
ಬೀದರ:ಫೆ.3: ಗ್ರಾಮೀಣ ಪ್ರದೇಶದಲ್ಲಿ ಆನಂದ ಮತ್ತು ಸಂಸ್ಕøತಿ ಪೆÇೀಷಿಸುವ ಜಾನಪದ ಕಲೆ ಮತ್ತು ಸಾಹಿತ್ಯವನ್ನು ಉಳಿಸುವ ಕೆಲಸ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಅಡೆಪ್ಪಾ ಶೆರಿಕಾರ್ ಹೇಳಿದರು.
ಬೀದರ ತಾಲ್ಲೂಕಿನ ಸಿರ್ಸಿ (ಎ) ಗ್ರಾಮದ ಮಾತಾ ಲಕ್ಷ್ಮೀ ದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತೀಕ ಪರಿಷತ್ತು ಹಾಗೂ ಜಿಲ್ಲಾ ಟೋಕರೆ ಕೋಳಿ ಸಾಹಿತ್ಯ ಮತ್ತು ಸಾಂಸ್ಕೃತೀಕ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ಸಾಮಾನ್ಯ ಯೋಜನೆಯಡಿ ಆಯೋಜಿಸಲಾಗಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಅಡೆಪ್ಪಾ ಶೆರಿಕಾರ್ ಅವರು ಹೇಳಿದರು, “ಗ್ರಾಮೀಣ ಭಾಗದಲ್ಲಿ ಹಿರಿಯರು ಮಾತನಾಡುವ ಮೂಲಕ, ಹಾಡು-ನೃತ್ಯ ಮೂಲಕ, ಸುಗ್ಗಿ ಕಲೆಯ ಮೂಲಕ ಜಾನಪದ ಕಲೆ ಮತ್ತು ಸಾಹಿತ್ಯವನ್ನು ಇನ್ನೂ ಉಳಿಸಿಕೊಂಡು ಬರುತ್ತಿದ್ದಾರೆ. ಈ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಪೆÇೀಷಿಸುವುದು ಅತ್ಯಂತ ಅಗತ್ಯ. ಜಾನಪದ ಕಲೆ ನಶಿಸುತ್ತಾ ಹೋದರೆ ಗ್ರಾಮೀಣ ಹಬ್ಬಗಳು, ಸಂತೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸೊಗಡು ಕಳೆದುಹೋಗುತ್ತದೆ. ಆದ್ದರಿಂದ ಸಂಘ ಸಂಸ್ಥೆಗಳು ಮತ್ತು ಸಮಿತಿಗಳು ಜಾನಪದ ಕಲೆ ಮತ್ತು ಸಾಹಿತ್ಯದ ಪ್ರದರ್ಶನ ಮತ್ತು ಪೆÇೀಷಣೆಯಲ್ಲಿ ಮುಂದಾಗಬೇಕು.”
ಕಾರ್ಯಕ್ರಮವನ್ನು ಜಾತ್ರಾ ಮಹೋತ್ಸವ ಸಮಿತಿಯ ಸದಸ್ಯ ಮಾರುತಿ ಮಾಸ್ಟರ್ ಅಧ್ಯಕ್ಷತೆಯಲ್ಲಿ ನಿರ್ವಹಿಸಿದರು. ಸ್ವಾಗತ ಭಾಷಣವನ್ನು ಶೇಖರ ಸ್ವಾಗತಗೈದರೆ ರಾಜು, ನಿರೂಪಣೆ ಕೆಲಸವನ್ನು ಸೂರ್ಯಕಾಂತ ನಿಭಾಯಿಸಿದರು. ವೇದಿಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂತೋಷ ಹುಮನಾಬಾದ, ಸದಸ್ಯರು ಪುಂಡಲೀಕ ಟುಬಾಕ್, ಮಾಜಿ ತಾಲೂಕ ಪಂಚಾಯತ್ ಸದಸ್ಯರು ಧನರಾಜ ಅಲದಿ, ಗ್ರಾಮದ ಮುಖಂಡರು ಸೂರ್ಯಕಾಂತ ಪೆÇತಾ, ವಾಸು ಜಾಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವೈಶಿಷ್ಟ್ಯವೆಂದರೆ ಕಲಾವಿದರಾದ ರಾಚಯ್ಯಾ ಸ್ವಾಮಿ ತತ್ವಪದ ವ್ಯಾಯಾಮ ಪ್ರದರ್ಶಿಸಿದ್ದರು. ಜೊತೆಗೆ ಮಾರುತಿ ಮತ್ತು ಸಂಘದ ಕಲಾವಿದರು ಜಾನಪದ ಕಾರ್ಯಕ್ರಮವನ್ನು ಬಹಳ ಮನರಂಜಕವಾಗಿ ನಿರ್ವಹಿಸಿದರು. ತುಕ್ಕಪ್ಪಾ ವಿರಪ್ಪಾ ಅವರು ಜಾನಪದ ಜಾದು ಪ್ರದರ್ಶನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆಯನ್ನು ನೀಡಿದರು. ಮಾರುತಿ ಮಾಸ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ಈ ಕಾರ್ಯಕ್ರಮದ ಯಶಸ್ಸನ್ನು ತಿಳಿಸಲು ಮನವಿ ಮಾಡಿದ್ದಾರೆ.

























