Home ಜಿಲ್ಲೆ ಸಂಘಟನೆಯೇ ಬದಲಾವಣೆಯ ಶಕ್ತಿ:ಬಸವರಾಜ ಹೊರಟ್ಟಿ

ಸಂಘಟನೆಯೇ ಬದಲಾವಣೆಯ ಶಕ್ತಿ:ಬಸವರಾಜ ಹೊರಟ್ಟಿ

ಬೀದರ, ಫೆ.೨೫: ಸಂಘಟನೆ ಎನ್ನುವುದು ಬಹಳ ಮುಖ್ಯ, ನೀವು ಎಲ್ಲರೂ ಮಹಿಳಾ ಸಂಘವನ್ನು ಕಟ್ಟಿಕೊಂಡು ರಾಜ್ಯವ್ಯಾಪಿ ಸಂಘಟನೆ ರೂಪಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಸೋಮವಾರ ಪೂಜ್ಯ ಚೆನ್ನಬಸವ ಪಟ್ಟದೇವರ ರಂಗಮAದಿರದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಘಟಕದ ಉದ್ಘಾಟನೆ, ಮತ್ತು ಪದಗ್ರಹಣ ಕಾರ್ಯಕ್ರಮ ಹಾಗೂ ಸರಕಾರಾದ ಯೋಜನೆಗಳ ಅನುಷ್ಠಾನ ಮತ್ತು ಆಡಳಿತದಲ್ಲಿ ಮಹಿಳೆಯರ ಪಾತ್ರ ಕುರಿತು ಒಂದು ದಿನದ ಕಾರ್ಯಾಗಾರ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು
ಬೀದರ್‌ನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿರುವುದು ನನಗೆ ಅಪಾರ ಸಂತೋಷ ತಂದಿದೆ ಎಂದ ಅವರು ಹೆಣ್ಣು ಮಕ್ಕಳು ಸಮಾಜದ ಎಲ್ಲಾ ರಂಗಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಪ್ರಶಂಸಿದರು, ಇನ್ನಷ್ಟು ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶಿಸುವುದು ಅಗತ್ಯವೆಂದರು. ತಮ್ಮ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡುವುದು ತುಂಬಾ ಅವಶ್ಯಕ. ಹೋರಾಟದ ಮೂಲಕವೇ ಬದಲಾವಣೆ ಸಾಧ್ಯ ಎಂದು ಸಭಾಪತಿಗಳು ಅಭಿಪ್ರಾಯಪಟ್ಟರು.
ತಮ್ಮ ಜೀವನ ಅನುಭವವನ್ನು ಹಂಚಿಕೊAಡ ಅವರು, ನಾನು ಕೂಡ ಚಿಕ್ಕ ವಯಸ್ಸಿನಿಂದಲೇ ಹೋರಾಟದ ಮೂಲಕವೇ ಈ ಹಂತಕ್ಕೆ ಬಂದವನು. ನಿಮ್ಮ ಸಂಘದ ಹೋರಾಟಗಳಲ್ಲಿ ನಾನು ಸದಾ ನಿಮ್ಮ ಜೊತೆ ಇರುತ್ತೇನೆ, ಎಂದು ಭರವಸೆ ನೀಡಿದರು.
ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಮಾತನಾಡಿ, ಮಹಿಳೆ ಮತ್ತು ಪುರುಷರು ಸಮಾಜದಲ್ಲಿ ಒಂದೇ ನಾಣ್ಯದ ಎರಡು ಮುಖಗಳಂತೆ. ಇವರಿಬ್ಬರೂ ಇದ್ದಾಗ ಮಾತ್ರ ಮಾನವ ಸಮಾಜದ ಸೃಷ್ಟಿ ಹಾಗೂ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ದೇಶದ ಅತ್ಯುನ್ನತ ಹುದ್ದೆಗಳಿಂದ ಹಿಡಿದು ವಿಜ್ಞಾನ, ಆಡಳಿತ, ಅಂತರಿಕ್ಷ ಕ್ಷೇತ್ರಗಳವರೆಗೂ ಮಹಿಳೆಯರು ಸಾಧನೆ ಮಾಡಿರುವುದನ್ನು ಉಲ್ಲೇಖಿಸಿದ ಅವರು, ದ್ರೌಪದಿ ಮುರ್ಮು, ಇಂದಿರಾ ಗಾಂಧಿ, ಮದರ್ ತೆರೆಸಾ, ಕಲ್ಪನಾ ಚಾವ್ಲಾ ಮುಂತಾದ ಮಹನೀಯರ ಸಾಧನೆಯನ್ನು ಸ್ಮರಿಸಿದರು. ಐಎಎಸ್, ಐಪಿಎಸ್, ವಿಜ್ಞಾನಿಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿಯೂ ಮಹಿಳೆಯರು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ನಮ್ಮ ಸರ್ಕಾರ ಮಹಿಳೆಯರಿಗಾಗಿ ಋತುಚಕ್ರ ರಜೆ ಘೋಷಣೆ ಮಾಡುವ ಮೂಲಕ ಅವರ ನೋವಿಗೆ ಸ್ಪಂದಿಸಿದೆ ಎಂದು ತಿಳಿಸಿದ ಅವರು, ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಲಿಂಗ ತಾರತಮ್ಯಕ್ಕೆ ಕಡಿವಾಣ ಹಾಕಲು ಹಲವು ಕಾಯ್ದೆಗಳನ್ನು ಜಾರಿಗೆ ತಂದಿದೆ. ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ಸಂಘದ ಚಟುವಟಿಕೆಗಳನ್ನು ಮೆಚ್ಚಿಕೊಂಡ ಅವರು, ಸಂಘಕ್ಕೆ ಅಗತ್ಯವಿದ್ದಲ್ಲಿ ಅನುದಾನ ನೀಡಲು ಸದಾ ಸಿದ್ಧನಿದ್ದೇನೆ ಎಂದು ಸಚಿವರು ಭರವಸೆ ನೀಡಿದರು.
ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಮ್ ಖಾನ್ ಅವರು ಮಾತನಾಡಿ, ಬೀದರನಲ್ಲಿ ಮಹಿಳೆಯರು ಇಷ್ಟೊಂದು ಅಚ್ಚುಕಟ್ಟಾಗಿ ಹಾಗೂ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಸಂತೋಷ ತಂದಿದೆ. ಮಹಿಳೆಯರು ದೈವದತ್ತ ಸ್ವರೂಪಿಯರು. ಅವರು ಯಾವುದೇ ಕೆಲಸ ಕೈಗೊಂಡರೂ ಪ್ರಾಮಾಣಿಕತೆಯಿಂದ ಹಾಗೂ ನಿಷ್ಠೆಯಿಂದ ನಿರ್ವಹಿಸುತ್ತಾರೆ. ಈ ಸಮಾಜದಲ್ಲಿ ಆಫೀಸ್ ಕೆಲಸ, ಮನೆ ಮಕ್ಕಳ ಜವಾಬ್ದಾರಿ ಹಾಗೂ ಇತರೆ ಎಲ್ಲಾ ಕರ್ತವ್ಯಗಳನ್ನು ಸಮರ್ಪಕವಾಗಿ ನಿಭಾಯಿಸಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಳ್ಳುವುದು ಸಾಮಾನ್ಯ ಮಾತಲ್ಲ. ಮಹಿಳೆಯರ ಶ್ರಮ, ತ್ಯಾಗ ಹಾಗೂ ಸಂಘಟಿತ ಶಕ್ತಿಯನ್ನು ಕೊಂಡಾಡಿದ ಅವರು, ಮಹಿಳಾ ಸಂಘದ ಬೆಳವಣಿಗೆಗೆ ಸರ್ಕಾರದ ಬೆಂಬಲ ಸದಾ ಇರುತ್ತದೆ ಎಂದು ಭರವಸೆ ನೀಡಿದರು. ಇದೇ ವೇಳೆ ತಮ್ಮ ಅನುದಾನದಿಂದ ಈ ಮಹಿಳಾ ಸಂಘಕ್ಕೆ ರೂ.೨೫ ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದರು.
ಹೆಣ್ಣು ಮಕ್ಕಳು ಸಮಾಜದ ಎಲ್ಲಾ ರಂಗಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಪ್ರಶಂಸಿಸಿದ ಅವರು, ಇನ್ನಷ್ಟು ಸಂಘಟಿತರಾಗಿ ಒಗ್ಗಟ್ಟು ಪ್ರದರ್ಶಿಸುವುದು ಅಗತ್ಯವೆಂದು ತಿಳಿಸಿದರು. ತಮ್ಮ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡುವುದು ತುಂಬಾ ಅವಶ್ಯಕ. ಹೋರಾಟದ ಮೂಲಕವೇ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ತಮ್ಮ ಜೀವನ ಅನುಭವವನ್ನು ಹಂಚಿಕೊAಡ ಅವರು, ನಾನು ಕೂಡ ಚಿಕ್ಕ ವಯಸ್ಸಿನಿಂದಲೇ ಹೋರಾಟದ ಮೂಲಕವೇ ಈ ಹಂತಕ್ಕೆ ಬಂದವನು. ನಿಮ್ಮ ಸಂಘದ ಹೋರಾಟಗಳಲ್ಲಿ ನಾನು ಸದಾ ನಿಮ್ಮ ಜೊತೆ ಇರುತ್ತೇನೆ, ಎಂದು ಭರವಸೆ ನೀಡಿದರು.
ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ರೋಶನಿಗೌಡ ಅವರು ಪ್ರಾಸ್ತಾವಿಕ ಮಾತನಾಡಿ, ಇಂದಿನ ಸಮಾಜದಲ್ಲಿ ಹೆಣ್ಣು ಗಂಡು ಎಂದು ಮೇಲು ಕೀಳು ಎನ್ನುವ ತಾರತಮ್ಯ ನಿವಾರಣೆ ಆಗಬೇಕು ಅಂದಾಗ ಮಾತ್ರ ಸಮಾಜದಲ್ಲಿ ಮಹಿಳೆಯರು ಅಬಲೆ ಅಲ್ಲ ಅವಳು ಸಬಲೆ ಅಂತಾ ಗೊತ್ತಾಗುವುದು ಎಂದು ಸಮಾಜದಲ್ಲಿರುವ ತಾರತಮ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮಹಿಳೆಯನ್ನು ಅಬಲೆ ಎಂದು ಕರೆಯುವ ಮನೋಭಾವನೆ ಸಂಪೂರ್ಣವಾಗಿ ದೂರವಾದಾಗ ಮಾತ್ರ ನಿಜವಾದ ಸಮಾನತೆ ಸಾಧ್ಯ. ಮಹಿಳೆ ಅಬಲೆ ಅಲ್ಲ, ಅವಳು ಸಬಲೆ. ಅವಕಾಶ ಸಿಕ್ಕಾಗ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ, ಎಂದು ಅವರು ಸ್ಪಷ್ಟವಾಗಿ ಹೇಳಿದರು.
ಸಿದ್ದಾರೆಡ್ಡಿ ಫೌಂಡೇಶನ್ ಅಧ್ಯಕ್ಷರಾದ ಗುರಮ್ಮಾ ಸಿದ್ದಾರೆಡ್ಡಿ ಮಾತನಾಡಿ, ಮಹಿಳಾ ಸಬಲೀಕರಣದ ಮಹತ್ವವನ್ನು ಒತ್ತಿ ಹೇಳಿದರು. ಮಹಿಳಾ ಸರಕಾರಿ ನೌಕರರು ಸಮಾಜದ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸುತ್ತಿದ್ದು, ಅವರಿಗೆ ಸ್ವಂತ ಭವನ ನಿರ್ಮಾಣವಾಗುವುದು ಸಂಘಟನೆಯ ಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡಲಿದೆ ಎಂದು ಹೇಳಿದರು.
ಅವರು ವೈಯಕ್ತಿಕವಾಗಿ ೧೦೦x೧೦೦ ಅಡಿ ಜಾಗವನ್ನು ಮಹಿಳಾ ಸರಕಾರಿ ನೌಕರರ ಸಂಘದ ಭವನ ನಿರ್ಮಾಣಕ್ಕಾಗಿ ದಾನವಾಗಿ ನೀಡುವುದಾಗಿ ಘೋಷಣೆ ಮಾಡಿದರು. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯೆಯರು ಗುರಮ್ಮಾ ಸಿದ್ದಾರೆಡ್ಡಿ ಅವರ ಉದಾರ ಮನೋಭಾವವನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅಕ್ಕಪಡೆ ರಾಜ್ಯ ಸಂಯೋಜಕರಾದ ಶೈನಿ ಪ್ರದೀಪ್ ಗುಂಟಿ, ಔರಾದನ ತಾಲೂಕು ವೈದ್ಯಧಿಕಾರಿಗಳಾದ ಡಾ. ಗಾಯತ್ರಿ ವಿಜಯಕುಮಾರ ಹಾಗೂ ಜೂನಿಯರ್ ಮಿಸ್ ಇಂಡಿಯಾ ಸೆಕೆಂಡ್ ರನ್ನರ್ ಆಫ್ ಕು. ಪೂರ್ವಿ ಸಂಜಯಕುಮಾರ್ ಬಿರಾದಾರ, ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಸವ ಕಲ್ಯಾಣದ ಪರಮ ಪೂಜ್ಯ ಶಿವಾನಂದ ಮಹಾಸ್ವಾಮಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಶಶಿಕಲಾ ಕೆ., ವೀಣಾ ಕೃಷ್ಣಮೂರ್ತಿ, ಸಿಂಧು ರಘು ಎಚ್.ಎಸ್, ಫಣಿಂದ್ರ ಪ್ರಸಾದ್, ಜಿಲ್ಲಾ ಘಟಕದ ಅಧ್ಯಕ್ಷೆ ಪಾರ್ವತಿ ವಿ. ಸೋನಾರೆ, ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಅಶ್ವಿನಿ ರುಕುಂಪುರ್, ಕೋಶಾಧ್ಯಕ್ಷರಾದ ಪದ್ಮಾ ಮಡಿವಾಳ, ವಿಜಯಶೀಲಾ ಎಸ್, ಲಕ್ಷ್ಮಿ ಬಿರಾದಾರ, ಸುನಿತಾ ಪಟ್ವಾರಿ, ಶಾರದಾ ಸಿ.ಟಿ.ಓ, ಸಂಗೀತಾ ಬಿರಾದಾರ, ಶಿವಲೀಲಾ, ಶಾರದಾ ಕಲ್ಮಕರ, ಆರತಿ ಪಾಟೀಲ್, ಡಾ, ಸುಧಾ ಜಿ, ಕಾವೇರಿ ಪುಲೇಕಾರ, ಶಕುಂತಲಾ, ಕ್ಲೇಮೆಂಟಿನಾ, ಭಾನುಪ್ರಿಯ ಅರಳಿ, ಉಮಾದೇವಿ, ಸುಜಾತ ಪೂಜಾರಿ, ಗೀತಾ ಉದ್ಗಿರೆ, ರೇಣುಕಾ ಕೋಡೆ, ನರಸಮ್ಮ ಪಾಟೀಲ್, ಜರಿನಾ ಬೇಗಂ, ಸೋನಿಕಾ, ಮುಸ್ತಾನಬೀ, ವಾಣಿ, ಶೋಭಾವತಿ ರಾಥೋಡ್, ಜಯಶ್ರೀ ವಿಲಾಸರಾವ, ಸುವರ್ಣ ಎಸ್, ಮಂಜುಳಾ ಎಸ್, ಸುರೇಖಾ ಮನ್ನೋಳಿ, ದೇವಿಕಾ ಆರ್, ರೇಣುಕ ವಾಸ್ರೆ, ಯಮುನಾ ಕಾಂಬಳೆ, ಆಮೇರಾ ಬೇಗಂ, ಸಿಂಧುಜಾ ಭಾಗವತ್, ಸುಜಾತಾ ಖೈರಾಟಕರ್, ಸುನೀತಾ ಪುಲಾರೆ, ಸರಸ್ವತಿ ಸ್ಭೆರಿದಂತೆ ಜಿಲ್ಲೆಯ ಸರಕಾರಿ ಮಹಿಳಾ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.