
ಕಲಬುರಗಿ:ಜು.೫:ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ಪ್ರಾಥಮಿಕ ೫ನೇ ತರಗತಿಯ ವಿಭಾಗದ ಶಾಲಾ ನಾಯಕರ ಮತ್ತು ಕ್ರೀಡಾನಾಯಕರ ಆಯ್ಕೆ ಪ್ರಕ್ರಿಯೆಯನ್ನು ಆನ್‌ಲೈನ್ ಚುನಾವಣೆ ಮುಖಾಂತರ ನಡೆಸಲಾಯಿತು. ಪ್ರಾಚಾರ್ಯರ ಆದೇಶದಂತೆ ಮಕ್ಕಳಲ್ಲಿ ಪ್ರಜಾಪ್ರಭುತ್ವದ ಅರಿವು ಮತ್ತು ಆದರ್ಶ ನಾಯಕತ್ವದ ಬೆಳವಣಿಗೆಯ ಅರಿವು ಮೂಡಿಸುವಲ್ಲಿ ಚುನಾಣೆಗಳ ಪಾತ್ರ ಮಹತ್ವದಾಗಿದೆ ಎಂದು ಸಂದೇಶಿಸಿದ್ದಾರೆ. ಇಂದಿನ ಯುಗದಲ್ಲಿ ಪ್ರತಿಯೊಂದು ಚಟುವಟಿಕೆಗಳು ಆನ್‌ಲೈನ್ ಮುಖಾಂತರ ನಡೆಯುತ್ತಿವೆ. ಅವುಗಳಲ್ಲಿ ಚುನಾವಣೆಯು ಒಂದು ಬ್ಯಾಂಕಿAಗ್ ವ್ಯಾವಹಾರ, ಕ್ರೀಡೆಗಳ ಆಯ್ಕೆ, ಪರೀಕ್ಷಗಳ ಆಯ್ಕೆ ಹೀಗೆ ಅನೇಕ ವಿಭಾಗಗಳಾಗಿ ಆನ್‌ಲೈನ್ ನಡೆಯುತ್ತಿವೆ. ಇಂತಹ ಸನ್ನಿವೇಶಗಳು ಚಿಕ್ಕಂದಿನಿAದಲೆ ಮಕ್ಕಳಲ್ಲಿ ಮನವರಿಕೆ ಆಗುವ ನಿಟ್ಟಿನಲ್ಲಿ ಶಾಲೆಯಲ್ಲಿ ಇಂತಹ ಕಾರ್ಯಕ್ರಮಗಳು ನಡೆಸಲಾಗುತ್ತಿವೆ. ವಿದ್ಯಾರ್ಥಿಗಳ ನಾಯಕರ ಸ್ಥಾನಕ್ಕೆ ೯ ಜನ ಸ್ಪರ್ಧಿಗಳು ಮತ್ತು ಕ್ರೀಡಾನಾಯಕರ ಸ್ಥಾನಕ್ಕೆ ೯ ಜನ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಲು ಒಟ್ಟು ೩೦೦ ರಿಂದ ೩೫೦ ಜನ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಮತ ಚಲಾವಣೆ ಮಾಡಿದ್ದಾರೆ. ವಿದ್ಯಾರ್ಥಿಗಳ ನಾಯಕರ ಚುನಾವಣೆಯನ್ನು ಹಿರಿಯ ಶಿಕ್ಷಕಿಯರಾದ ಶ್ರೀಮತಿ. ಶಾರದಾ ರಾಂಪೂರೆ ಅವರ ಮುಂದಾಳತ್ವದಲ್ಲಿ ಯಶಸ್ವಿಗೊಳಿಸಲಾಗಿದೆ.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಹಾಗೂ ಪೂಜ್ಯ ಮಾತೋಶ್ರೀ ದಾಕ್ಷಾಯಣಿ ಅವ್ವಾಜಿ ಹಾಗೂ ೯ನೇ ಪೀಠಾಧಿಪತಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪ ಅವರು, ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ. ಬಸವರಾಜ ದೇಶಮುಖ ಹಾಗೂ ಪ್ರಾಚಾರ್ಯರಾದ ಶ್ರೀ. ಎನ್.ಎಸ್. ದೇವರಕಲ್ ಅವರು ಈ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾ ಹಾರೈಸಿದರು.