
ಕೋಲಾರ.ಜ,೭- ಅಂಗಾಂಗಗಳ ಕಸಿಯ ಚಿಕಿತ್ಸೆಗಳು ದೇಶದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಿದೆ ಮಾನವನ ದೇಹದಲ್ಲಿನ ಯಾವೂದೇ ಅಂಗಗಳು ವಿವಿಧ ಕಾರಣಗಳಿಗೆ ಸ್ಥಗಿತಗೊಂಡಾಗ ಅದನ್ನು ಕಸಿಯ ಚಿಕಿತ್ಸೆ ಅಥವಾ ಬದಲಿ ಮಾಡುವಂತ ವಿಧಾನಗಳ ವಿಜ್ಞಾನದ ನೂತನ ಸಂಶೋಧನೆಯ ಅವಿಷ್ಕಾರಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಕಾರ್ಡಿಯೋಥೋರ್ಯಾಸಿಕ್ ವ್ಯಾಸ್ಯ್ಕೂಲರ್ ಸರ್ಜರಿ ಹಾರ್ಟ್ ಅಂಡ್ ಲಂಗ್ ಟ್ರಾನ್ಸ್ ಪ್ಲ್ಯಾಂಟ್ ಸರ್ಜರಿ ವಿಭಾಗದ ಮುಖ್ಯಸ್ಥರು ಮತ್ತು ಸಲಹೆಗಾರರಾದ ಡಾ. ದೇವಾನಂದ್ ಎನ್.ಎಸ್. ಅಭಿಪ್ರಾಯ ಪಟ್ಟರು.
ವಿಶ್ವದಲ್ಲಿಂದು ವಿಜ್ಞಾನದ ಅಧುನಿಕ ತಂತ್ರಜ್ಞಾನಗಳ ಜೀವಸೆಲೆಯ ಭರವಸೆ ನೀಡುವ ಹೃದಯ ಕಸಿ ಹಾಗೂ ಶವದ ಅಂಗಾಂಗ ದಾನದ ಭರವಸೆಗಳು ಮತ್ತು ಸವಾಲುಗಳ ಕುರಿತು ನಗರದ ಪತ್ರಕರ್ತ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವನಲ್ಲಿನ ಶ್ವಾಸಕೋಶ, ಹೃದಯ, ಲಿವರ್, ಕಿಡ್ನಿ, ಚರ್ಮ, ಕಣ್ಣು ಸೇರಿದಂತೆ ಅನೇಕ ಅಂಗಾಂಗಗಳನ್ನು ವರ್ಗಾಯಿಸಲು ಸಾಧ್ಯವಿದೆ. ಸಾಮಾನ್ಯವಾಗಿ ಮಾನವನಲ್ಲಿ ಎರಡು ಕಿಡ್ನಿ ಇದ್ದಾಗ ಒಂದನ್ನು ವರ್ಗಾಯಿಸ ಬಹುದು. ಲಿವರ್ ಸ್ವಲ್ಪ ಭಾಗವನ್ನು ಕಸಿ ಮಾಡ ಬಹುದು ಕೆಲವು ಬದುಕಿರುವ ವ್ಯಕ್ತಿಯಿಂದ ಪಡೆಯ ಬಹುದು ಇನ್ನು ಕೆಲವೊಂದನ್ನು ಮೆದುಳು ನಿಷ್ಕ್ರಿಯಗೊಂಡಾಗ ಪಡೆಯಬಹುದಾಗಿದೆ ಎಂದು ಉದಾಹರಿಸಿದ ಓರ್ವ ವ್ಯಕ್ತಿಯು ಮೆದುಳು ನಿಷ್ಕ್ರಿಯೆ ಗೊಂಡು ಮರಣ ಹೊಂದಿದ ಕೆಲವು ಗಂಟೆಗಳಲ್ಲಿ ಅಂಗಾಂಗಗಳನ್ನು ವರ್ಗಾಯಿಸಬೇಕಾಗುವುದು. ಮರಣ ಹೊಂದು ಬಹಳ ಸಮಯವಾದರೆ ಅಂಗಾಂಗಗಳು ಪ್ರಯೋಜನಕ್ಕೆ ಬಾರದು ಹಾಗಾಗಿ ಈ ಅವಕಾಶವನ್ನು ಸದ್ಬಳಿಸಿ ಕೊಳ್ಳುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾದ್ಯಮದ ಮೂಲಕ ಮಾಡಲಾಗುತ್ತಿದೆ ಎಂದು ಹೇಳಿದರು.
ರೋಗಿಗಳಿಗೆ ದೀರ್ಘಕಾಲದವರೆಗೆ ಡಯಾಲಿಸಿಸ್ ಬೆಂಬಲ ನೀಡುವ ಮೂತ್ರಪಿಂಡ ವೈಫಲ್ಯಕ್ಕಿಂತ ಇದು ಭಿನ್ನವಾಗಿದೆ. ಹೃದಯ ವೈಫಲ್ಯಕ್ಕೆ ಚಿಕಿತ್ಸೆ ನೀಡಲು ಅತ್ಯಂತ ಕಡಿಮೆ ಸಮಯ ಇರುತ್ತದೆ. ಒಮ್ಮೆ ಹೃದಯ ವಿಫಲವಾದರೆ ಇತರೆ ಅಂಗಾಂಗಳು ಕೊಡ ಬೇಗ ಹಾನಿಯಾಗುತ್ತದೆ ಈ ಸಂದರ್ಭದಲ್ಲಿ ಕಸಿ ಮಾಡುವ ಮೂಲಕ ಜೀವ ಉಳಿಸುವ ಏಕೈಕೆ ಅವಕಾಶವಾಗಿದೆ, ಶಸ್ತ್ರ ಚಿಕಿತ್ಸೆ ದೃಷ್ಠಿಯಿಂದ ಇದು ತುರ್ತು ಸ್ಥಿತಿಯಾಗಿದೆ. ಸಕಾಲದಲ್ಲಿ ದಾನಿಯ ಹೃದಯವು ಜೀವನ ಮತ್ತು ಸಾವಿನ ನಡುವೆ ಸೇತುವೆಯಾಗುತ್ತದೆ ಎಂದು ತಿಳಿಸಿದರು.
ವೈದ್ಯಕೀಯ ಲಭ್ಯತೆ ಇದ್ದರೂ ಶವದ ಅಂಗಾಂಗ ದಾನವು ಹಲವು ಸವಾಲುಗಳನ್ನು ಒಡ್ಡುವುದು ತ್ವರಿತವಾಗಿ ವೈದ್ಯಕೀಯ ಕಾನೂನು ಅನುಮತಿಗಳು ದಾನಿ ಮತ್ತು ಸ್ವೀಕರಿಸುವ ಆಸ್ಪತ್ರೆಗಳ ನಡುವಿನ ಸಮನ್ವತೆ ಸಹಕಾರ ನಿಯಂತ್ರಿತ ಅಂಗಾಂಗ ಹಂಚಿಕೆ ಪ್ರೋಟೋಕಾಲನ್ನು ಕಟ್ಟುನಿಟ್ಟಾಗಿ ಪಾಲಿಸುವ ಬದ್ದತೆ, ಇದರೊಂದಿಗೆ ದುಃಖಿತ ಕುಟುಂಬದೊಂದಿಗೆ ಸೂಕ್ಷ್ಮ ಸಮಾಲೋಚನೆಗಳನ್ನು ಸಾಮಾನ್ಯವಾಗಿ ದುರಂತ ನಡೆದ ಕೆಲವೇ ಗಂಟೆಗಳಲ್ಲಿ ನಡೆಯ ಬೇಕಾಗಿರುವುದು ಒಂದು ಸವಾಲಾಗಿ ಪರಿಗಣಿಸ ಬೇಕಾಗುತ್ತದೆ ಎಂದರು
ಕೋಲಾರದ ೨೯ ವರ್ಷದ ಕೃಷಿ ಪದವೀಧರು ಮತ್ತು ಮಾಜಿ ರಾಷ್ಟ್ರೀಯ ಕಾರ್ಫ್‌ಬಾಲ್ ಕ್ರೀಡಾ ಪಟು ಚೇತನಾ ಅವರಿಗೆ ಹೇರಿಗೆಯ ೫ ತಿಂಗಳ ನಂತರ ಅವರಿಗೆ ಹಠಾತ್ ಉಸಿರಾಟದ ತೊಂದರೆ ಉಂಟಾಗಿ ಕಾರ್ಡಿಯೋಜೆನಿಕ್ ಅಘಾತಕ್ಕೆ ಒಳಗಾದರು. ಅವರಿಗೆ ತಪಾಸಣೆಯಲ್ಲಿ ಇ.ಸಿ.ಎಂ.ಓ ಸೇರಿದಂತೆ ದೀರ್ಘಕಾಲದ ಜೀವ ಬೆಂಬಲದ ಅಗತ್ಯವಿತ್ತು. ಕಾರ್ಡಿಯೋಜೆನಿಕ್ ಅಘಾತದಲ್ಲಿದ ಅವರಿಗೆ ಮೂರ್ತ ವಿಸರ್ಜನೆಯ ತೊಂದರೆ ಅನುಭವಿಸುತ್ತಿದ್ದರು ಹಲವು ಐನೋಟ್ರೋಫಿಕ್ ಬೆಂಬಲಗಳ ಅಗತ್ಯವಿತ್ತು. ಎಂದು ಹೇಳಿದರು.
ಮುಂದುವರೆಸಿದ ಕಾಡಿಯೋಥೋರಾಸಿಕ್ ನಾಳಿಯ ಶಸ್ತ್ರ ಚಿಕಿತ್ಸೆ ಹೃದಯ ಮತ್ತು ಶ್ವಾಸ ಕೋಶ ಕಸಿ ಶಸ್ತ್ರ ಚಿಕಿತ್ಸೆಯ ಸಲಹೆಗಾರರಾದ ಡಾ. ಭಾಸ್ಕರ್ ಬಿ.ವಿ ಹಾಗೂ ನಾರಾಯಣ ಹೃದಲಯದ ಡಾ. ಯಶ್ವಂತ್ ಮಾತನಾಡಿ ಈ ರೀತಿಯ ಹಲವು ವೈದ್ಯಕೀಯ ಬೆಂಬಲದ ಹೊರತಾಗಿಯೂ ಇಸಿವರ್‌ನಲ್ಲಿ ೫೦ ದಿನಗಳ ಬಳಿಕವೂ ಇವರ ಹೃದಯ ಕಾರ್ಯದಲ್ಲಿ ಯಾವೂದೇ ಸುಧಾರಣೆ ಕಂಡು ಬಾರದ ಹಿನ್ನಲೆಯಲ್ಲಿ ಸಂಬಂಧಿಸಿದ ಇತರೆ ತಜ್ಞರೊಂದಿಗೆ ಚರ್ಚಿಸಿ ಅವರನ್ನು ಹೃದಯದ ಕಸಿಯ ಪಟ್ಟಿಗೆ ಸೇರ್ಪಡೆ ಮಾಡಲಾಯಿತು ನಂತರದಲ್ಲಿ ಸೂಕ್ತವಾದ ಶವದ ದಾನಿಯ ಹೃದಯ ಪಡೆದು ಕಸಿ ಮಾಡಲಾಯಿತು ನಂತರದಲ್ಲಿ ಅವರ ಹೃದಯವು ಕಾರ್ಯವು ತಕ್ಷಣವೇ ಸುಧಾರಣೆ ಕಂಡು ಬಂದಿತು ಇತರೆ ಅಂಗಾಂಗಳ ಕಾರ್ಯವು ಸಮರ್ಪವಾಗಿ ಪುನಾರಂಭಗೊಂಡಿತು ಈವರೆಗೆ ನೀಡಲಾಗಿದ್ದ ವೆಂಟಿಲೇಟರ್ ಸಂರ್ಪಕ ಕಡಿತ ಗೊಳಿಸಿ ಸಹಜದ ಸ್ಥಿತಿಗೆ ಮರಳುವಂತಾಯಿತು ಎಂದು ವಿವರಿಸಿದರು.
ದಾನಿಯ ಒಂದು ಹೃದಯದಿಂದ ಚೇತನ ಅವರು ಬದುಕುವಂತೆ ಇನ್ನು ಹಲವಾರು ಅಂಗಾಂಗಗಳಿಂದ ಸುಮಾರು ೬ ಮಂದಿಗೆ ಮರು ಜೀವ ನೀಡ ಬಹುದಾಗಿದೆ. ಅದರೆ ಈ ರೀತಿ ಅಂಗಾಂಗಗಳ ದಾನದ ಪ್ರಮಾಣವು ತೀವ್ರ ಕಡಿಮೆ ಇರುವುದು. ಮೆದುಳು ನಿಷ್ಟ್ಕ್ರೀಯೆ ಗೊಂಡು ಮರಣವನ್ನಾಪ್ಪಿದವರು ಸಾಕಷ್ಟು ಮಂದಿ ಇದ್ದರೂ ಅವರ ಕುಟುಂಬದವರು ಅಥವಾ ಮರಣ ಹೊಂದುವ ಮುನ್ನ ಆ ವ್ಯಕ್ತಿಯು ತನ್ನ ದೇಹವನ್ನು ವೈದ್ಯಕೀಯ ಕ್ಷೇತ್ರಕ್ಕೆ ದಾನ ಮೂಲಕ ಅರ್ಪಿಸಿದರೆ ಹಲವಾರು ಮಂದಿಯ ಪುನರ್ ಜೀವಕ್ಕೆ ಅವಕಾಶ ನೀಡಿದಂತಾಗುವುದು ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸ ಬೇಕಾಗಿದೆ ಎಂದು ಹೇಳಿದರು.


























