ರೈಲಿನಲ್ಲಿ ನೀರಿಲ್ಲದ್ದಕ್ಕೆ ಆಕ್ರೋಶ

ಕಲಬುರಗಿ,ಜ.18: ಸೊಲ್ಲಾಪೂರ ಹಾಸನ ಬಸವ ಎಕ್ಸ್‍ಪ್ರೆಸ್ ರೈಲಿನಲ್ಲಿ ನೀರಿನ ವ್ಯವಸ್ಥೆ ಇರದೇ ಜನ ಶೌಚಕ್ಕಾಗಿ ಪರಿತಪಿಸುವಂತಾಯಿತು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅದ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ ತಿಳಿಸಿದ್ದಾರೆ
ರೈಲು ಭೋಗಿ ಸಂಖ್ಯೆ ಎಸ್4 ಮತ್ತು ಎಸ್5ರಲ್ಲಿ ನೀರಿನ ವ್ಯವಸ್ಥೆ ಇರದ ಕಾರಣ ಜನ ಶೌಚಾಲಯಕ್ಕೆ ತೆರಳಲು, ಊಟ ಮಾಡಿ ಕೈತೊಳೆಯಲು ಪರದಾಡಿದರು. ಕೊನೆಗೆ ಕುಡಿಯುವ ನೀರಿನ ಬಾಟಲಿಗಳನ್ನು ಖರೀದಿಸಿ ನಿತ್ಯ ಕರ್ಮ ಪೂರೈಸುವಂತಾಯಿತು ಎಂದು ಬೇಸರ ವ್ಯಕ್ತ ಪಡಿಸಿದರು.
ಈ ಅವ್ಯವಸ್ಥೆಯನ್ನು ಖಂಡಿಸಿರುವ ಅವರು, ರೈಲ್ವೆ ಇಲಾಖೆ ಮುಂದೆ ಇಂತಹ ತಪ್ಪುಗಳನ್ನು ಆಗದಂತೆ ವ್ಯವಸ್ಥೆ ಸರಿಪಡಿಸಬೇಕು ಮತ್ತು ಇಂದಿನ ಅವ್ಯವಸ್ಥೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.