ಹೋರಾಟಗಾರರ ತ್ಯಾಗ, ಬಲಿದಾನದಿಂದ ನಮ್ಮ ಪ್ರದೇಶಕ್ಕೆ ಹಕ್ಕುಗಳು ದೊರೆತಿವೆ ; ತಹಸೀಲ್ದಾರ ಸಂಜೀವಕುಮಾರ ದಾಸರ

ಅಫಜಲಪುರ ; ಸೆ.18:ಕಲ್ಯಾಣ ಕರ್ನಾಟಕ ಹೋರಾಟಗಾರರ ತ್ಯಾಗದಿಂದಲೇ ನಮ್ಮ ಪ್ರದೇಶಕ್ಕೆ ಗೌರವ ಮತ್ತು ಹಕ್ಕುಗಳು ದೊರೆತಿವೆ. ಈ ದಿನವನ್ನು ನಾವೆಲ್ಲರೂ ನೆನಪಿಸಿಕೊಳ್ಳುವುದರ ಜೊತೆಗೆ ಯುವ ಪೀಳಿಗೆಯವರು ಅಭಿವೃದ್ಧಿಯ ದಾರಿಯಲ್ಲಿ ಹೆಜ್ಜೆ ಹಾಕಬೇಕು ಎಂದು ತಹಸೀಲ್ದಾರ ಸಂಜೀವಕುಮಾರ ದಾಸರ ಹೇಳಿದರು.

ತಹಸೀಲ್ದಾರ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ಆಶ್ರಯದಲ್ಲಿ ಜರುಗಿದ 78ನೇ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಒಂದುಗೂಡಿ ಕಲ್ಯಾಣ ಕರ್ನಾಟಕ ಉತ್ಸವ ಭಾವೈಕ್ಯತೆಯಿಂದ ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಮಾರ್ಗದರ್ಶನ ಆಗಬೇಕು ಎಂದು ತಹಶಿಲ್ದಾರರ ಸಂಜೀವಕುಮಾರ ತಿಳಿಸಿದರು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರಾದ ಪ್ರಕಾಶ ಜಮಾದಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನದ 371 (ಜೆ) ಕಲಂ ಅನುಷ್ಠಾನದಿಂದ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ, ಉದ್ಯೋಗ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಅಭಿವೃದ್ಧಿ ಪಡಿಸಲು ಸಾಧ್ಯವಾಗಿದೆ. ಹೈದರಾಬಾದ್ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುತ್ತಾ,ಅವರ ಕನಸುಗಳನ್ನು ನನಸಾಗಿಸುವುದು ಇಂದಿನ ಸಮಾಜದಲ್ಲಿರುವ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ನಮ್ಮ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಸಚಿವಾಲಯ ಸ್ಥಾಪನೆಗೆ ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಿದೆ. ಮುಂದಿನ ದಿನಗಳಲ್ಲಿ ಈ ಭಾಗದ ನಿರುದ್ಯೋಗ ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗ ಜೊತೆಗೆ ಇತರೆ ಅಭಿವೃದ್ಧಿ ಕಾಮಗಾರಿಗಳು ಮಾಡಲು ಸಹಾಯವಾಗುತ್ತದೆ ಎಂದು ಜಮಾದಾರ ತಿಳಿಸಿದರು.

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಬ್ರಹ್ಮಾನಂದ ಮಹಾಸ್ವಾಮಿಗಳು, ಪುರಸಭೆ ಅಧ್ಯಕ್ಷೆ ಸುಹಾಸಿನಿ ಖೇಳಗಿ, ಎಸ್.ಎಚ್.ಗಡಗಿಮನಿ, ಜಟ್ಟೆಪ್ಪ, ಜಾಮಗೊಂಡ, ಕೆ.ಎಂ.ಕೋಟೆ, ಯುವರಾಜ ಗಾಡಿ, ರೇವಣಸಿದ್ಧಪ್ಪ ತಾವರಖೇಡ, ಪ್ರವೀಣ್ ಹೇರೂರ, ಅಶೋಕ ನಾಯಕ, ಬಾಬುರಾವ್ ಜ್ಯೋತಿ, ಬಸವರಾಜ ಕುಂಬಾರ, ಸಂಜೀವ್ ಬಗಲಿ, ಶಂಕರಗೌಡ ಪಾಟೀಲ್, ಶಾಂತಪ್ಪ ಜಾಧವ, ಶ್ರೀಮಂತ ನದಗಾಂವ್, ಅಶೋಕ್ ಜಮಾದಾರ, ನಿಂಗು ಚಲವಾದಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.