ಅನಾಥವಾಗಿ ಮಹಿಳೆ ಅಲೆದಾಟ ಮಹಿಳಾ ನಿಲಯಕ್ಕೆ ಸೇರಿಸಿದ: ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ

ಸೇಡಂ, ಜು,೦೫: ತಾಲೂಕಿನ ಮಳಖೇಡ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿAದ ಒಬ್ಬ ಮಹಿಳೆ ಅನಾಥವಾಗಿ ಅಲೆದಾಟ ಮಾಡುತ್ತಿದ್ದಾಳೆಂದು ಸಿಡಿಪಿಒ ಅಧಿಕಾರಿಗಳಿಗೆ ಹಾಗೂ ಮಹಿಳಾ ಸಾಂತ್ವಾಹನ ಕೇಂದ್ರಕ್ಕೆ ಕರೆ ಮಾಡಿ ತಿಳಿಸಲಾಗಿತ್ತು ,ನಮ್ಮ ಕೊರಿಕೆಗೆ ಸ್ಪಂದಿಸಿ ಈ ಕಛೇರಿಯ ಅಧಿಕಾರಿಗಳಾದ ಶ್ರೀಮತಿ ಇಂದುಮತಿ ಸ್ಥಾವರಮಠ ಹಾಗೂ ಶ್ರೀಮತಿ ಆರುತಿ ಕುಲ್ಕರ್ಣಿ ಈ ಮಹಿಳೆಯನ್ನು ಭೇಟಿಯಾಗಿ ವಿಚಾರಿಸಿ ಕೊಂಡು ಹೊಗಿದ್ದರು ,ಬುಧುವಾರ ಬಂದು ಈ ಮಹಿಳೆಯ ಆರೋಗ್ಯ ತಪಾಸಣೆ ಮಾಡಿಸಿ ರಾಜ್ಯ ಮಹಿಳಾ ನಿಲಯ ಕಲ್ಬುರ್ಗಿಯಲ್ಲಿ ತಂದು ಬಿಟ್ಟಿರುವುದು ಸಂತೋಷದಾಯಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶ್ರೀಮತಿ ಇಂದುಮತಿ ಸಾಲಿಮಠ, ಶ್ರೀಮತಿ ಆರುತಿ ಕುಲ್ಕರ್ಣಿ ಹಾಗೂ ರಾಜ್ಯ ಮಹಿಳಾ ನಿಲಯದ ಅಧಿಕಾರಿಗಳಿಗೆ ದನ್ಯವಾದಗಳು ತಿಳಿಸುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ನಮೋ ಬುದ್ಧ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ರಾಜು ಕಟ್ಟಿ ಅಧಿಕಾರಿಗಳನ್ನು ಅಭಿನಂದನೆಗಳು ತಿಳಿಸಿದ್ದಾರೆ.