
ಸಂಜೆವಾಣಿ ವಾರ್ತೆ,
ವಿಜಯಪುರ, ಫೆ. ೭ : ವಿದ್ಯಾರ್ಥಿಗಳು ಗುರು ಹೇಳಿದ ಪಾಠವನ್ನು ವಿನಯ, ನಿಷ್ಠೆ, ವಿಧೇಯರಾಗಿ ಕೇಳಿ, ಮನನ ಮಾಡಿಕೊಂಡಾಗ ಶೈಕ್ಷಣಿಕ ಪ್ರಯಾಣದಲ್ಲಿ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಸರ್ವಜ್ಞನ ಪರಿಸರ ಗುರು ಹಿರಿಯರು, ಸಮಾಜದಿಂದ ಜ್ಞಾನವನ್ನು ಪಡೆದು ಜ್ಞಾನದ ಪರ್ವತವೇ ಆಗಿ ರೂಪಗೊಂಡನು. ಸರ್ವಜ್ಞನು ಯಾರ ಮುಲಾಜಿಲ್ಲದ ತಪ್ಪು ಮಾಡಿದವರನ್ನು ಟೀಕಿಸುತ್ತ, ಒಳ್ಳೆ ಕೆಲಸವನ್ನು ಸ್ತುತಿಸುತ್ತ ದೇಸಿಯ ಮಟ್ಟದ ತ್ರಿಪದಿಯಲ್ಲಿ ಸಾಹಿತ್ಯ ರಚಿಸಿ ತ್ರಿಪದಿ ಬ್ರಹ್ಮ ಎನಿಸಿಕೊಂಡನೆAದು ಗೆಜ್ಜೆ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಸುರೇಶ ಗೆಜ್ಜೆಯವರು ಹೇಳಿದರು.
ನಗರದ ಬಂಜಾರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಯುವ ವೇದಿಕೆ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ ಗುರುವಾರ ಜರುಗಿತು . ಕಾರ್ಯಕ್ರಮದಲ್ಲಿ “ಸರ್ವಜ್ಞನ ಅನುಭಾವ” ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ಸರ್ವಜ್ಞ ಸರಳವಾಗಿ ಜೀವನೋಪಾಯದ ಮಾರ್ಗಗಳನ್ನು ಸನ್ಮಾರ್ಗವನ್ನು ತ್ರಿಪದಿಗಳ ಮೂಲಕ ತಿಳಿಸಿದ್ದಾನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಯಡಳ್ಳಿ ಹಾಗೂ ಉಪಾಧ್ಯಕ್ಷ ಶಶಿಕಾಂತ ಮಂಡೆಗಾರ ಅವರನ್ನು ಶರಣ ಸಾಹಿತ್ಯ ಪರಿಷತ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ ಯಡಳ್ಳಿ, ದೇಶ ದೇಶ ಸಮೃದ್ಧಿ ಸಾಧಿಸಲು ಶಿಕ್ಷಕರ ಪಾತ್ರ ಮಹತ್ವದಾಗಿದೆ ಹೀಗಾಗಿ ಶಿಕ್ಷಕರು ಶರಣ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಅವರು ಮಾತನಾಡಿ, ವಿದ್ಯೆ ಉಳ್ಳವನ ಮುಖ ಮುದ್ದು ಬರುವಂತಿಕ್ಕೂ ಎಂದು ಸರ್ವಜ್ಞನ ತ್ರಿಪದಿಯನ್ನು ನೆನಪಿಸುತ್ತ ವಿದ್ಯೆಯ ಮಹತ್ವವನ್ನು ತಿಳಿಸಿ ಜೀವನವನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಜಯಶ್ರೀ ಪಾಟೀಲ ಮಾತನಾಡಿ, ಇಂತಹ ದತ್ತಿ ಕಾರ್ಯಕ್ರಮಗಳಿಗೆ ನಮ್ಮ ಕಾಲೇಜು ಯಾವಾಗಲೂ ಸಹಕಾರ ನೀಡುತ್ತದೆ. ಇದು ಜ್ಞಾನದಾಸೋದ ಕಾರ್ಯಕ್ರಮ. ಮಕ್ಕಳಿಗೆ ಸಂಸ್ಕಾರ ನೀಡಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಯುವ ಘಟಕದ ಅಧ್ಯಕ್ಷ ಅಮರೇಶ ಸಾಲಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ದಾಸೋಹಿಗಳಾದ ರವೀಂದ್ರ ಮೆಡಗಾರ, ಟಿ ಬಿ ಪವಾರ, ಕುಂಬಾರ, ಉಪಸ್ಥಿತರಿದ್ದರು.
ಸತೀಶ ಮಣ್ಣೂರ
ಸ್ವಾಗತಿಸಿದರು. ಎಸ್ ಸಿ ಮಾಳಗಿ ವಂದಿಸಿದರು. ಶಂಕರ ಹುಣಸಿಗಿ ನಿರೂಪಿಸಿದರು.



























