
ಕಮಲನಗರ:ಮಾ.6: ಮಕ್ಕಳಿಗೆ ಶಿಕ್ಷಣದ ಜೊತೆ, ಕ್ರೀಡೆ, ನೈತಿಕ ಶಿಕ್ಷಣವನ್ನು ಕಲಿಸಿದಲ್ಲಿ ಮಾತ್ರ, ಬಹುಮುಖ ಪ್ರತಿಭಾವಚಿತರಾಗಿ ಹೊರಹೊಮ್ಮುತ್ತಾರೆಂದು ಔರಾದ್ ಬಿಜೆಪಿ ತಾಲ್ಲೂಕು ಮಂಡಲ ಘಟಕ ಅಧ್ಯಕ್ಷ ರಾಮಶೇಟ್ಟಿ ಪನ್ನಾಳೆ ಹೇಳಿದರು.
ಪಟ್ಟಣದ ಶಾಸ್ತ್ರೀ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡ ಶಾಲಾ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿದ ಅವರು ಮಾತನಾಡಿದರು.
ಆನ್‍ಲೈನ್ ಶಿಕ್ಷಣದಿಂದ ಯೋಚನೆ, ಆಲೋಚನೆ ಮರೆಯುತ್ತಿದ್ದು ಇದರಿಂದ ಮಕ್ಕಳ ಮನಸ್ಸಿನಲ್ಲಿನ ಯೋಚನಾ ಶಕ್ತಿಯು ಕುಗ್ಗುತ್ತಿದೆ. ಅಲ್ಲದೆ ಗಂಭೀರ ಪರಿಣಾಮ ಬೀರುತ್ತಿದೆ. ಸರ್ಕಾರ ಈ ನೀತಿಯನ್ನು ಕೈ ಬಿಡುವ ಯೋಚನೆ ಮಾಡುತ್ತಿದ್ದು ಆದಷ್ಟು ಶೀಘ್ರವಾಗಿ ಜಾರಿಯಾದರೆ ಉತ್ತಮ. ಮಕ್ಕಳ ಭವಿಷ್ಯದ ದೃಷ್ಠಿಯಿಂದ ಅನೆಕ ಪೆÇೀಷಕರು ಮಕ್ಕಳನ್ನು ವಸತಿಯುತ ಪದ್ಧತಿಯ ಶಿಕ್ಷಣಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಸೇರಿಸುತ್ತಿದ್ದಾರೆ. ಆದರಿಂದ ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಘುತ್ತಾರೆ ಎನ್ನುವುದನ್ನು ಯಾರು ಮರೆಯಬಾರದು ಎಂದರು. 18ನೇ ವಯಸ್ಸಿನವರೆಗೂ ಮಕ್ಕಳನ್ನು ತಮ್ಮ ಜೊತೆಯಲ್ಲಿಟ್ಟುಕೊಂಡು ಶಿಕ್ಷಣ ಕೊಡಿಸುತ್ತಾ, ದಿನ ನಿತ್ಯ ಅವರೊಂದಿಗೆ ಕೆಲಸಮಯ ಕಳೆದರೆ ಮಾನಸಿಕವಾಗಿ ಸದೃಢವಾಗಿ ಬೆಳೆದು ಭವಿಷ್ಯದಲ್ಲಿ ಎಂತಹದೆ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಜಾಗೃತಿ ಮೂಡಿಸಿದರು.
ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಮಾತನಾಡಿ, ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಮಾನವೀಯ ಮೌಲ್ಯ ಹಾಗೂ ಸಂಬಂಧಗಳ ಬಗ್ಗೆ ತಿಳಿಸುವ ಕಾರ್ಯಮಾಡಬೇಕಿದೆ ಎಂದರು.
ವಿವೇಕಾನಂದ ಟ್ರಸ್ಟ್‍ನ ಅಧ್ಯಕ್ಷ ಸಂಗಮೇಶ ಬಿರಾದಾರ, ಅರವಿಂದ ಚ್ಯಾಂಡೇಶ್ವರೆ, ಶ್ರೀದೇವಿ, ದೀಪಮಾಲಾ, ಸಂಗೀತಾ, ರಾಜಶ್ರೀ, ಅಂಬಿಕಾ, ವಾಣಿಶ್ರೀ, ಅಶ್ವಿನಿ, ಪಂಚಫುಲಾ ಹಾಗೂ ಶಾಲೆಯ ಮುದ್ದುಮ್ಕಕಳು ಇದ್ದರು.




















