ನಮ್ಮ ಸಂವಿಧಾನವುರಾಷ್ಟ್ರೀಯಏಕತೆಯನ್ನುಖಚಿತಪಡಿಸುತ್ತದೆ: ಭಟ್ಟು ಸತ್ಯನಾರಾಯಣ

ಕಲಬುರಗಿ:ಜ.27:ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯವು 77ನೇ ಗಣರಾಜ್ಯೋತ್ಸವವನ್ನು ಭವ್ಯವಾಗಿ ಆಚರಿಸಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಕುಲಪತಿ ಪೆÇ್ರ.ಭಟ್ಟು ಸತ್ಯನಾರಾಯಣಅವರು, “ಗಣರಾಜ್ಯೋತ್ಸವವು ಸಂವಿಧಾನಅಂಗೀಕಾರದ ಸ್ಮರಣೆಯμÉ್ಟೀಅಲ್ಲದೆ, ವಿಶ್ವದಅತಿದೊಡ್ಡ ಪ್ರಜಾಪ್ರಭುತ್ವದ ಸಾರವನ್ನು ಪ್ರತಿಬಿಂಬಿಸುತ್ತದೆ.ನಮ್ಮ ಸಂವಿಧಾನವು ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯದಉನ್ನತ ಮೌಲ್ಯಗಳನ್ನು ನಮಗೆ ನೆನಪಿಸುತ್ತದೆ.ವಂದೇ ಮಾತರಂನ 150ನೇ ವರ್ಷದಆಚರಣೆ ನಮಗೆ ಏಕತೆ ಮತ್ತು ಶಕ್ತಿಯ ಸಂದೇಶವನ್ನು ನೀಡುತ್ತದೆ.ಭಾರತವು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕಗಣರಾಜ್ಯ ಎಂಬ ಸಂದೇಶವನ್ನು ಸಾರುವ ಮಹಾನ್ ಭಾರತೀಯ ಸಂವಿಧಾನದ ಮೂಲಕ ವ್ಯಾಖ್ಯಾನಗೊಂಡಿದೆ” ಎಂದು ಹೇಳಿದರು.
ಮುಂದುವರಿದುಅವರು, “ಭಾರತವುತನ್ನದೇಆದ ಪರಮಕಾನೂನನ್ನು ಹೊಂದಿದ್ದು, ಭಾರತದ ಸಂವಿಧಾನವು ವೈವಿಧ್ಯಮಯರಾಷ್ಟ್ರದ ತತ್ವಗಳು ಮತ್ತು ಮೌಲ್ಯಗಳಿಗೆ ಮಾರ್ಗದರ್ಶಿಯಾಗಿದೆ.ನಮ್ಮ ಸಂವಿಧಾನವುರಾಷ್ಟ್ರೀಯಏಕತೆಯನ್ನು ಹಾಗೂ ನಾಗರಿಕರ ಸಬಲೀಕರಣವನ್ನುಖಚಿತಪಡಿಸುತ್ತದೆ” ಎಂದು ತಿಳಿಸಿದರು.
ಅವರು ಮುಂದುವರೆದು ಮಾತನಾಡುತ್ತಾ, “ಕೆಲವು ದೇಶಗಳು ಭಾರತವನ್ನು ವಿಭಜಿಸಲು ಹಾಗೂ ಆರ್ಥಿಕ ಒತ್ತಡಗಳನ್ನು ಹೇರುವ ಪ್ರಯತ್ನ ಮಾಡುತ್ತಿವೆ. ಆದರೆ ಸಮೃದ್ಧ ಸಾಂಸ್ಕøತಿಕ ಪರಂಪರೆ ಮತ್ತು ವೈವಿಧ್ಯಮಯ ಪರಂಪರೆಗಳನ್ನು ಹೊಂದಿರುವ ಭಾರತವುತನ್ನದೇ ಶಕ್ತಿಯಲ್ಲಿ ನಿಲ್ಲುವ ಸಾಮಥ್ರ್ಯವನ್ನು ಹೊಂದಿದೆ.ಭಾರತೀಯ ಶಿಕ್ಷಣ ವ್ಯವಸ್ಥೆಅತ್ಯಂತ ಬಲಿಷ್ಠವಾಗಿದ್ದು, ಅದು ಸಂವಿಧಾನಾತ್ಮಕ ಮೌಲ್ಯಗಳು ಮತ್ತು ಆದರ್ಶಗಳನ್ನು ಸಾಬೀತುಪಡಿಸುತ್ತಿದೆ” ಎಂದರು.
ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳು ಆಯೋಜಿಸಲ್ಪಟ್ಟವು. ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಕಡಗಂಚಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.ರಾಮ್ ಪ್ರಕಾಶ್‍ಅವರ ನೇತೃತ್ವದಲ್ಲಿ ಸಿಯುಕೆಯ ವಿದ್ಯಾರ್ಥಿಗಳಿಂದ ಬ್ಯಾಂಡ್ ವಾದ್ಯವೃಂದ ಪ್ರದರ್ಶನ ನಡೆಯಿತು.ತಿರಂಗಾ ಮೆರವಣಿಗೆ ವಿಶ್ವವಿದ್ಯಾಲಯದಆವರಣದಲ್ಲಿ ನಡೆಯಿತು.
ಮಾನ್ಯ ಕುಲಪತಿ ಹಾಗೂ ಕುಲಸಚಿವರಾದ ಪೆÇ್ರ.ಆರ್.ಆರ್.ಬಿರಾದರ್‍ಅವರಿಗೆಗೌರವ ವಂದನೆ (ಗಾರ್ಡ್‍ಆಫ್‍ಆನರ್) ಸಲ್ಲಿಸಲಾಯಿತು.ಈ ಕಾರ್ಯಕ್ರಮದಲ್ಲಿ ಪರೀಕ್ಷಾ ನಿಯಂತ್ರಣಾಧಿಕಾರಿಡಾ.ಕೋಟಾ ಸಾಯಿ ಕೃಷ್ಣ, ಹಣಕಾಸುಅಧಿಕಾರಿ, ರಾಮದೊರೈ, ಗ್ರಂಥಾಪಾಲಕಡಾ. ಕಟ್ಟಿಮಣನಿ, ಪೆÇ್ರ.ಪಾಂಡುರಂಗ, ಪೆÇ್ರ.ಚೆನ್ನವೀರಆರ್.ಎಂ.,ಕಾರ್ಯಕ್ರಮ ಸಂಯೋಜಕಡಾ. ಜಿ. ರಂಗನಾಥಂ, ಡಾ. ಶಾಮಲಾ, ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್ಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಡಾ. ಜಯದೇವಿ ಜೆಂಗಮಶೆಟ್ಟಿ, ಡಾ. ನಾಕೋಡ್ ಹಾಗೂ ಡಾ.ಸ್ವಪ್ನಿಲ್‍ಅವರುರಾಷ್ಟ್ರಗೀತೆ ಮತ್ತು ವಂದೇ ಮಾತರಂಅನ್ನು ಹಾಡಿದರು.ಸಂಗೀತ ವಿಭಾಗದ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.ಡಾ. ರೇಶ್ಮಾ ನಡಾಫ್ ಮತ್ತುಡಾ.ಪ್ರಕಾಶ್ ಬಾಳಿಕಾಯಿ ಅವರುಕಾರ್ಯಕ್ರಮವನ್ನು ನಿರೂಪಿಸಿದರು.