ಸಂಜೆವಾಣಿ ವಾರ್ತ
ಹುಮನಾಬಾದ್ :ಅ.೨೬:ಅತಿಯಾದ ಮೊಬೈಲ್ ಬಳಕೆಯ ಕಾರಣ ಸಮಾಜ ದುರ್ಗತಿಯತ್ತ ಸಾಗುತ್ತಿದೆ ಹುಮನಾಬಾದ್ ಹಿರೇಮಠ ಸಂಸ್ಥಾನದ ಪೀಠಾಧಿಪತಿ ರೇಣುಕಾ ವೀರ ಗಂಗಾಧರ ಶಿವಾಚಾರ್ಯರು ಹೇಳಿದರು
ಶ್ರೀರಾಮ ಸೇವಾ ಸಂಕಲ್ಪ ವತಿಯಿಂದ ಸಮೀಪದ ಮಾಣಿಕನಗರದಲ್ಲಿರುವ ಮಾಣಿಕ್ಯ ಸೌಧದಲ್ಲಿ ಶನಿವಾರ ಆಯೋಜಿಸಿದ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಸಮಾರಂಭ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪುಸ್ತಕದ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಬೇಕಾದ ಚಿಕ್ಕ ಚಿಕ್ಕ ಶಾಲಾ ಮಕ್ಕಳ ಕೈಯಲ್ಲಿಂದು ಮೊಬೈಲ್ ಕಾಣಿಸಿಕೊಳ್ಳುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ಉತ್ತಮ ಚಾರಿತ್ಯ ಇದ್ದರೆ ಬಲಿಷ್ಠ ದೇಶ ನಿರ್ಮಾಣ ಸಾಧ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಶಾಸಕ ಡಾ. ಸಿದ್ದು ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ೧೯೭೯ರಲ್ಲಿ ಸ್ಥಾಪಿತವಾದ ಶ್ರೀ ರಾಮ ಫೈನಾನ್ಸ್ ಸಣ್ಣ ರಸ್ತೆ ಸಾರಿಗೆ ನಿರ್ವಾಹಕರು ಮತ್ತು ಸಣ್ಣ ವ್ಯಾಪಾರಿಗಳ ಮಾಲೀಕರ ಅಗತ್ಯಗಳನ್ನು ಪೂರೈಸುವ ಸಮಗ್ರ ಹಣಕಾಸು ಸಂಸ್ಥೆಯಾಗಿದ್ದು. ಈ ಸಂಸ್ಥೆ ೨೦೧೩ರಲ್ಲಿ ಶ್ರೀರಾಮ್ ಫೌಂಡೇಶನ್ ಎಂಬ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಇದರ ಮುಖಾಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಿವುಡ ಮಕ್ಕಳ ಶಾಲೆ ನಡೆಸುವುದು ವೃದ್ಧಾಶ್ರಮ ನಡೆಸುವುದು ಮತ್ತು ಪರಿಸರ ಸಂರಕ್ಷಣೆಗೆ ಗಿಡಗಳನ್ನು ನೆಡುವುದು ಮತ್ತು ರಸ್ತೆ ಬದಿಯಲ್ಲಿರುವ ವೃದ್ಧರಿಗೆ ಶಾಲು ವಿತರಿಸುವುದು. ಸಣ್ಣ ವ್ಯಾಪಾರಿಗಳಿಗೆ ಛತ್ರಿ ಸೌಲಭ್ಯ ಕಲ್ಪಿಸುವುದು ಹಾಗೂ ಸ್ವಚ್ಛತ ಕಾರ್ಯಕ್ರಮ ಮಾಡಿ ಈ ಸಂಸ್ಥೆ ಸಾರ್ವಜನಿಕ ಹೃದಯ ಗೆದ್ದಿದೆ ಎಂದರು.
ಮಾಜಿ ಶಾಸಕ ಸುಭಾಷ ಕಲ್ಲೂರ್ ಮಾತನಾಡಿ, ‘ಪ್ರತಿಯೊಂದು ಖಾಸಗಿ ಸಂಸ್ಥೆಗಳು ಇಂತಹ ಸಮಾಜಿಕ ಕಾರ್ಯಗಳನ್ನು ಮಾಡಬೇಕು. ಸಮಾಜದ ಶಿಕ್ಷಣ, ಸಂಸ್ಕೃತಿ ಹಾಗೂ ಸಮುದಾಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ತಮ್ಮ ಜೊತೆಗೆ ಸಮಾಜದ ಅಭಿವೃದ್ಧಿ ಮಾಡುವುದಕ್ಕೆ ಪೂರಕ ವಾತಾವರಣ ನಿರ್ಮಾಣ ಆಗುತ್ತದೆ. ಇನ್ನು ವಾಹನ ಚಾಲಕರು ತಮ್ಮ ದುಡಿಮೆ ಜೀವನ ನಿರ್ವಹಣೆಗೆ ಸಾಕಾಗುವ ಸಂದರ್ಭದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಕೊಡಲು ಸಾಧ್ಯವಾ . ಗುವುದಿಲ್ಲ. ಆದರೆ, ಶ್ರೀರಾಮ ಸೇವಾ ಸಂಕಲ್ಪದಿAದ ನೀಡಲಾದ ಪ್ರೋತ್ಸಾಹ-ಧನದ ಹಣವನ್ನು ಪುಸ್ತಕ, ಪೆನ್ನು ಹಾಗೂ ಇತರೆ ಶೈಕ್ಷಣಿಕ ಸಂಬAಧಿತ ಸಾಮಗ್ರಿ ಖರೀದಿಗೆ ಬಳಕೆ ಮಾಡಿಕೊಳ್ಳಬೇಕು. ಎಲ್ಲ ಹಣವೂ ಸದುಪಯೋಗ ಆಗಬೇಕು’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ರೆಡ್ಡಿ, ಪಂಚಾಕ್ಷರಪ್ಪ ಜೆ., ಸಮದ್ ಎಂ, ಮಲ್ಲಿಕಾರ್ಜುನ ಸೀಗಿ, ಕಿಶನರಾವ್, ವೆಂಕಟೇಶ್, ಸಂಜು ಶಿವಾನಂದ, ನರಸಿಂಹ, ಕುಮಾರ್, ರಾಜು, ಗೋವಿಂದ್ ಸೇರಿದಂತೆ ಅನೇಕರು ಇದ್ದರು.
‘೧೦ ವರ್ಷಗಳಿಂದ ಸಂಸ್ಥೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈಒಟ್ಟು ೧೦,೧೫೪ ಜನರಿಗೆ ವಿತರಣೆ ಮಾಡಲಾಗಿದೆ ಎಂದರು.
ಸಂಸ್ಥೆಯ ಕಲಬುರಗಿ ವಿಭಾಗದ ಅಧಿಕಾರಿ ಜಗನ್ನಾಥ ಬುಜುರುಕ್
























