
ಬೀದರ್: ಜೂ.11:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು 11 ವರ್ಷಗಳು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ, ಸರ್ಕಾರದ ಸಾಧನೆಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಜೂನ್ 9 ರಿಂದ ಜೂನ್ 21 ರ ವರೆಗೆ ದೇಶವ್ಯಾಪಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವು ವಿಕಸಿತ ಭಾರತದ ಅಮೃತ ಕಾಲ ಮತ್ತು ಸೇವೆ, ಸುಶಾಸನ ಹಾಗೂ ಬಡವರ ಕಲ್ಯಾಣದ 11 ವರ್ಷಗಳ ವಿಚಾರಧಾರೆಯ ಆಧಾರಿತವಾಗಿರುತ್ತದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ ತಿಳಿಸಿದರು.
ಮಂಗಳವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮಗಳ ಪಟ್ಟಿ ವಿವರಿಸಿದ ಅವರು, ಜುನ್ 9ರಿಂದ ಜುಲೈ 9ರ ವರೆಗೆ ಬದಲಾಗುತ್ತಿರುವ ಭಾರತ ನನ್ನ ಅನುಭವ ಎಂಬ ವಿಷಯ ಕುರಿತು ಡಿಜಿಟಲ್ ಸ್ಪರ್ಧೆ ಆಯೋಜನೆ, ಒಥಿ ಉov ಪೆÇೀರ್ಟಲ್ನಲ್ಲಿ ಶಾರ್ಟ್ ವೀಡಿಯೊ, ಬ್ಲಾಗ್, ಕ್ವಿಜ್ ಸ್ಪರ್ಧೆಯಲ್ಲಿ ಹೆಚ್ಚಿನ ಜನರನ್ನು ಭಾಗವಹಿಸಲು ಪ್ರೇರೇಪಿಸುವುದು, ಸೋಶಿಯಲ್ ಮೀಡಿಯಾದ ಪ್ರಭಾವಿಗಳು ಭಾಗವಹಿಸಿ ಈ ಸ್ಪರ್ಧೆಯ ಪ್ರಚಾರ ಮಾಡುವುದು. ಕಾರ್ಯಕರ್ತರು ತಮ್ಮ ಪ್ರದೇಶದ ಅಭಿವೃದ್ಧಿ ಕೆಲಸಗಳನ್ನು ದಾಖಲಿಸಿ ವೀಡಿಯೊ ರೂಪದಲ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚುವುದು, ಪಕ್ಷದ ರಾμÁ್ಟ್ರಧ್ಯಕ್ಷರು, ಕೇಂದ್ರ ಸಚಿವರು ಮಾಧ್ಯಮ ಸಂವಾದದಲ್ಲಿ ಪಾಲ್ಗೊಳ್ಳುವುದು, ರಾಜ್ಯ ರಾಜಧಾನಿಯಲ್ಲಿ ಕೇಂದ್ರ ಸಚಿವರಿಂದ ಹಾಗೂ ಪ್ರಮುಖ ಮಹಾನಗರಗಳಲ್ಲಿ ಕೇಂದ್ರದ ವಕ್ತಾರರಿಂದ ಪತ್ರಿಕಾಗೋಷ್ಟಿಗಳ ಏರ್ಪಾಡು ಮಾಡುವುದು, 11ರಂದು ಪತ್ರಿಕಾ ಸಂವಾದ ಸಂಸದರು ಅಥವಾ ರಾಜ್ಯದ ನಿಯೋಜಿತ ವಕ್ತಾರರಿಂದ
ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಗಳ ಆಧಾರಿತ ಪ್ರದರ್ಶನಿ, ವಿಕಸಿತ ಭಾರತದ ಸಂಕಲ್ಪ ಮತ್ತು ನಮ್ಮ ಪಾತ್ರ, ಸೇವೆ. ಸುಶಾಸನ ಮತ್ತು ಗರೀಬ ಕಲ್ಯಾಣದ | ವರ್ಷಗಳು ಹಾಗೂ ಶಕ್ತಿಶಾಲಿ ಭಾರತ ಸುರಕ್ಷಿತ ಭಾರತ ಈ ವಿಷಯಗಳ ಕುರಿತು ಮೂರು ಪ್ರತ್ಯೇಕ ವಕ್ತಾರರಿಂದ ಭಾಷಣ ಕಾರ್ಯಕ್ರಮ, ಪ್ರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನಿಷ್ಠ 50 ಜನ ಪೆÇ್ರಫೆಷನಲ್ಗಳ ಅನುಭವದ ವೀಡಿಯೋ/ಬೈಟ್ಗಳನ್ನು ದಾಖಲಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚುವುದು. ನಾಳೆ ವಿಕಸಿತ ಭಾರತ ಸಂಕಲ್ಪ ಸಭೆ ಆಯೋಜನೆ, ವಿಕಸಿತ ಭಾರತದ ಸಂಕಲ್ಪ ಗ್ರಹಣೆ ಮತ್ತು. ಪ್ರಮಾಣಪತ್ರ ವಿತರಣೆ, ವಿಶ್ವ ಯೋಗ ದಿನ ನಿಮಿತ್ಯ ಜುನ್ 17ರಿಂದ 21ರ ವರೆಗೆ ಎಲ್ಲಾ ಮಂಡಲಗಳಲ್ಲಿ ಯೋಗ ಶಿಬಿರ ಆಯೋಜನೆ, ಪ್ರತಿಯೊಂದು ಮಂಡಲದಲ್ಲಿ ಕನಿಷ್ಠ ಒಂದು ಕಾರ್ಯಕ್ರಮ ನಡೆಯಬೇಕೆಂಬ ಸಂಕಲ್ಪ ನಮ್ಮದಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಆಟಲ್ ಯೋಜನೆ (ವಯೋ ವಂದನ್) ಅಡಿಯಲ್ಲಿ 100% ದಷ್ಟು ಹಿರಿಯ ನಾಗರಿಕರ ನೋಂದಣಿ ಮತ್ತು ಕಾರ್ಡ್ ವಿತರಣೆ, ವಿಕಸಿತ ಭಾರತದ ನಿರ್ಮಾಣದಲ್ಲಿ ಸಕ್ರಿಯರಾಗುವ ಸಂಕಲ್ಪ ಪ್ರತಿ ಸಭೆಯಲ್ಲಿ ಕನಿಷ್ಟ 5 ಜನ ಫಲಾನುಭವಿಗಳ ಅನುಭವದ ವೀಡಿಯೊ ದಾಖಲಿಸುವುದು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಹಂಚುವುದು, ಜುನ್ 5ರಿಂದ ಸಸಿ ನೆಡುವ ಅಭಿಯಾನ ಆರಂಭಿಸಲಾಗಿದೆ. ಹಾಗೇ ಬೀಜದ ಉಂಡೆಗಳನ್ನು ಬಿತ್ತುವ ಕಾರ್ಯ ಕೈಗೊಳ್ಳಲಾಗಿದೆ. ‘ತಾಯಿಯ ಹೆಸರಿನಲ್ಲಿ ಒಂದು ಸಸಿ’ ಅಭಿಯಾನ, ಈ ತಿಂಗಳ 23ರಂದು ಬೂತ್ ಮಟ್ಟದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಬಲಿದಾನ ದಿನ ಕಾರ್ಯಕ್ರಮ ಎರ್ಪಡಿಸುವುದು. ಈ ತಿಂಗಳ 25ರಂದು
ತುರ್ತು ಪರಿಸ್ಥಿತಿ ಘೋಷಿಸಿದ ದಿನವಾಗಿದ್ದು, ಅಂದು ಜಿಲ್ಲಾ ಮಟ್ಟದಲ್ಲಿ ವಿಚಾರ ಸಂಕಿರಣಗಳು ಹಾಗೂ ತುರ್ತು ಪರಿಸ್ಥಿತಿ ಹೋರಾಟಗಾರರ ಹಾಗೂ ಅದರಲ್ಲಿ ಭಾಗಿಯಾದವರ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡಿದ ಮಹನೀಯರಿಗೆ ಗೌರವ ಸನ್ಮಾನ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಆದ್ಯತೆಯನ್ನಾಗಿಸಿಕೊಂಡು ತುರ್ತು ಪರಿಸ್ಥಿತಿ ಕುರಿತ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಜಿಲ್ಲಾಧ್ಯಕ್ಷರು ತಿಳಿಸಿದರು.
ಕೇಂದ್ರ ಮಾಜಿ ಮಂತ್ರಿ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ಎಂ.ಜಿ ಮುಳೆ, ಮಾಜಿ ಬೂಡಾ ಅಧ್ಯಕ್ಷ ಬಾಬು ವಾಲಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಮಾಧವ ಹಸುರೆ, ಮುಖಂಡರಾದ ಜಗನ್ನಾಥ ಸಿರ್ಕಟನಳ್ಳಿ, ಬಸವರಾಜ ಪವಾರ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.