Home ಜಿಲ್ಲೆ ಮಾನವ ಜನ್ಮದಲ್ಲಿ ನಾನು ಎನ್ನುವ ಅಹಂಭಾವ ಬೇಡ: ಕೂಚಬಾಳ

ಮಾನವ ಜನ್ಮದಲ್ಲಿ ನಾನು ಎನ್ನುವ ಅಹಂಭಾವ ಬೇಡ: ಕೂಚಬಾಳ

ಮುದ್ದೇಬಿಹಾಳ : ನಾನೆನೆಂಬುದನ್ನು ಬಿಡಿರಿ ಮಾನವ ಜನ್ಮ ನಾನೆಂದರೆ ನರಕದ ಪ್ರಾಪ್ತಿಯಾಗುತ್ತದೆ ಶರಣರು ಹೇಳಿದ ಈ ಹಿತನುಡಿಗಳನ್ನು ಅರಿತುಕೊಂಡು ತನ್ನದೇ ಮಹತ್ವದ ಸ್ತಾನಮಾನವನ್ನು ಹೊಂದಿದ ಶರಣು ಸಜ್ಜನ ಅವರಿಗೆ ಇಂದು ಅಭಿನಂದನಾ ಸಮಾರಂಭವನ್ನು ಏರ್ಪಡಿಸಿರುವದು ಅತೀವ ಮಹತ್ವದ ಕಾರ್ಯಕ್ರಮ ಇದಾಗಿದೆ ಎಂದು ಭಾರತೀಯ ಜನತಾಪಾರ್ಟಿಯ ಮಾಜಿ ಜಿಲ್ಲಾಧ್ಯಕ್ಷರಾದ ಆರ್.ಎಸ್.ಪಾಟೀಲ(ಕೂಚಬಾಳ) ಅವರು ನುಡಿದರು.
ಸ್ಥಳೀಯ ಏಪಿಎಂಸಿಯಲ್ಲಿರುವ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ರವಿವಾರರಂದು ಏರ್ಪಡಿಸಲಾದ ಹುಬ್ಬಳ್ಳಿ ಚೇಂರ‍್ಸ್ ಆಫ್ ಕಾಮರ್ಸ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಉದ್ಯಮಿ ಶರಣು ಸಜ್ಜನ ಅವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವÀರು ಉದ್ಯಮ ಕ್ಷೇತ್ರದಲ್ಲಿ ಅತೀವ ಬೆಳವಣಿಗೆ ಕಂಡಿರುವ ಶರಣು ಸಜ್ಜನ ಅವರು ಎಲ್ಲರಿಗೂ ಬೇಕಾದ ಅತೀ ಸಲುಗೆ ಪ್ರೀತಿಪ್ರೇಮ ಹೊಂದಿದ ವ್ಯಕ್ತಿಯಾಗಿದ್ದಾರೆ ಶಿಕ್ಷಣ, ಸಾಮಾಜಿಕ, ವಾಣಿಜ್ಯದ್ಯೋಮ, ಧಾರ್ಮಿಕ ಕ್ಷೇತ್ರಗಳಲ್ಲಿಯೂ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ ಪಕ್ಷಾತೀತ, ಜಾತ್ಯಾತೀತವಾಗಿ ಅವರನ್ನು ಎಲ್ಲರೂ ಪ್ರೀತಿ,ಪ್ರೇಮ ಹಾಗೂ ಗೌರವದಿಂದ ಕಾಣುತ್ತಿದ್ದಾರೆ. ಹಿರಿಯರ ಹೆಸರಿನಿಂದ ಅಲ್ಲದೇ ತನ್ನದೇ ಸ್ವಂತ ಪರಿಶ್ರಮದಿಂದ ಬೆಳೆದು ಬಂದಿರುವ ಸಜ್ಜನ ಅವರು ಮಹತ್ವದ ಸ್ಥಾನಮಾನದೊಂದಿಗೆ ಮಹತ್ವದ ವ್ಯಕ್ತಿತ್ವ ಹೊಂದಿದ್ದಾರೆAದರು.
ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಮಾತನಾಡಿ ಸಜ್ಜನ ಅವರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತಿರುಗಾಡಿದುದ್ದನ್ನು ನೋಡಿದ್ದೇನೆ. ಈಗ ಅವರು ಸ್ವಂತ ಕಾರುಗಳಲ್ಲಿ ಓಡಾಡುವುದನ್ನು ನಾನು ಹತ್ತಿರದಿಂದ ಕಂಡಿದ್ದೇನೆ ನಮ್ಮ ಮಕ್ಕಳಿಗೆ ದೊಡ್ಡ ದೊಡ್ಡ ಉದ್ಯಮಿಗಳ ಉದಾಹರಣೆಗಳನ್ನು ಹೇಳುವ ಬದಲು ನೂರಾರು ಕೈಗಳಿಗೆ ಕೆಲಸ ಕೊಟ್ಟ ಶರಣು ಸಜ್ಜನ ಅಂತವರ ಸ್ಪೂರ್ತಿಯ ಕತೆಯನ್ನ ಹೇಳಬೇಕೆಂದರು.
ಸನ್ಮಾನ ಸ್ವೀಕರಿಸಿದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ನಿರ್ದೇಶಕರಾದ ಶರಣು ಸಜ್ಜನ ಅವರು ಮಾತನಾಡಿ ಮುದ್ದೇಬಿಹಾಳಕ್ಕೆ ನನ್ನ ಪರಿಚಯಿಸಿದ್ದು ಆತ್ಮೀಯ ಮಿತ್ರರಾದ ಸತೀಶ ಕುಲಕರ್ಣಿ ಅವರು ಉದ್ಯಮದಲ್ಲಿಯೂ ಸಹಕಾರ ಮಾಡಿದವರಾಗಿದ್ದಾರೆ ಇಲ್ಲೂರು ಸಾಹುಕಾರರು ಮಿತ್ರರೆಲ್ಲರು ಪ್ರೋತ್ಸಾಹ ಹಾಗೂ ಸಹಕಾರದಿಂದ ನನಗೆ ಈ ಸ್ಥಾನಮಾನ ದೊರೆತಿದೆ ಎಂದರು. ಇಂದು ನನ್ನ ಕಾರ್ಯಕ್ಷಮತೆಯನ್ನು ಗಮನಿಸಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿರುವದು ಎಂದಿಗೂ ಮರೆಯುವದಿಲ್ಲವೆಂದು ಹೇಳಿದ ಸಜ್ಜನ ಅವರು ಈ ಹಿಂದಿನಿAದ ಸಾಗಿಬಂದAತಹ ತಮ್ಮ ಆತ್ಮೀಯ ಮಿತ್ರರ ಸಹಕಾರ ಮನೋಭಾವನೆ ಕುರಿತು ಮುಕ್ತಕಂಠದಿAದ ಹೊಗಳಿದರು.
ಕರ್ನಾಟಕ ಕೋ ಆಪರೇಟಿವ ಬ್ಯಾಂಕ್ ಮಾಜಿ ಅಧ್ಯಕ್ಷ ಸತೀಶ ಓಸ್ವಾಲ್ ಮಾತನಾಡಿ ಶರಣು ಸಜ್ಜನವರ ವಿಲ್ ಪವರ್ ಅಗಾಧವಾಗಿದೆ ಅವರಲ್ಲಿ ಹಿಡಿದಂತ ಕೆಲಸ ಬಿಡುವ ಜಾಯಮಾನ ಅವರದಲ್ಲಾ ನೇರನುಡಿಯ ಸ್ವಭಾವದವರು ಆಗಿದ್ದಾರೆಂದು ಶರಣು ಸಜ್ಜನ ಅವರು ಸಾಮಾಜಿಕ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದರ ಕುರಿತು ಗುಣಗಾನ ಮಾಡಿದರು.
ಇದೇ ಸಮಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಗಣ್ಯಮಾನ್ಯರು, ವ್ಯಾಪಾರಸ್ಥರು ಶರಣು ಸಜ್ಜನ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ತಾಪಂ ಮಾಜಿ ಅಧ್ಯಕ್ಷ ವಾಯ್.ಎಚ್.ವಿಜಯಕರ್, ಗ್ಯಾರಂಟಿ ಸಮೀತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ವರ್ತಕ ಬಿ.ಎಸ್.ಮೇಟಿ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಸುನೀಲ್ ಇಲ್ಲೂರ, ಸತೀಶ ಕುಲಕರ್ಣಿ ಮೊದಲಾದವರು ಮಾತನಾಡಿದರು.
ಈ ಸಮಯದಲ್ಲಿ ಏಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಮುತ್ತು ಬಿರಾದಾರ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ನಿಂಗಣ್ಣ ಚಟ್ಟೇರ, ಗಣ್ಯ ವರ್ತಕ ವಸಂತ ಇಲ್ಲೂರ, ಭರತ್ ಭೋಸಲೆ ಮೊದಲಾದವರು ಉಪಸ್ತಿತರಿದ್ದರು.
ವಿನೋದ ಪಟಗಾರ ಕಾರ್ಯಕ್ರಮ ನಿರೂಪಿಸಿದರು.