಬೋಮಯ್ಯ ಹಾಗೂ ಅಲ್ಲಿಯ ಸೆವಂತ್ ಡೆ ಶಾಲೆ ಬಳಿಯ ನಿವಾಸಿಗಳು ಎರಡೆರಡು ಬಾರಿ ಈ ಕುರಿತು ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಕಾಲೋನಿಯಲ್ಲಿ ಹಲವಾರು ದಿನಗಳಿಂದ ಕಸ ಸಂಗ್ರಹಣೆ ಸರಿಯಾಗಿ ನಡೆಯದೆ ದುರ್ವಾಸನೆ ಉಂಟಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗಿ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ನಿವಾಸಿಗಳು ದೂರಿದ್ದಾರೆ. ಅಲ್ಲದೆ ಒಳಚರಂಡಿ ವ್ಯವಸ್ಥೆ ಸರಿಯಾಗಿ ನಿರ್ವಹಣೆ ಆಗದ ಕಾರಣ ಮಳೆ ನೀರು ಹಾಗೂ ಮಲಿನ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ ಸ್ವಚ್ಛತೆ ಹಾಗೂ ಒಳಚರಂಡಿ ವ್ಯವಸ್ಥೆ ಸರಿಪಡಿಸುವ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಮನವಿಯಲ್ಲಿ ಉಲ್ಲೆಖಿಸಿದ್ದಾಗಿ ಶಿವಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.