
ತಾಳಿಕೋಟೆ : ಡಿ.೪: ಭಗವಂತ ಭಕ್ತರ ಆದಿನದಲ್ಲಿಯೇ ಇರುತ್ತಾನೆ ನಾಮ ಸ್ಮರಣೆಯಿಂದ ಮಾತ್ರ ಆತ ಕಾಪಾಡುತ್ತಾ ಸಾದು ಸಂತರು ಎಲ್ಲರೂ ಒಂದೇ ಎಂದು ಹೇಳಿದ್ದಾನೆ ಅದು ಬೇರೆ ಅಲ್ಲಾ ಎಲ್ಲವೂ ಒಂದೇ ಆದರೆ ಒಂದೇ ಪಂಥಕ್ಕೆ ಅಂಟಿಕೊಳ್ಳಬಾರದೆAದು ಖ್ಯಾತ ಜ್ಯೋತಿಷ್ಯ ಶಾಸ್ತç ಪರಿಣಿತರಾದ ವೇ.ವಸಂತಬಟ್ ಜೋಶಿ ಅವರು ನುಡಿದರು.
ಬುಧವಾರರಂದು ಸ್ಥಳೀಯ ಶ್ರೀ ಕೃಷ್ಣ ಮಂದಿರದಲ್ಲಿ ಭಗವದ್ಗೀತಾ ಸಮಿತಿಯವರ ವತಿಯಿಂದ ಏರ್ಪಡಿಸಲಾದ ೫೪ ನೇ ವರ್ಷದ ಗೀತಾ ಪ್ರವಚನದ ೩ನೇ ದಿನದಂದು ಒಂಬತ್ತು, ಹತ್ತು ಹಾಗೂ ೧೨ನೇ ಅಧ್ಯಾಯದವರೆಗೆ ಪ್ರವಚನದ ಸಾರಾಂಶ ಭಕ್ತ ಸಮೂಹಕ್ಕೆ ವಿವರಿಸಿದ ಅವರು ಇಂದಿನ ದಿನಮಾನದಲ್ಲಿ ಕಲಿಯಬೇಕಾದರೆ ಗೂಗಲ್‌ದಲ್ಲಿಯೂ ಎಲ್ಲ ವಿಷಯ ದೊರೆಯುತ್ತದೆ ನಮ್ಮ ದೇಶದ ಇತಿಹಾಸ ಸಂಸ್ಕೃತಿ ಎಲ್ಲವೂ ಈ ಹಿಂದಿನಿAದಲೂ ಜನಪ್ರೀಯತೆ ಹೊಂದಿದೆ ಆದರೆ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ವಿದೇಶಿಗರು ಅಳವಡಿಸಿಕೊಳ್ಳುವ ಕಾರ್ಯ ನಡೆದಿದೆ ಆದರೆ ನಮ್ಮ ಜನತೆ ಕೆಲವರು ವಿದೇಶಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿರುವದು ವಿಷಾಧನೀಯ ಸಂಗತಿಯಾಗಿದೆ ಎಂದು ಜೋಶಿ ಅವರು ಕಳವಳ ವ್ಯಕ್ತಪಡಿಸಿದರು. ಸತ್ಯವಂತ ಅನ್ನುವನು ಶ್ರೀಕೃಷ್ಣ ಪರಮಾತ್ಮನಾಗಿದ್ದಾನೆ ಶ್ರೀ ಕೃಷ್ಣ ಪರಮಾತ್ಮ ಅನ್ನುವವನು ನಮ್ಮ ಸಂಸ್ಕಾರ ಅಳವಡಿಸಿಕೊಂಡಿದ್ದೇ ಕಾರಣವಾಗಿದೆ ಆತ ಭಗವಂತ ಸ್ವರೂಪಿಯಾಗಿದ್ದಾನೆ ಅದನ್ನು ಅರ್ಥೈಸಿಕೊಂಡು ನಡೆಯಬೇಕಾದರೆ ದಿನಕ್ಕೆ ೩ ಸಲ ಶ್ರೀ ಕೃಷ್ಣ ಪರಮಾತ್ಮನ ನಾಮ ಸ್ಮರಣೆಯನ್ನು ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ಮಾಡಬೇಕು ಅಂದರೆ ಆತ ಒಲಿಯುತ್ತಾನೆಂದರು. ಇದಕ್ಕೆ ರಾಜ ವಿದ್ಯರಾಜ ಎಂಬುದರ ಕುರಿತು ಪರಮಾತ್ಮ ಅರ್ಜುನನಿಗೆ ಹೇಳುತ್ತಾನೆ ಇದು ನಮ್ಮ ದೇಶದ ಎಲ್ಲ ಮಾರ್ಗಗಳು ಶ್ರೇಷ್ಠವಾಗಿವೆ ಅವೇಲ್ಲವೂ ಗಳು ವೇದಗಳಿಂದ ಕೂಡಿವೆ ಎಂದು ಪರಮಾತ್ಮನು ಅರ್ಜುನನಿಗೆ ತಿಳಿಸುತ್ತಾನೆಂದು ಅಲ್ಲಮ ಪ್ರಭುಗಳ ವಚನವನ್ನು ವಿವರಿಸಿದ ಜೋಶಿ ಅವರು ನಮ್ಮ ಧರ್ಮದಂತೆ ನಡೆದು ಎಲ್ಲ ಧರ್ಮ ಧರ್ಮವನ್ನು ಗೌರವಿಸುವಂತವರಾಗಿರಿ ಪರಮಾತ್ಮನ ನಿಜವೇ ಪುರಾಣವೆನ್ನುವದಾಗಿ ಶೃಷ್ಠಿಯಾಗಿದ್ದು ಇಂತಹ ಜ್ಞಾನವನ್ನು ಪಡೆದುಕೊಂಡರೆ ಎಲ್ಲವೂ ಸರಿಹೋಗುತ್ತದೆ ಎಂದು ಪರಮಾತ್ಮ ಅರ್ಜುನನಿಗೆ ತಿಳಿಸುತ್ತಾ ಕಾಲ ಜ್ಞಾನ, ವಿಜ್ಞಾನವನ್ನು ಪಡೆದುಕೊಳ್ಳಲು ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ತಿಳಿಸುತ್ತಾನೆಂದರು. ನಾವೇಲ್ಲರೂ ಅರ್ಜುನನ ಪ್ರತಿನಿಧಿಗಳಾಗಿದ್ದು ಗುರು ಶಿಷ್ಯರ ಪರಂಪರೆ ಎಂಬುದು ನಮ್ಮಲ್ಲಿದೆ ಲಕ್ಷಾಂತರ ವರ್ಷಗಳಿಂದ ಬಂದಿದೆ ಎಂದು ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ತಿಳಿಸುತ್ತಾನೆಂದರು. ಯಾವ ನಾಮಗಳು ಏನೂ ಮಾಡಲಾರವವು ಆದರೆ ಪರಮಾತ್ಮನ ನಾಮವನ್ನೇ ಜಪಿಸಿ ಸಾಧನೆ ಮಾಡಿಕೊಂಡು ಸಾಧಕರಾಗಿ ಎಂದು ಪರಮಾತ್ಮ ತಿಳಿಸುತ್ತಾನೆಂದರು. ಯೋಗದ ಅರ್ಥವೇ ಪರಮಾತ್ಮನನ್ನು ಕೂಡುವದಾಗಿದೆ ೫ ಸಾವಿರ ವರ್ಷಗಳ ಹಿಂದಿನಿAದಲೂ ಕಲಿಯುಗದಲ್ಲಿ ಶ್ರೀಕೃಷ್ಣ ರಾಮನಿಗೆ, ಸೀತಾಮಾತೆಗೆ ಎಲ್ಲ ಅಂತವರ ಕುಟುಂಬಗಳ ಕುರಿತು ಅಪಹಾಸ್ಯ ಮಾಡುತ್ತಿರುವವರು ನಾಶವಾಗಿ ಹೋಗಿದ್ದಾರೆ ವೇದಗಳಲ್ಲಿ ಸಕಾಮ, ನಿಸ್ಕಾಮ, ಎಂಬುದರ ಕುರಿತು ತಿಳಿ ಹೇಳಿದ ಜೋಶಿ ಅವರು ಸಕಾಮ ಕರ್ಮ, ನಿಸ್ಕಾಮ ಕರ್ಮ ಎಂಬವಗಳಿವೆ ಪ್ರತಿಯೊಬ್ಬರಿಗೂ ಕಷ್ಟಗಳು ಬರುವವು ಪರಮಾತ್ಮನ ದ್ಯಾನ ಮಾಡುವವರಿಗೆ ಸುಃಖವಿದೆ ಯಾರು ನನ್ನ ನಾಮ ಸ್ಮರಣೆ ಮಾಡುತ್ತಾರೆ ಅವರ ಸುಃಖದಲ್ಲಿಯೂ ಬೆರೆಯುತ್ತೇನೆ ಅವರ ಯೋಗ ಕ್ಷೇಮ ನೋಡಿಕೊಳ್ಳುತ್ತೇನೆಂದು ಅರ್ಜುನಿಗೆ ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದರ ಕುರಿತು ವಿವರಿಸಿದ ಜೋಶಿ ಅವರು ವಿಶೇಷವಾಗಿ ಜನಪ್ರೀಯ , ವಿಷ್ಣು ಅಲಂಕಾರ ಪ್ರೀಯ, ಶಿವನಿಗೆ ನೀರು ಹಾಕಿದರೆ ಸಾಕು, ಗಣೇಶ ಗೌರಿ ಅವರೂ ಸಹ ಕೂಡಲೇ ಮಹಾ ಪೂಜೆಯಿಂದ ಫಲ ಕೊಡುತ್ತಾರೆ ಕುಂತಲ್ಲಿ ನಿಂತಲ್ಲಿ ಶ್ರೀ ಕೃಷ್ಣನೆಂದರೆ ಪರಮತ್ಮನಾದ ನಾನು ಬಂದು ನಿಲ್ಲುತ್ತೇನೆಂದು ಅರ್ಜುನನಿಗೆ ನೇರವಾಗಿ ಶ್ರೀ ಕೃಷ್ಣ ಪರಮಾತ್ಮನೇ ಹೇಳಿದ್ದರ ಕುರಿತು ವಿವರಿಸಿದ ಜೋಶಿ ಅವರು ಹತ್ತನೇ ಅಧ್ಯಾಯ ವಿಭೂತಿಯೋಗ ಕುರಿತು ಹಾಗೂ ವಿಶ್ವರೂಪ ದರ್ಶನ ಕುರಿತು ಪರಮಾತ್ಮನು ಹೇಳಿದ ಮಾತುಗಳನ್ನು ವಿವರಿಸಿದ ಅವರು ಹೆದರ ಬೇಡಾ ನೀವು ಕ್ಷತ್ರೀಯರು ಶೋಕ ಬಿಡು ಎಂದು ಶ್ರೀ ಕೃಷ್ಣ ಪರಮಾತ್ಮನಿಗೆ ಉಪದೇಶಿಸುತ್ತಾನಲ್ಲದೇ ನನ್ನನ್ನು ನಂಬು ನನಗಾಗಿ ಪ್ರಾಣ ಅರ್ಪಿಸುವವರಿಗೆ ನಾನೇಂದು ಕೈಬಿಡಲಾರೆ ಅವರನ್ನು ಕಾಪಾಡುತ್ತೇನೆ ನಾನು ಆಧಿ ದೇವತೆಯಾಗಿದ್ದು ನಾನೇ ಸೂರ್ಯ, ವಾಯು ದೇವತೆ ಹಾಗೂ ನಕ್ಷತ್ರಗಳಲ್ಲಿಯ ಚಂದ್ರ ನಾನಾಗಿದ್ದೇನೆ ಅಂತರಾತ್ಮ ಶಂಕರ ನಾನಾಗಿದ್ದೇನೆ ಅಗ್ನಿಯೂ ಕೂಡಾ ನಾನಾಗಿದ್ದೇನೆ ಎಂದು ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ಉಪದೇಶಿಸಿ ಯುದ್ದಕ್ಕೆ ಸಜ್ಜಾಗಲು ಪ್ರೇರೆಪಿಸುತ್ತಾನೆಂದು ವಸಂತ ಜೋಶಿ ಅವರು ತಮ್ಮ ೩ನೇ ದಿನದ ಗೀತಾ ಪ್ರವಚನದಲ್ಲಿ ವಿವರಿಸಿದರು.
ಈ ಸಮಯದಲ್ಲಿ ವೇ.ಗುಂಡಬಟ್ ಜೋಶಿ, ಡಾ.ಬಿ.ಎಸ್.ಯಾದವಾಡ, ರವಿ ಕುಲಕರ್ಣಿ, ಮಲ್ಲಯ್ಯ ಗೊಟಗುಣಕಿ, ರಾಮಣ್ಣ ಪತ್ತಾರ, ಸತೀಶ ದಪೇದಾರ, ಭೀಮರಾವ್ ಕುಲಕರ್ಣಿ, ವಿದ್ಯಾಧರ ಗೊಟಗುಣಕಿ, ಘನಶಾಮ ಚವ್ಹಾಣ, ಶ್ರೀಧರ ಗ್ರಾಂಪುರೋಹಿತ, ಶ್ರೀಮತಿ ಲಕ್ಷಿö್ಮÃಬಾಯಿ ದೇಶಪಾಂಡೆ, ದೀಪಲಕ್ಷಿö್ಮÃ ಮಹೇಂದ್ರಕರ, ಐಶ್ವರ್ಯ ಗೊಟಗುಣಕಿ, ಮಲ್ಲಿಕಾರ್ಜುನ ಹಿಪ್ಪರಗಿ, ಪ್ರೋ.ಆರ್.ಎನ್.ಪಾಟೀಲ, ಗಂಗಾಧರ ಬಿರಾದಾರ, ರಾಮಣ್ಣ ಪತ್ತಾರ, ಸುಶಿಲಾಬಾಯಿ ದೇಶಪಾಂಡೆ, ರಾಜಶ್ರೀ ದೇಶಪಾಂಡೆ, ಸುಪ್ರೀತಾ ಗೊಟಗುಣಕಿ, ಮೊದಲಾದವರು ಉಪಸ್ಥಿತರಿದ್ದರು.
ವೇ.ಗುಂಡಬಟ್ ಜೋಶಿ ಸ್ವಾಗತಿಸಿದರು.
























