
ಕಲಬುರಗಿ,ಡಿ.೨೫: ಕಲ್ಯಾಣ ಕರ್ನಾಟಕ ಕಾರಾಗೃಹ ಇಲಾಖೆ ಡಿಐಜಿ ಹುದ್ದೆ ವಿಳಂಬಕ್ಕೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಪ್ರತಿಯೊಂದು ವಿಷಯದಲ್ಲಿ ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾಗುತ್ತಿದ್ದು,
ಕಾರಾಗೃಹ ಇಲಾಖೆ ಡಿಐಜಿ ಹುದ್ದೆ ನೀಡುವ ವಿಚಾರದಲ್ಲೂ ನಿರ್ಲಕ್ಷ್ಯವಾಗುತ್ತಿದೆ.ಕಲ್ಯಾಣ ಕರ್ನಾಟಕ ವಲಯಕ್ಕೆ ಡಿಐಜಿ ಹುದ್ದೆ ಸೃಷ್ಟಿಸಿ ಕಾರಗೃಹ ಇಲಾಖೆ ಶಿಫಾರಸು ಮಾಡಿದೆ.೧ ವರ್ಷ ಕಳೆದರೂ ಆರ್ಥಿಕ ಇಲಾಖೆ ಅನುಮತಿ ನೀಡುತ್ತಿಲ್ಲ.ಇದರಿಂದ ಈ ಭಾಗದ ಜೈಲು ಸುಧಾರಣೆಗೆ ಪೆಟ್ಟು ಬೀಳುತ್ತಿದೆ ಪ್ರತಿಯೊಂದು ಸಣ್ಣ ಪುಟ್ಟ ವಿಚಾರಕ್ಕೂ ಬೆಳಗಾವಿ ಡಿಐಜಿಯಿಂದ ಅನುಮತಿ ಪಡೆಯಬೇಕು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ, ಕೆ ಕೆ ಆರ್ ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಎಲ್ಲಾ ಶಾಸಕರು ಈ ವಿಷಯದಲ್ಲಿ ದೃಡ ನಿರ್ದಾರ ಕೈಗೋಳ್ಳುವ ವಿಶ್ವಾಸವಿz.ೆ ನಿರ್ಲಕ್ಷಿಸಿದರೆ ಹೋರಾಟದ ಹಾದಿ ಹಿಡಿಯುತ್ತೇವೆ ಎಂದಿದ್ದಾರೆ























