ಶಿಕ್ಷಕರ ವೃತ್ತಿ ಸಾಮರ್ಥ್ಯ ವೃದ್ಧಿಗೆ ಸಂಘಟನೆಗಳು ಪ್ರಮುಖ ಪಾತ್ರ ವಹಿಸಬೇಕು : ಸಿ.ಜಿ. ಹಳ್ಳದ

ಭಾಲ್ಕಿ:ಡಿ.೨೧:ಶಿಕ್ಷಕರ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸುವುದು, ಶೈಕ್ಷಣಿಕ ಗುಣಮಟ್ಟವನ್ನು ಬಲಪಡಿಸುವುದು ಹಾಗೂ ನೌಕರರ ಹಿತ ರಕ್ಷಣೆಗೆ ಸಂಘಟನೆಗಳು ಸದಾ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ ಅವರು ಹೇಳಿದರು.
ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಘಟಕ ಭಾಲ್ಕಿ, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ತಾಲೂಕು ಘಟಕ ಭಾಲ್ಕಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರು ತಾಲೂಕು ಘಟಕ ಭಾಲ್ಕಿ (ಪ್ರಾಥಮಿಕ ಶಾಲಾ ವಿಭಾಗ) ಹಾಗೂ ಕರ್ನಾಟಕ ರಾಜ್ಯ Sಅ/Sಖಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಕ್ಷೇಮಾಭಿವೃದ್ಧಿ ಶಿಕ್ಷಕರ ಸಂಘ ತಾಲೂಕು ಘಟಕ ಭಾಲ್ಕಿ ಇವರ ಸಂಯುಕ್ತಾಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ನೂತನವಾಗಿ ಸೇವೆಗೆ ಹಾಜರಾದ ಹಾಗೂ ಬಿಡುಗಡೆ ಹೊಂದಿರುವ ಕ್ಷೇತ್ರ ಸಮನ್ವಯಾಧಿಕಾರಿ/ಇಸಿಓ/ಬಿಆರ್‌ಪಿ ಹಾಗೂ ಸಿಆರ್‌ಪಿ ಗಳ ಸನ್ಮಾನ ಸಮಾರಂಭದಲ್ಲಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಮತ್ತು ಅಧಿಕಾರಿಗಳ ನಡುವಿನ ಉತ್ತಮ ಸಂವಹನ ಹಾಗೂ ಸಹಕಾರವೇ ಶಿಕ್ಷಣ ವ್ಯವಸ್ಥೆಯ ಯಶಸ್ಸಿನ ಮೂಲವಾಗಿದ್ದು, ಸಂಘಟನೆಗಳು ಈ ಸಂಬAಧ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಕೇವಲ ಬೇಡಿಕೆಗಳಿಗಾಗಿ ಮಾತ್ರವಲ್ಲದೆ, ಶಿಕ್ಷಕರ ವೃತ್ತಿಪರ ಬೆಳವಣಿಗೆ, ತರಬೇತಿ, ನವೀನ ಬೋಧನಾ ವಿಧಾನಗಳ ಅಳವಡಿಕೆ ಹಾಗೂ ವಿದ್ಯಾರ್ಥಿ ಹಿತವನ್ನು ಕೇಂದ್ರವಾಗಿಟ್ಟುಕೊAಡು ಸಂಘಟನೆಗಳು ಕೆಲಸ ಮಾಡಬೇಕೆಂದು ಅವರು ಕರೆ ನೀಡಿದರು.
ಶಿಕ್ಷಕರ ಸಮಸ್ಯೆಗಳ ಕುರಿತು ಮಾತನಾಡಿದ ನಿರಂಜಪ್ಪ ಪಾತ್ರೆ ಅವರು ಪ್ರಸ್ತಾವಿಕವಾಗಿ ಮಾತನಾಡಿ, ನೌಕರರ ಬೇಡಿಕೆಗಳು, ಹಕ್ಕುಗಳು ಹಾಗೂ ಸೇವಾ ಸಂಬAಧಿತ ಸಮಸ್ಯೆಗಳನ್ನು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಪರಿಹರಿಸುವ ಮೂಲಕ ನೌಕರರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಬೇಕು ಎಂದರು. ಶಿಕ್ಷಕರ ಶಾಂತ ಮನಸ್ಥಿತಿಯೇ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘ ಭಾಲ್ಕಿಯ ಅಧ್ಯಕ್ಷ ದತ್ತಾತ್ರಿ ಕಾಟಕರ, ಶಿವಕುಮಾರ ಫುಲಾರೆ, ಸುಧಾಕರ ಗಾಯಕವಾಡ ಸೇರಿದಂತೆ ಇತರ ವಕ್ತಾರರು ಮಾತನಾಡಿ, ಸಂಘಟನೆಗಳ ಏಕತೆ, ಶೈಕ್ಷಣಿಕ ಕ್ಷೇತ್ರದ ಸವಾಲುಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ಘಟಕದ ನೂತನ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದ ಸತ್ಯವಾನ ಕಾಂಬಳೆ ಅವರು ಮಾತನಾಡಿ, ನೌಕರರ ಪರವಾಗಿ ನನ್ನ ಪ್ರಯತ್ನ ಮೀರಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಂಘದ ಮೇಲೆ ಶಿಕ್ಷಕರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ನಾಯಕತ್ವ ನೀಡುವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮನೋಹರ ಹೋಳ್ಕರ, ಅಶೋಕ ಬಿರಾದಾರ, ಮಲ್ಲಿನಾಥ ಸಜ್ಜನಸುಖ, ದೇವ ಬಿರಾದಾರ, ರೋಹಿದಾಸ ರಾಠೋಡ, ಅರವಿಂದ ಪಾಟೀಲ, ಗೋವಿಂದರಾವ ಬಿರಾದಾರ, ದತ್ತು ಮುದ್ದಾಳೆ, ಸೂರ್ಯಕಾಂತ ಖುಳೆ,ಉಲ್ಲಾಸ, ಕಾಂಬಳೆ, ಶರಣಪ್ಪ ಕಲ್ಲಪ್ಪನೋರ, ಗಣಪತಿ ಭಕ್ತಾ, ಶಿವಕುಮಾರ ಪಾಟೀಲ,ಮಲ್ಲಿಕಾರ್ಜುನ ಕನ್ನಳೆ,ಮೀಲಿಂದ, ಅರ್ಜುನ ಕಾಂಬಳೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅನೇಕ ಶಿಕ್ಷಕರು ಉಪಸ್ಥಿತರಿದ್ದು ಸಮಾರಂಭಕ್ಕೆ ಶೋಭೆ ತಂದರು.ಬಸವರಾಜ ದಾನಾ ಅವರು ನಿರೂಪಿಸಿದರು. ನೀಲಕಂಠ ಕುರುಣೆ ಸ್ವಾಗತಿಸಿದರು,ನಾಗನಾಥ ಭೋಸಲೇ ವಂದಿಸಿದರು.