
ಸಂಜೆವಾಣಿ ವಾರ್ತೆ:
ಯಾದಗಿರಿ: ಜ.೧೧:ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗಾಗಿ ಶಾಂತಿಯುತ ಹೋರಾಟ ಮಾಡುತ್ತಿದ್ದ ನಮ್ಮಿಬ್ಬರ ಮೇಲೆ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂದಿರುವ ಅಂತರ ರಾಷ್ಟ್ರೀಯ ಕ್ರೀಡಾಪಟು ಲೋಕೇಶ ರಾಠೋಡ್ ಮತ್ತು ಕೆಕೆವೈ ಸಂಘಟನೆ ಅಧ್ಯಕ್ಷ ಪುನೀತ್ ರಾಜ್ ಕಮತಗಿ ಅವರು, ಇನ್ನೂ ಹತ್ತು ಕೇಸ್ ಹಾಕಿದರೂ ಅಂಜುವುದಿಲ್ಲ, ಕ್ರೀಡಾಂಗಣದ ಅಭಿವೃದ್ಧಿಯಾಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಯಾದಗಿರಿ ಬಂದ್ ಗೆ ಕರೆ ನೀಡುತ್ತೆಂದು ಹೇಳಿದ್ದಾರೆ. ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ರದ್ದು ಪಡಿಸಬೇಕು. ಜಿಲ್ಲಾಧಿಕಾರಿಗಳು ಹೋರಾಟಗಾರರಿಗೆ ಕ್ಷಮೆ ಕೇಳಬೇಕು, ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಕಾರಣರಾದವರ ಮೇಲೆ ಕಾನೂನಿನ ಕ್ರಮ ಆಗಬೇಕು, ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡ ಗುತ್ತಿಗೆದಾರರ ಪರವಾನಿಗೆ ರದ್ದಾಗಬೇಕು ಮತ್ತು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೆರಿಸಬೇಕೆಂದು ಆಗ್ರಹಿಸಿದರು.
ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದ ಕೆಆರ್ ಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ನಿಜಲಿಂಗಪ್ಪ,. ಮಾತನಾಡಿ ಕೆಲ ದಿನಗಳ ಹಿಂದೆ ಡಿಸಿ ಕಚೇರಿ ದ್ವಾರದ ಬಳಿ ಶಾಂತಿಯುತ ಹೋರಾಟವೇ ನಡೆದಿತ್ತು. ಆದರೇ ಡಿಸಿ ಅವರು ಆಟಗಾರ ಲೋಕೇಶ ಸೇರಿದಂತೆಯೇ ಅಲ್ಲಿದ್ದವರ
ಮೂಲಕ ಬಾಯಿಮುಚ್ಚಿಸಲು ಯತ್ನಿಸಿದರು ಮತ್ತು ಸುಳ್ಳು ಪ್ರಕರಣ ದಾಖಲಿಸಲು ಗೇಟ್ ವಾಚಮ್ಯಾನ್ ಇಂದ್ ಇಂತಹ ಪ್ರಕರಣಗಳು ದಾಖಲಿಸಿದ್ದಾರೆ. ಕಾರಣ, ಹೋರಾಟ ಮುಂದುವರೆಯುತ್ತದೆ, ಅದಕ್ಕೆ ಕೆಆರ್ ಎಸ್ ಪಕ್ಷ ಬೆಂಬಲಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಲೋಕೇಶ್ ರಾಥೋಡ್ ಅಂತರಾಷ್ಟ್ರೀಯ ಕ್ರೀಡಾಪಟು
ಕೆಕೆ ವೈ ಅಧ್ಯಕ್ಷ ಪುನೀತ್ ರಾಜಕುಮಾರ್ ಕಮತಗಿ. ಎಸ್ ನಿಜಲಿಂಗಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಆರ್‌ಎಸ್ ಪಕ್ಷ ಸೇರಿದಂತೆ ಇನ್ನು ಹಲವಾರು ಕಲ್ಯಾಣ ಕರ್ನಾಟಕ ಯೂತ್ ಅಸೋಸಿಯೇಷನ್ ಸದಸ್ಯರು ಉಪಸ್ಥಿತರಿದ್ದರು.
























