
ತಾಳಿಕೋಟೆ:ಜ.25: ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನೇವರಿ 12 ರಂದು ಭಾರತದಲ್ಲಿ ಪ್ರತಿವರ್ಷ ಆಚರಿಸಲಾಗುವ ದಿನವೇ ರಾಷ್ಟ್ರೀಯ ಯುವದಿನವಾಗಿದೆ ಇದನ್ನು 1984ರಲ್ಲಿ ಭಾರತ ಸರ್ಕಾರ ಈ ದಿನವನ್ನು ಘೋಷಿಸಿತ್ತಲ್ಲದೇ 1985ರಿಂದ ಆಚರಣೆಯನ್ನು ಆಚರಿಸುತ್ತಾ ಸಾಗಿಬರಲಾಯಿತೆಂದು ಸಿವ್ಹಿಲ್ ನ್ಯಾಯಾದೀಶರು ಹಾಗೂ ಮುದ್ದೇಬಿಹಾಳ ತಾಲೂಕಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಗಳಾದ ಗೌ.ಶ್ರೀರಾಮಮೂರ್ತಿ ಎನ್ ಅವರು ನುಡಿದರು.
ಶನಿವಾರರಂದು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಮುದ್ದೇಬಿಹಾಳ ಸಂಘ ಹಾಗೂ ಸಂಗಮೇಶ್ವರ ವಿದ್ಯಾಸಂಸ್ಥೆಯ ತಾಳಿಕೋಟೆ, ಪೊಲೀಸ್ ಇಲಾಖೆ ಸರ್ಕಾರಿ ಇತರೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಶ್ರೀ ಸಂಗಮೇಶ್ವರ ಸಭಾ ಭವನದಲ್ಲಿ ಏರ್ಪಡಿಸಲಾದ “ರಾಷ್ಟ್ರೀಯ ಯುವ ದಿನ” ಕಾರ್ಯಕ್ರಮವನ್ನು ದೀಪ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ಯುವ ಫಿಳಿಗೆಗೆ ವಿವೇಕಾನಂದರ ಆದರ್ಶತನ ನಾಯಕತ್ವ ಗುಣಗಳನ್ನು ನೀಡಿ ಯುವ ಶಕ್ತಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮ ಇದಾಗಿದೆ ಈ ಕುರಿತು ಶಾಲೆ ಕಾಲೇಜುಗಳಲ್ಲಿ ಸಮೂದಾಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಅಲ್ಲದೇ ಭಾಷಣ ಚರ್ಚೆ ಒಳಗೊಂಡು ದೇಶದ ಯುವ ಫಿಳಿಗೆಗಾಗಿ ಪ್ರೋತ್ಸಾಹಿಸುವಂತಹ ರಾಷ್ಟ್ರೀಯ ಯುವದಿನ ಇದಾಗಿದೆ ಎಂದರು. ಯುವಕರಾಗಲಿ ವಿದ್ಯಾರ್ಥಿಗಳಾಗಲು ಜ್ಞಾನವನ್ನು ಇಂತಹ ವೇದಿಕೆಗಳಲ್ಲಿ ಚರ್ಚಿಸಿದರೆ ಅರಿತುಕೊಳ್ಳಲು ಸಾದ್ಯವಾಗಲಿದೆ ದೇಶ ಕಟ್ಟುವಲ್ಲಿ ಭಲಪಡಿಸುವಲ್ಲಿ ಯುವಕರ ಪಾತ್ರ ಭಹು ಮುಖ್ಯವಾಗಿದೆ ಎಂದರು. ನಮ್ಮದೇ ಆದ ಸಂಸ್ಕøತಿಯನ್ನು ಎತ್ತಿ ಹಿಡಿಯುವಲ್ಲಿ ಮುಂದಾಗಿದ್ದ ವಿವೇಕಾನಂದರು ಅನೇಕ ಸಂದೇಶಗಳನ್ನು ನೀಡಿ ಯುವಕರ ಸಾಮಥ್ರ್ಯ ಕುರಿತು ಏಚ್ಚರಿಸಿ ತಿಳಿ ಹೇಳಿದ್ದಾರೆ ನಾವು ಪ್ರತಿದಿನವೂ ಬದಲಾವಣೆಯನ್ನು ಕಾಣುತ್ತಲಿದ್ದೇವೆ ರೋಬೋರ್ಟ್ ಕಾಲೇಜ್ ಸೋಸಿಯಲ್ ಮೀಡಿಯಾ ಇವೇಲ್ಲವನ್ನು ತಂದವರು ಯುವಕರೇ ಎಂದ ನ್ಯಾಯಾಧೀಶರು ಯುವಕರ ಚಿಂತನೆ ಎಂದರೆ ಹೇಗಿರಬೇಕೆಂಬ ಸಲಹೆ ನೀಡಿದ ಅವರು ಎಲ್ಲ ವಿದ್ಯಾರ್ಥಿಗಳು ದೊಡ್ಡ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದೀರಿ ನಿಮ್ಮ ಪೋಷಕರು ಕಷ್ಟಪಟ್ಟು ದುಡಿದು ಕಲಿಕೆಗೆ ಅನುಕೂಲ ಕಲ್ಪಿಸಿದ್ದಾರೆ ಅದನ್ನು ಅರೀತುಕೊಂಡು ನಡೆಯಿರಿ ಗುರು ಎಂಬ ವ್ಯಕ್ತಿ ಅಲ್ಲಾ ಆತ ಶಕ್ತಿಯಾಗಿದ್ದಾನೆ ಗುರುವಿಗೆ ಬೇಕಾಗಿರುವದು ವಿದ್ಯಾರ್ಥಿಗಳಲ್ಲಿಯ ಜಾಣತನವಾಗಿದೆ ಅದಕ್ಕಾಗಿ ಜ್ಞಾನೋದಯ ಮಾಡುವದ್ದಾಗಿದೆ ಉತ್ತಮ ನಾಗರಿಕನ ಉತ್ತಮ ವಿದ್ಯಾರ್ಥಿಯ ಲಕ್ಷಣ ಹೇಗಿರಬೇಕೆಂಬುದರ ಕುರಿತು ಭಹು ಮಾರ್ಮಿಕವಾಗಿ ವಿವರಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುದ್ದೇಬಿಹಾಳ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಶಶಿಕಾಂತ ಮಾಲಗತ್ತಿ ಅವರು ಮಾತನಾಡಿ ರಾಷ್ಟ್ರೀಯ ಯುವ ದಿನೋತ್ಸವ ಎಂಬುದು 1985ರಲ್ಲಿ ಜಾರಿಗೆ ಬಂದಿತು ಇದನ್ನು 120 ರಾಷ್ಟ್ರಗಳಲ್ಲಿ ಜನೇವರಿ 12 ರಂದು ಆಚರಿಸಲಾಗುತ್ತದೆ ಇದು ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸುವ ದಿನವಾಗಿದೆ ಎಂದರು. ಅವರ ಸಂದೇಶಗಳು ಸ್ಪೂರ್ತಿದಾಯಕ ಯುವಕರಿಗೆ ಆದರ್ಶವಾದವುಗಳಾಗಿವೆ ಇವು ಯುವಕರಲ್ಲಿ ಶಕ್ತಿಯನ್ನು ತುಂಬುವಂತವುಗಳಾಗಿವೆ ಎಂದರು. ಇಡೀ ದೇಶದ ಭವಿಷ್ಯ ಎಂಬುದು ಯುವಕರ ಕೈಯಲ್ಲಿದೆ ಎಂಬುದನ್ನು ಸ್ವಾಮಿ ವಿವೇಕಾನಂದರದ್ದಾಗಿತ್ತು ನಮ್ಮ ನಿಮ್ಮೇಲ್ಲರ ಬಧುಕಿನ ಹಿರೋ ಸ್ವಾಮಿ ವಿವೇಕಾನಂದರಾಗಿದ್ದಾರೆ ಈ ಕಾರಣದಿಂದಲೇ ನಿದ್ದೆಗೆ ಜಾರದಿರಿ ಎಂದು ಏಚ್ಚರಿಸುವದಕ್ಕಾಗಿ ಎದ್ದೇಳಿ ಮುಂದೆ ಗುರಿ ಮುಟ್ಟುವ ತನಕ ಎಂಬ ಮಾತು ವಿವೇಕಾನಂದರು ಯುವಕರಿಗೆ ನೀಡಿದ ಸಂದೇಶವಾಗಿದೆ ಎಂದರು.
ಇನ್ನೋರ್ವ ಅತಿಥಿ ಸ್ಥಳೀಯ ಪಿಎಸ್‍ಐ ಶ್ರೀಮತಿ ಜ್ಯೋತಿ ಖೋತ್ ಅವರು ಮಾತನಾಡಿ ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ನಾವು ಈಗ ಒಳ್ಳೆಯವರಾಗಿದ್ದರೆ ಒಳ್ಳೆಯರಾಗಿರುತ್ತೇವೆ ನಾವು ಒಳ್ಳೆಯವರಾದರೆ ದೇಶ ಒಳ್ಳೆಯದಾಗಿರುತ್ತದೆ ಜೀವನದಲ್ಲಿ ಏಷ್ಟೇ ಕಷ್ಟ ಬಂದರೂ ಅದನ್ನು ಎದುರಿಸಿ ಮುನ್ನಡೆದರೆ ಕಷ್ಟವು ದೂರಾಗಿ ಒಳ್ಳೆಯ ಸ್ಥಾನ ಮಾನ ದೊರೆಯಲಿದೆ ಎಂದ ಅವರು ಅನ್ಯರ ಬಗ್ಗೆ ವಿಚಾರ ಮಾಡದೀರಿ ನಮ್ಮ ವಿಚಾರ ನಮ್ಮದಾಗಿರಲಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದ ಅವರು ಮೋಬೈಲ್ ಬಳಕೆಯಿಂದ ಏಚ್ಚರ ಸೈಬರ್ ಕ್ರೈಂಗೆ ಬಲಿಯಾಗಬೇಕಾದೀತೆಂದು ಚಿಕ್ಕ ಕಥೆಯೊಂದನ್ನು ಹೇಳಿ ವಿದ್ಯಾರ್ಥಿಗಳು ಸನ್ಮಾರ್ಗದ ದಾರಿಯಲ್ಲಿ ಸಾಗಲು ತಿಳಿ ಹೇಳಿದರು.
ಇನ್ನೋರ್ವ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಹಿರಿಯ ನ್ಯಾಯವಾದಿ ಎಸ್.ಆರ್.ಸಜ್ಜನ ಅವರು ಮಾತನಾಡಿ ಯುವಕರು ಒಳ್ಳೆಯ ಕಾರ್ಯ ಮಾಡುತ್ತಾ ಸಾಗಿದರೆ ದೇಶ ಭಕ್ತರಾಗುತ್ತಾರೆ ಕೆಟ್ಟ ಕಾರ್ಯಗಳನ್ನು ಮಾಡಿದರೆ ದೇಶ ದ್ರೋಹಿಯಾಗಬೇಕಾಗುತ್ತದೆ ದೊಡ್ಡ ವ್ಯಕ್ತಿಯಾಗಬೇಕಾದರೆ ಅವರದ್ದೇ ಆದ ಪರಿಶ್ರಮವೇ ಕಾರಣವಾಗುತ್ತದೆ ಎಂದರು. ಸ್ವಾಮಿ ಇವೇಕಾನಂದರ ಆದರ್ಶವನ್ನು ಅಳವಡಿಸಿಕೊಂಡರೆ ದೇಶದ ಒಳ್ಳೆಯ ನಾಗರಿಕನಾಗಲು ಸಾದ್ಯವಾಗಲಿದೆ ಸಮಾಜ ಅನ್ನುವದು ನಮ್ಮನ್ನು ಗುರುತಿಸಿಕೊಂಡು ನಮ್ಮಲ್ಲಿಗೆ ಬರುವ ಕಾರ್ಯ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು ಪ್ರತಿಯೊಬ್ಬರು ಮಹಾತ್ಮರ ಮಾರ್ಗವನ್ನು ಅನುಸರಿಸಬೇಕು ಕೆಟ್ಟ ವೆಸನಗಳಿಗೆ ಬಲಿಯಾಗುವದು ಬೇಡಾ ಇದರಿಂದ ಜೀವನವೇ ಹಾಳಾಗಲಿದೆ ಚಿನ್ನದಂತಹ ಜೀವನವನ್ನು ಹಾಳು ಮಾಡಿಕೊಳ್ಳುವದು ಬೇಡಾ ಜೀವನದ ಸಾರ್ಥಕತೆಯ ಗುರಿಯನ್ನುಟ್ಟುಕೊಂಡು ಮುನ್ನಡೆಯಿರಿ ಎಂದು ತಿಳಿ ಹೇಳಿದರು.
ಅಧ್ಯಕ್ಷತೆ ವಹಿಸಿದ ಎಸ್.ಎಸ್.ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಮಾತನಾಡಿ ವಿದ್ಯಾರ್ಥಿ ಜೀವನವೆಂಬುದರಲ್ಲಿ ಏನು ಬಿತ್ತುತ್ತೀರಿ ಅದನ್ನು ಬೆಳೆಯಬೇಕಾಗುತ್ತದೆ ಕಾರಣ ಒಳ್ಳೆಯ ತನವನ್ನು ಅಳವಡಿಸಿಕೊಂಡು ಒಳ್ಳೆಯ ವಿಚಾರದೊಂದಿಗೆ ಒಳ್ಳೆಯ ಗುರಿ ಮುಟ್ಟಲು ಸಮಯಪ್ರಜ್ಞೆವನ್ನು ಇಟ್ಟುಕೊಂಡು ನಡೆದು ಇಡೀ ನಾಡಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಕಾರ್ಯ ಮಾಡಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು ಅಂತಹ ಕಾರ್ಯ ಮಾಡಿದವರು ಸ್ವಾಮಿ ವಿವೇಕಾನಂದ ಅವರು ಆಗಿದ್ದಾರೆಂದು ಅವರ ಆದರ್ಶ ಜೀವನ ಕುರಿತು ವಿವರಿಸಿದ ಅವರು ನ್ಯಾಯಾದೀಶ ಶ್ರೀರಾಮಮೂರ್ತಿ ಅವರ ಪಿಎಸ್‍ಐ ಜ್ಯೋತಿ ಖೋತ್ ಅವರು ಭಾಷಣದ ಮೇಲಕುಗಳನ್ನು ಹಾಕುವದರೊಂದಿಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮೊದಲಿಗೆ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತಲ್ಲದೇ ಉಪಸ್ಥಿತ ಅತಿಥಿ ಮಹೋದಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕರಾದ ಅರವಿಂದ ಕುಂಭಾರ, ಮಹಾಂತೇಶ ಹಚರಡ್ಡಿ ಡಾಲಾಯತ್, ಉಪಸ್ಥಿತರಿದ್ದರು.
ಶಿಕ್ಷಕಿ ಶೃತಿ ಪತ್ತಾರ ಪ್ರಾರ್ಥಿಸಿದರು. ಶಿಕ್ಷಕ ಎಸ್.ಸಿ.ಗುಡಗುಂಟಿ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕ ಬಿ.ಆಯ್.ಹಿರೇಹೊಳಿ ವಂದಿಸಿದರು.

























