ಓಪನ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆ

ಕೋಲಾರ,ಸೆ.೧೩- ಜಪಾನ್ ಶೀಟು ರಯೋ ಕರಾಟೆ ಸ್ಕೂಲ್ ಮತ್ತು ರಾಮು ಮಾರ್ಷಲ್ ಆರ್ಟ್ ಅಕಾಡೆಮಿ ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಓಪನ್ ಕರಾಟೆ ಚಾಂಪಿಯನ್‌ಶಿಫ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.


ಆಂಧ್ರಪ್ರದೇಶ ತೆಲಂಗಾಣ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಿಂದ ೫೦೦ಕ್ಕೂ ಹೆಚ್ಚು ಕ್ರೀಡಾ ಸ್ಪರ್ಧೆಗಳು ಭಾಗವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಎಸಿ ಕಚೇರಿಯ ತಹಸಿಲ್ದಾರ್ ಮಂಜುನಾಥ್, ಕನ್ನಡ ಸ್ವಾಭಿಮಾನ ಸಂಘಟನೆ ರಾಜ್ಯಾಧ್ಯಕ್ಷ ರಾಮಾಂಜಿನಪ್ಪ, ಕರ್ನಾಟಕ ರಾಜ್ಯ ಪರಿವರ್ತನಾ ಸಂಘಟನೆಯ ಅಧ್ಯಕ್ಷ ತಾರಕ ಮಂಜು, ಸರ್ಕಾರಿ ನೌಕರ ಸಂಘಟನೆ ಮುಖಂಡರಾದ ಮುರಳಿ ಮೋಹನ್, ಯುವಜನ ಸೇವೆ ಮತ್ತು ಕ್ರೀಡಾ ಸಹಾಯಕ ನಿರ್ದೇಶಕಿ ಆರ್. ಗೀತಾ, ರೋಟರಿ ಸಂಸ್ಥೆ ಕೋಲಾರ ಕಾರ್ಯದರ್ಶಿ ವಿ.ಎಂ ಪ್ರಭಾಕರ್, ಅಂತರರಾಷ್ಟ್ರೀಯ ಕ್ರೀಡಾಪಟು ಪದಾಂಡಳ್ಳಿ ರವಿ, ಜಪಾನ್ಸಿಟೋರಿಯೋ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷ ಕರಾಟೆ ರಾಮು, ಅಖಿಲ ಕರ್ನಾಟಕ ರಾಜ್ಯ ಕರಾಟೆ ಸಂಘದ ಉಪಾಧ್ಯಕ್ಷ ರಾಜು, ಕರಾಟೆ ಕೋಚುಗಳಾದ ಮಾನಿಷ ಎಂ, ಗಬ್ಬುರ್, ಏಷ್ಯನ್ ರೆಫ್ರಿ ಪ್ರಭಾಕರ್, ಆಂಧ್ರಪ್ರದೇಶ ಜಪಾನ್ಸಿಟೋರಿಯೋ ಕರಾಟೆ ಸ್ಕೂಲ್ ರಾಜ್ಯ ಕಾರ್ಯದರ್ಶಿ ಪ್ರಭಾಕರ್, ಅಧ್ಯಕ್ಷರಾದ ಶೇಖರ್, ಅನಂತಪುರ ಡಿಸ್ಟಿಕ್ ತಾಡಪತ್ರಿ ಶ್ರೀನಿವಾಸ್ ರೆಡ್ಡಿ, ಹಿಂದುಪುರ ನರೇಶ್, ಚಿಕ್ಕ ತಿರುಪತಿ ಶಾಂತರಾಮ್, ಬೆಂಗಳೂರು ಸುಬ್ರಮಣಿ, ಬಂಗಾರಪೇಟೆ ಆಂಜನೇಯ ಮೂರ್ತಿ, ಶ್ರೀನಿವಾಸಪುರ ಕರಾಟೆ ಶಿಕ್ಷಕರಾದ ನಾಗರಮಣ, ವೈಷ್ಣವಿ, ಮುಳಬಾಗಿಲು ಲೋಕೇಶ್, ಕೋಲಾರ ಭರತ್, ನಾರಾಯಣ ಪೂಜಾರ್ ಮುಂತಾದವರು ಭಾಗವಹಿಸಿದ್ದರು. ಕರಾಟೆ ನಿವೃತ್ತ ಶಿಕ್ಷಕರಾದ ರಾಮ ಲಕ್ಷ್ಮಮ್ಮ ರವರನ್ನು ಸನ್ಮಾನಿಸಲಾಯಿತು.