
ಭಾಲ್ಕಿ: ವಚಿಸಿ ಅನುಭವಿಯಾಗದವ ಪಿಶಾಚಿಯಾಗುತ್ತಾನೆ.ವಚಿಸಿ ಅನುಭವಿಯಾದವ ಪಂಡಿತ್‍ನಾಗುತ್ತಾನೆ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಬಿರಾದಾರ ಅಭಿಪ್ರಾಪಟ್ಟರು.
ನಗರದ ಸದ್ಗುರು ವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಬೀದರ ಹಾಗೂ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಭಾಲ್ಕಿ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡ ವಚನ ಶ್ರಾವಣ ಸಪ್ತಾಹ 'ಕಾರ್ಯಕ್ರಮದಲ್ಲಿಓದುವುದು ಸದ್ಗುಣಕ್ಕಲ್ಲದೆ ಅನ್ಯರ’ ವಿಷಯದ ಮೇಲೆ ವಿಶೇಷ ಉಪನ್ಯಾಸ ಮಂಡಿಸಿ,ಮಾತನಾಡಿದರು.
ಸದ್ಗುಣಕ್ಕಾಗಿ ಓದಬೇಕು.ಓದಿದವರು ದಯೆ,ಕ್ಷಮೆ,ಕರುಣೆ,ಪರೋಪಕಾರಿ ಗುಣ ಹೊಂದಿರಬೇಕು.ವಚನ ಸಾಹಿತ್ಯ ಅಧ್ಯಯನ ಮಾಡಿ ನೈಜ ಜೀವನದಲ್ಲಿ ಆಚರಣೆಯಲ್ಲಿ ತರಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್‍ನ ಕಾರ್ಯದರ್ಶಿ ಅಶೋಕ ರಾಜೋಳೆ, ಹಿಂದು ಧರ್ಮದ ಪವಿತ್ರ ಮಾಸ `ಶ್ರಾವಣ ‘ದಲ್ಲಿ ವಿವಿಧೆಡೆ ವಿವಿಧ ಮಠಾಧೀಶರಿಂದ ನಡೆಯುವ ಪ್ರವಚನ ಆಲಿಸಿ ಪಚನ ಮಾಡಿಕೊಳ್ಳಬೇಕು. ಸಾಹಿತ್ಯ ಪರಿಷತ್‍ನವರು 07 ದಿವಸಗಳವರೆಗೆ ವಿವಿಧ ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಂಡ ವಚನ ಶ್ರಾವಣ ಸಪ್ತಾಹ ಕಾರ್ಯಕ್ರಮದಿಂದ ಶರಣರ ಜೀವನದಲ್ಲಿ ಪರಿವರ್ತನೆ ಕಾಣಬಹುದು ಎಂದು ಹೇಳಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಪ್ರಾಸ್ತಾವಿಕ ಮಾತನಾಡಿ, ಸಾಹಿತ್ಯ ಜನರ ಮನಸ್ಸು ಕೆರಳಿಸದೆ ಅರಳಿಸುತ್ತದೆ.ವಚನ ಸಾಹಿತ್ಯದಿಂದ ಸದ್ವಿಚಾರ,ಸದಾಚಾರ,ಸವಿನಯ ಗುಣಗಳು ಬೆಳೆಯುತ್ತವೆ.ಶರಣ ತತ್ವ ಸಮಾನತೆಯ ಸಂದೇಶ ಸಾರುತ್ತದೆ ಎಂದು ಹೇಳಿದರು.ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಗುಂಡಪ್ಪ ಸಂಗಮಕರ್ ಮಾತನಾಡಿ,ವಿಶ್ವಗುರು ಬಸವಣ್ಣನವರು, ಎಲ್ಲ ಜಾತಿಯವರಿಗೆ ಸಮಾನ ಅವಕಾಶ ಕಲ್ಪಿಸಿ ಭಕ್ತರ ಬಾಳಿನಲ್ಲಿ ಜ್ಞಾನದ ಜ್ಯೋತಿ ಬೆಳಗಿಸಿದ್ದಾರೆ ಎಂದು ಹೇಳಿದರು.
ಸದ್ಗುರು ವಿದ್ಯಾಲಯದ ಆಡಳಿತಾಧಿಕಾರಿ ವೀರಣ್ಣ ಪ್ರಸಣ್ಣೆ ಮಾತನಾಡಿ,ಶರಣರ ವಚನಗಳಿಂದ ಯಾವುದು ಒಳ್ಳೆಯದು,ಯಾವುದು ಕೆಟ್ಟದ್ದು, ಯೋಗ್ಯ,ಅಯೋಗ್ಯದರ ಬಗ್ಗೆ ಪರಿಕಲ್ಪನೆ ಮೂಡುತ್ತದೆ ಎಂದರು.
ಸನ್ಮಾನ: ಸಂಗೀತ ಕಲಾವಿದ ಅಲ್ಲಾಷಾ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯಗುರು ಸುಷ್ಮೀತಾ ಸಹಾನೆ, ಸಿದ್ರಾಮ್, ದಿಲೀಪ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಿವುಕುಮಾರ ನಾರಾ ಮತ್ತು ರಮೇಶ ಬಾಬು ಬಸವ ಗುರು ಪೂಜೆ ನಡೆಸಿಕೊಟ್ಟರು.ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಶಿನಾಥ ಭೂರೆ ವಚನ ಪಠಣ ಮಾಡಿದರು.ಶಿಕ್ಷಕಿ ಸಂತೋಷಿ ಮುಲಗೆ ನಿರೂಪಿಸಿ, ವಂದಿಸಿದರು.






























