Home ಜಿಲ್ಲೆ ದಾಸೋಹಕ್ಕಾಗಿ ದಾನ ಮಾಡಬೇಕು: ರಾಚಯ್ಯ ಶಾಸ್ತಿç

ದಾಸೋಹಕ್ಕಾಗಿ ದಾನ ಮಾಡಬೇಕು: ರಾಚಯ್ಯ ಶಾಸ್ತಿç

ತಾಳಿಕೋಟೆ: ಶರಣರ ಪರಂಪರೆಯಲ್ಲಿ ದಾಸೋಹಕ್ಕೆ ಅತ್ಯಂತ ಮಹತ್ವವಿದೆ ಪ್ರಸಾದ ದಾಸೋಹಕ್ಕಾಗಿ ದಾನ ಮಾಡಬೇಕು ದಾಸೋಹದ ಮೂಲಕ ಹಂಚಿಕೊAಡ ಅನ್ನವು ಕೇವಲ ಹೊಟ್ಟೆತುಂಬಿಸುವAತಹ ಆಹಾರವಲ್ಲಾ ಅದು ಸಮಾಜದಲ್ಲಿ ಪ್ರೀತಿ ಸಮಾನತೆ ಮತ್ತು ಸಹಬಾಳ್ವೆಯ ಭಾವನೆಯನ್ನು ಬೆಳೆಸುವಂತಹ ಸಾಧನವಾಗಿದೆ ಎಂದು ಯಾತಗಿರಿ ಜಿಲ್ಲೆಯ ರೊಟ್ನೊಟಗಿಯ ಖ್ಯಾತ ಪುರಾಣ ಪ್ರವಚನಕಾರರಾದ ವೇ|| ರಾಚಯ್ಯಶಾಸ್ತಿçಗಳು ನುಡಿದರು.
ಸೋಮವಾರರಂದು ಶ್ರೀ ಖಾಸ್ಗತೇಶ್ವರರ ೧೩೦ ನೇಯ ಹಾಗೂ ವಿರಕ್ತಮಹಾಸ್ವಾಮಿಗಳವರ ೧೨ ನೇ ಪುಣ್ಯ ಸ್ಮರಣೋತ್ಸವ ಕುರಿತು ಶ್ರೀ ಖಾಸ್ಗತೇಶ್ವರ ಮಠದಲ್ಲಿ ಏರ್ಪಡಿಸಲಾದ ೫ ದಿನಗಳ ಪ್ರವಚನದಲ್ಲಿ ಮೂರನೇ ದಿನದ ಪ್ರವಚನದಲ್ಲಿ ಮಾತನಾಡುತ್ತಿದ್ದ ಶ್ರೀಗಳು ದಾನ ಮಾಡುವ ಮನಸ್ಸುಳ್ಳವವರು ಇರುವದರಿಂದಲೇ ಸಮಾಜದಲ್ಲಿ ಧರ್ಮ ಮತ್ತು ಮಾನವೀಯ ಮೌಲ್ಯಗಳು ಉಳಿದುಕೊಂಡಿವೆ ಇಂದಿನ ಕಲಿಯುಗದಲ್ಲಿಯೂ ದಾನಧರ್ಮ ಮಾಡುವವರು ಇರುವದರಿಂದ ಧರ್ಮ ಮತ್ತು ಮಾನವೀಯ ಮೌಲ್ಯಗಳು ಉಳಿದಿವೆ ಎಂದರು. ಸತ್ತವನಿಗೆ ಹೆಗಲು ಕೊಟ್ಟಂತೆ ಕಷ್ಟದಲ್ಲಿರುವವನಿಗೆ ಹೆಗಲು ಕೊಟ್ಟು ಮೇಲ್ಮಟ್ಟಕ್ಕೆತ್ತುವಂತಹ ಕಾರ್ಯ ಮಾಡಿದರೆ ಅದುವೇ ದೊಡ್ಡ ಧರ್ಮವೆಂದು ಮಾನವೀಯ ಸಂದೇಶವನ್ನು ವಿವರಿಸಿದ ಶ್ರೀಗಳು ಧರ್ಮವೆಂದರೆ ಕೇವಲ ಆಚರಣೆಗಳಲ್ಲಾ ಸಂಕಷ್ಟದಲ್ಲಿರುವ ಮನುಷ್ಯನಿಗೆ ನೆರವಾಗುವದು ಹಸಿದವನಿಗೆ ಅನ್ನ ನೀಡುವದೇ ಧರ್ಮವೆಂದರು.
ಮಕ್ಕಳಿಗೆ ಒಳ್ಳೆಯ ಉತ್ತಮ ಸಂಸ್ಕಾರ ನೀಡಬೇಕು ಅದರ ಜೊತೆಗೆ ಮಾನವೀಯ ಮೌಲ್ಯಗಳು ಸಾಮಾಜಿಕ ಜವಾಬ್ದಾರಿಯನ್ನು ಕಲಿಸಬೇಕೆಂಬ ಸಂದೇಶವನ್ನು ಶ್ರೀಗಳು ನೀಡಿದರು. ಹೆಣ್ಣು ಮಕ್ಕಳು ತಮ್ಮ ಸಂಸ್ಕೃತಿ ಪರಂಪರೆಯನ್ನು ಗೌರವಿಸುವಂತೆ ಹಿರಿಯರು ನೀಡಿದ ಮಾರ್ಗದರ್ಶನವನ್ನು ಸ್ಮರಿಸಿದ ಶ್ರೀಗಳು ಕುಂಕುಮ, ಹಸಿರು ಬಳೆ ಹಾಗೂ ಸಾಂಪ್ರದಾಯಿಕ ಉಡುಗೆ ಆಚರಣೆಗಳು ನಮ್ಮ ಸಂಸ್ಕೃತಿಯ ಸಂಕೇತಗಳಾಗಿದ್ದು ಆಧುನಿಕತೆಯ ಹೆಸರಿನಲ್ಲಿ ನಮ್ಮ ಮೂಲ ಸಂಸ್ಕಾರಗಳನ್ನು ಮರೆಯಬಾರದೆಂದು ಹೇಳಿದ ಶ್ರೀಗಳು ವಿದೇಶಿ ಸಂಸ್ಕೃತಿ ಪ್ರಭಾವಕ್ಕೆ ಒಳಗಾಗುವದಕ್ಕಿಂತ ನಮ್ಮ ಉತ್ತಮ ಪರಂಪರೆಯ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಅಗತ್ಯವಿದೆ ಎಂದರು. ಇಂದಿನ ದಿನಮಾನದಲ್ಲಿ ಕೆಲವು ತಂದೆ ತಾಯಿಗಳು ತಮ್ಮ ಮಗಳಿಗೆ ಶ್ರೀಮಂತ ಕುಟುಂಬ, ಸರ್ಕಾರಿ ಉದ್ಯೋಗ ಅಥವಾ ಆಸ್ತಿ ಅಂತಸ್ತು ಇರುವ ಕಡೆ ಮದುವೆ ಮಾಡಬೇಕೆಂಬ ಕನಸು ಕಾಣುತ್ತಾರೆ ಆದರೆ ಮಕ್ಕಳಿಗೆ ಕೇವಲ ಉತ್ತಮ ಶಿಕ್ಷಣ ನೀಡುವದಷ್ಟೇ ಸಾಕಾಗುವದಿಲ್ಲಾ ಅದರ ಜೊತೆಗೆ ಉತ್ತಮ ಸಂಸ್ಕಾರ ಮಾನವೀಯ ಮೌಲ್ಯಗಳು ಒಳಗೊಂಡAತೆ ಸಾಮಾಜಿಕ ಜವಾಬ್ದಾರಿಯನ್ನು ಕಲಿಸಬೇಕೆಂದರು. ಶರಣರ ವಚನ ಸಾಹಿತ್ಯವು ಸಮಾಜಕ್ಕೆ ಶ್ರೇಷ್ಠವಾದ ಜೀವನದ ಮೌಲ್ಯಗಳನ್ನು ನೀಡಿದ್ದು ಕಾಯಕ, ದಾಸೋಹ, ಸಂಸ್ಕಾರ, ಸಮಾನತೆ ಹಾಗೂ ಮಾನವೀಯತೆಯ ಮಹತ್ವವನ್ನು ಜಗತ್ತಿಗೆ ಸಾರಿದೆ ಮಗಳನ್ನು ಯಾರಿಗೆ ಕೊಡಬೇಕು ಎಂಬ ಪ್ರಶ್ನೆಗೆ ಉತ್ತರಿಸುವಾಗ ಆಸ್ತಿ ಅಂತಸ್ತು ಸರ್ಕಾರಿ ನೌಕರಿ ಅಥವಾ ಶ್ರೀಮಂತಿಕೆಗಿAತಲೂ ವ್ಯಕ್ತಿಯ ಗುಣ ಸಂಸ್ಕಾರ ಕಾಯಕ ನಿಷ್ಠೆ ಹಾಗೂ ಕುಟುಂಬದ ಮೇಲಿನ ಜವಾಬ್ದಾರಿಯೇ ಮುಖ್ಯವೆಂದು ಶರಣರು ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಕಾಯಕದಿಂದ ಜಾತಿ ಬಂದಿಲ್ಲಾ ಜಾತಿಯಿಂದ ಕಾಯಕ ಬಂದಿಲ್ಲಾ ಕಾಯಕದಲ್ಲಿ ಮೇಲು ಕೀಳು ಇಲ್ಲಾ ನಮ್ಮ ಶರಣರ ವಿಚಾರಧಾರೆಯು ಸಮಾಜಕ್ಕೆ ಸಮಾನತೆಯ ಸಂದೇಶ ನೀಡುತ್ತದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಖಾಸ್ಗತರ ಹಾಗೂ ವಿರಕ್ತ ಮಹಾಸ್ವಾಮಿಗಳ ಹಾಗೂ ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಿ ನಡೆದಂತಹ ಪವಾಡಗಳ ಕುರಿತು ಶ್ರೀಗಳು ವಿವರಿಸಿದರು.
ಶ್ರೀ ಖಾಸ್ಗತೆಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗದೇವರು ಸಾನಿಧ್ಯ ವಹಿಸಿದ್ದರು.
ಗವಾಯಿಗಳಾದ ದೀಪಕಸಿಂಗ್ ಹಜೇರಿ, ಶಶಿಕುಮಾರ ಬಳಗಾನೂರ, ಬಸನಗೌಡ ಬಿರಾದಾರ, ವಾಯ್‌ಲೈನ್ ವಾದನೆಯನ್ನು ಯಲ್ಲಪ್ಪ ಗುಂಡಳ್ಳಿ, ಉಮಾಪತಿ ಹಿರೇಮಠ, ಕುಮಾರ ಕುದರಗೊಂಡ, ಸಂಗೀತಸೇವೆ ಸಲ್ಲಿಸಿದರು.
ಈ ಆಧ್ಯಾತ್ಮಿಕ ಪ್ರವಚನದ ದಿನದಂದು ಅಪಾರ ಭಕ್ತ ಸಮೂಹ ಉಪಸ್ತಿತರಿದ್ದ್ದರು.