Home ಜಿಲ್ಲೆ ಕಲಬುರಗಿ ಸಮಸ್ಯೆಗಳನ್ನು ಬೇರೊಬ್ಬರ ಜೊತೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಬೇಕು ; ಪ್ರೊ. ವಿಜಯರೆಡ್ಡಿ

ಸಮಸ್ಯೆಗಳನ್ನು ಬೇರೊಬ್ಬರ ಜೊತೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಬೇಕು ; ಪ್ರೊ. ವಿಜಯರೆಡ್ಡಿ

ಕಲಬುರಗಿ ; ಯಾವುದೇ ರೀತಿಯ ಸಮಸ್ಯೆಗಳನ್ನು
ಮಾತನಾಡಿ ಮತ್ತು ಆಲಿಸಿ, ಮನಸ್ಸಿನ ಮಾತು ಹಂಚಿಕೊಳ್ಳಿ, ಕಾಳಜಿಯಿಂದ ಆಲಿಸಿ
ವೃತ್ತಿಪರರ ಸಹಾಯ ಪಡೆಯಿರಿ ಎಂದು ಪ್ರಾಂಶುಪಾಲರಾದ ಪೆÇ್ರಫೆಸರ್ ವಿಜಯರೆಡ್ಡಿ ಹೇಳಿದರು.

ನಗರದ ಶ್ರೀ ಗೋಪಾಲದೇವ ಜಾದವ್ ನಸಿರ್ಂಗ್ ಕಾಲೇಜಿನಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯಲ್ಲಿ ಮಾತನಾಡಿ, ಪ್ರತಿ ವರ್ಷ ಸುಮಾರು ಲಕ್ಷಕ್ಕೂ ಅಧಿಕ ಅನೇಕ ಜನರು ಆತ್ಮಹತ್ಯೆಯನ್ನು ಮಾಡಿಕೊಂಡು ಸಾವನ್ನು ಅಪ್ಪುತ್ತಾರೆ. ಇಂತಹ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುವ ಮುಖಾಂತರ ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಸಹಾಯ ವಾಣಿಗಳನ್ನು ಬಳಸಿ (14416) 1800-4891-4416) ದೈನಂದಿನ ಜೀವನ ಶೈಲಿಯನ್ನು ಬದಲಾಯಿಸಿ, ಒಂಟಿತನವನ್ನು ದೂರವಿಡಿ ಮಾದಕ ದ್ರವ್ಯವನ್ನು ದೂರವಿಡಿ ಎಂದು ಸವಿಸ್ತಾರವಾಗಿ.ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಬಿ.ಎಸ್ಸಿ. ನಸಿರ್ಂಗ್ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದು ಯಶಸ್ವಿ ಗೊಳಿಸಿದರು.