Home ಜಿಲ್ಲೆ ಕಲಬುರಗಿ ಗ್ರಾಮ ಸ್ವರಾಜ್ಯ ಸಾಕಾರವಾಗಲು ಯುವಕರಿಂದ ಮಾತ್ರ ಸಾಧ್ಯ: ಡಾ. ಶರಣಪ್ಪ ಗುಂಡಗುರ್ತಿ

ಗ್ರಾಮ ಸ್ವರಾಜ್ಯ ಸಾಕಾರವಾಗಲು ಯುವಕರಿಂದ ಮಾತ್ರ ಸಾಧ್ಯ: ಡಾ. ಶರಣಪ್ಪ ಗುಂಡಗುರ್ತಿ

ಜೇವರ್ಗಿ:ಏ.8: ಗ್ರಾಮ ಸ್ವರಾಜ್ಯ ಸಾಕಾರವಾಗಲು ಯುವಕರಿಂದ ಮಾತ್ರ ಸಾಧ್ಯ ಎಂದು ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಶರಣಪ್ಪ ಗುಂಡಗುರ್ತಿ ಹೇಳಿದರು. ಅವರು
ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ
ಪ್ರಾಸ್ತಾವಿಕ ಮಾತನಾಡುತ್ತಾ ಗಾಂಧೀಜಿಯ ಕನಸು ನನಸಾಗಲು ಯುವಕರಿಂದ ಮಾತ್ರ ಸಾಧ್ಯ ಸ್ವರಾಜ್ಯ’ ಪರಿಕಲ್ಪನೆಯು ಪ್ರತಿ ಹಳ್ಳಿಯೂ ಸ್ವಾವಲಂಬಿಯಾಗಿ, ತನ್ನ ಅಗತ್ಯಗಳನ್ನು ತಾನೇ ಪೂರೈಸಿಕೊಳ್ಳುವ ಮಾದರಿ ಆಡಳಿತ ವ್ಯವಸ್ಥೆಯಾಗಿದೆ. ಗ್ರಾಮ ಪಂಚಾಯತ್ ಬಲವರ್ಧನೆ, ಖಾದಿ-ಕೈಗಾರಿಕೆಗಳ ಉತ್ತೇಜನ ಮತ್ತು ಅಹಿಂಸಾತ್ಮಕ ಜೀವನಶೈಲಿಯನ್ನು ಪ್ರತಿಪಾದಿಸುತ್ತದೆ. ಗ್ರಾಮೀಣ ಭಾರತದ ಸರ್ವತೋಮುಖ ಅಭಿವೃದ್ಧಿ, ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸ್ವತಂತ್ರವೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.ಕೆಲ್ಲೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನೆ ಸಮಾರಂಭದಲ್ಲಿ ಉದ್ಘಾಟಕರಾಗಿ ಮಾತನಾಡಿದ ಶ್ರೀ ರಾಜಶೇಖರ್ ಸೀರಿ ಎನ್ ಎಸ್ ಎಸ್ ನಿಂದ ನಾಯಕತ್ವ ಗುಣಗಳನ್ನು ಬೆಳೆಸಬಹುದು ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ ಸುಧೀಂದ್ರ ವಕೀಲ ಅವರು ರಾಷ್ಟ್ರೀಯ ಸೇವಾ ಯೋಜನೆಯು ರಾಷ್ಟ್ರೀಯ ಸೇವಾ ಮನೋಭಾವನೆಗಳನ್ನು ಬೆಳೆಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಂತಾ ಬಿ. ಅಷ್ಟಿಗೆ ಅವರು ಕಾರ್ಯಕ್ರಮದ ಉದ್ದೇಶ ಅದರ ಮಹತ್ವದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು ಕಾರ್ಯಕ್ರಮದಲ್ಲಿ ಕೆಲ್ಲೂರು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಶ್ರೀ ತಿಪ್ಪಯ್ಯ ಪತ್ತಿ ಕೂಡ ಮಾತನಾಡಿದರು ಡಾ. ಶರಣಪ್ಪ ಗುಂಡುಗುರ್ತಿ ಅವರು ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಕು. ಅಂಜಲಿ ರಾಷ್ಟ್ರೀಯ ಸೇವಾ ಯೋಜನೆಯ ಹಾಡನ್ನು ಹಾಡಿದರು. ಶ್ರೀ ಕುಪೇಂದ್ರ ರಾಥೋಡ್ ಸ್ವಾಗತಿಸಿದರು. ಡಾ. ಖಾಜಾವಲಿ ಇಚನಾಳ ನಿರೂಪಣೆ ಮಾಡಿದರು ಡಾ. ಶ್ರೀಧರ್ ವಂದಿಸಿದರು ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ಹಿರಿಯ ಮುಖಂಡರು ಶಿಬಿರಾರ್ಥಿಗಳು ಬೋಧಕ ಹಾಗೂ ಬೋಧಕೆತರ ಸಿಬ್ಬಂದಿಗಳು ಕಾಲೇಜಿನ ಅತಿಥಿ ಉಪನ್ಯಾಸಕರು ಹಾಜರಿದ್ದರು.