
ಅಫಜಲಪುರ,ಮೇ.18-ಜೀವನ ಶೈಲಿ ಬದಲಾಯಿಸಿಕೊಂಡರೆ ಮಾತ್ರ ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದು ಅಫಜಲಪುರ ತಾಲ್ಲೂಕ ಮುಖ್ಯ ಆಡಳಿತಾಧಿಕಾರಿ ಡಾ.ವಿವೇಕಾನಂದ ಟೆಂಗೆ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಅಧಿಕ ರಕ್ತದೋತ್ತಡ ದಿನಾಚರಣೆ 2025. ಈ ವರ್ಷದ ವಿಷಯ ” ನಿಮ್ಮ ರಕ್ತದೋತ್ತಡವನ್ನು ನಿಖರವಾಗಿ ಅಳೆಯಿರಿ ಅದನ್ನು ನಿಯಂತ್ರಿಸಿ ಹೆಚ್ಚು ಕಾಲ ಬದುಕಿ ” ಎಂಬ ವಿಷಯದೊಂದಿಗೆ ಜಾಗೃತಿ ಕಾರ್ಯಕ್ರಮವನ್ನು ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಒಂದು ರೀತಿಯ ಒತ್ತಡ ಸಮಸ್ಯೆ ಇದ್ದೇ ಇರುತ್ತೆ, ಮನಷ್ಯನ ಜೀವನದಲ್ಲಿ ಆರೋಗ್ಯವಾಗಿರಬೇಕಾದರೆ ಒಳ್ಳೆಯ ಯೋಗಭ್ಯಾಸ ಮಾಡುವುದು ರೂಢಿಸಿಕೊಳ್ಳಬೇಕು ಹಾಗೆ ಒಳ್ಳೆಯ ಆಹಾರ ಸೇವನೆ ಮಾಡುವುದರಿಂದ ಬೇರೆ ಬೇರೆ ಕಾಯಿಲೆ ಬರೋದಿಲ್ಲ. ಹಾಗೆ ಯಾವುದೇ ಕೆಲಸದಲ್ಲಿ ಒತ್ತಡಕ್ಕೆ ಒಳಗದಾಗ ರಕ್ತದೋತ್ತಡ ಸಮಸ್ಯೆಗೆ ಒಳಗಾಗುತೇವೆ. ರಕ್ತ ಹೆಪ್ಪುಗಟ್ಟಿ ಹೃದಯಘಾತಕ್ಕೆ ಒಳಗಾಗುತ್ತಾರೆ. ಹೆಚ್ಚು ಕಾಲ ಬದುಕ ಬೇಕಾದರೆ, ಅದು ಬರದ ಹಾಗೆ ನಮ್ಮ ಜೀವನ ಶೈಲಿ ನಮ್ಮ ಕೈಯಲ್ಲಿ ಇದೆ. ಬದಲಿಸಿಕೊಳ್ಳಬೇಕು ಆಗ ಮಾತ್ರ ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಪ್ತ ಸಮಾಲೋಚಕಿ ಸುನೀತಾ ಕಂಬಾಳಿಮಠ್, ನಸಿರ್ಂಗ್ ಅಧಿಕಾರಿ ರಮೇಶ್ ಪಾಟೀಲ್, ಆರ್‍ಕೆಎಸ್‍ಕೆ ಆಪ್ತ ಸಮಾಲೋಚಕಿ ಸುಜಾತಾ ಹಿರೇಮಠ್, ಆರ್‍ಎಂಎನ್‍ಸಿಹೆಚ್ ಆಪ್ತ ಸಮಾಲೋಚಕಿ ಪ್ರತಿಭಾ ವೇದಿಕೆ ಮೇಲೆ ಉಪಸ್ಥಿತರಿದ್ದರು. ಇದೇ ವೇಳೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.