
ಬೀದರ:ಜೂ.೧೮:ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯ ನಮ್ಮ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು ಅಶೋಕ್ ಖೇಣಿ ಮಾಜಿ ಶಾಸಕರು ಬೀದರ್ ದಕ್ಷಿಣ ರವರ ಆದೇಶದ ಮೇರೆಗೆ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಮತ್ತು ಶಕ್ತಿ ಯೋಜನೆಗಳ ಬಗ್ಗೆ ಬೀದರ ದಕ್ಷಿಣ ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ತಲುಪಿ ಯೋಜನೆ ಬಗ್ಗೆ ಸಮಿತಿ ಗಮನಕ್ಕೆ ತರಬೇಕು ಎಂದು ಆದೇಶ ಮಾಡಿದರು, ಬೀದರ್ ತಾಲೂಕಿನ ಪಂಚ್ ಗ್ಯಾರಂಟಿ ಕಮಿಟಿಯ ಉಪಾಧ್ಯಕ್ಷರಾದ ಶ್ರೀ ರಾಜಕುಮಾರ ಮಡಿಕಿ ರವರ ಹಾಗೂ ಸದಸ್ಯರ ನೇತೃತ್ವದಲ್ಲಿ, ನಮ್ಮ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಸಿರ್ಸಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಖಾಶೇಂಪೂರ ಸಿ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಮತ್ತು ಶಕ್ತಿ ಯೋಜನೆಗಳ ಮಹತ್ವÀದ ಬಗ್ಗೆ ಮನೆ ಮನೆಗೆ ತೆರಳಿ ಜನರಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಕಮಿಟಿಯ ಸದಸ್ಯರುಗಳಾದ ಉದಯಕುಮಾರ ಚಟನಳ್ಳಿ, ಶಿವಕುಮಾರ ಕುತ್ತಾಬಬಾದ್, ಮತ್ತು ಮುಖಂಡರಾದ ಸುಲ್ತಾನ್ ಪಟೇಲ್, ನೀಲಕಂಠ ಸ್ವಾಮಿ, ತಾಹೀರ್ ಅಲಿ,ವೆಂಕಟೇಶ್ ರೆಡ್ಡಿ, ಸಯ್ಯದ್ ಹುಸೇನ್, ಮತ್ತು ಅನೇಕ ಗ್ರಾಮಸ್ಥರು ಪಾಲ್ಗೊಂಡಿದ್ದರು..