
ಬೀದರ:ಮೇ.೨೦: ಬ್ರೀಮ್ಸ್ ಭೋಧಕ ಆಸ್ಪತ್ರೆಯಲ್ಲಿ ಗ್ರೂಪ್(ಡಿ) ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸ್ವಚ್ಛತಾ ಕರ್ಮಿಗಳಾದ ೧) ಶ್ರೀಮತಿ ಲಕ್ಷಿö?? ಗಂಡ ಅಂಬಾಜಿ ಅಷ್ಟೂರ ೨) ಶ್ರೀಮತಿ ಯಶೋಧರ ಗಂಡ ಸುಂದರ ೩) ಲಕ್ಷಿö?? ಗಂಡ ರಮೇಶ ೪) ಅಂಬಿಕಾ ಗಂಡ ರಾಜಕುಮಾರ ೫) ಸುನೀತಾ ಗಂಡ ವಿಜಯಕುಮಾರ ೬) ಶಾರದಮ್ಮಾ ಗಂಡ ರಾಜಕುಮಾರ ಇವರು ಸೇರಿಕೊಂಡು ಬ್ರೀಮ್ಸ್ ಬೋಧಕ ಆಸ್ಪತ್ರೆ ಬೀದರನಲ್ಲಿ ಪ್ರಥಮ ದರ್ಜೆ ಸಹಾಯಕ ಹಾಗೂ ಪ್ರಭಾರಿ ಸ್ವಚ್ಛತಾ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಪ್ರಕಾಶ ಮಾಳಗೆ ಅವರ ಮೇಲೆ ಮಾನಸಿಕ ಮತ್ತು ದೈಹಿಕ ಕಿರುಕುಳ ಹಾಗೂ ದೌರ್ಜನ್ಯದ ಸುಳ್ಳು ಆರೋಪ ಮಾಡಿ ಅವರನ್ನು ತೆಜ್ಯೊವಧೆ ಮಾಡುವ ಷಡ್ಯೆಂತ್ರ ರಚಿಸಿ ಬೀದರ ಜಿಲ್ಲಾ ಬ್ರೀಮ್ಸ್ ಆಸ್ಪತ್ರೆಗೆ ಹಾಗೂ ಜಿಲ್ಲೆಗೆ ಕಪ್ಪು ಚುಕ್ಕೆ ಹಚ್ಚಿ ಇಡಿ ಜಿಲ್ಲೆಗೆ ಕೆಟ್ಟ ಹೆಸರು ತಂದಿರುತ್ತಾರೆ. ಇದಕ್ಕೆ ಸಂಬAಧಿಸಿದAತೆ, ಬ್ರೀಮ್ಸ್ ನಿರ್ದೇಶಕರ ಆದೇಶದ ಮೇರೆಗೆ ವಿಚಾರಣೆ ನಡೆಸುವ ಸಲುವಾಗಿ ಪಾಶ್ ಕಮಿಟಿ (PಔSಊ ಅommiಣಣee) ಯನ್ನು ನೇಮಕ ಮಾಡಲಾಗಿತ್ತು. ಡಾಕ್ಟರ್ ಉಮಾ ದೇಶಮುಖ ಹೆರಿಗೆ ವಿಭಾಗದ ಮುಖ್ಯಸ್ಥರು ಬೀದರ ರವರ ಅಧ್ಯಕ್ಷತೆಯಲ್ಲಿ ನಡೆಸಿದ ಎರಡು ಸರಣಿ ಸಭೆಗಳನ್ನು (ದಿನಾಂಕ: ೧೨/೦೩/೨೦೨೫ ಹಾಗೂ ೧೫/೦೩/೨೦೨೫) ನಡೆಸಿ ತನಿಖೆ ಮಾಡಲಾಗಿದೆ. ಈ ತನಿಖಾ ಸಮಿತಿ ಸಭೆಯಲ್ಲಿ ಶ್ರೀಮತಿ ಲಕ್ಷಿö?? ಗಂಡ ಅಂಬಾಜಿ ಮತ್ತು ಇನ್ನಿತರ ೫ ಜನ ಮಹಿಳಾ ಸ್ವಚ್ಛತಾ ಕರ್ಮಿಗಳ ಸಿಬ್ಬಂಧಿಗಳು ಹಾಗೂ ಪ್ರಕಾಶ ಮಾಳಗೆ ರವರ ಹೇಳಿಕೆಗಳನ್ನು ಪ್ರತ್ಯೇಕವಾಗಿ ಪಡೆದು ಸಮಿತಿಯ ಸದಸ್ಯರು ಕುಲಂಕುಷವಾಗಿ ಪರಿಶೀಲನೆ ಮಾಡಿದ ನಂತರ ಈ ಪ್ರಕರಣದಲ್ಲಿ ಯಾವುದೇ ರೀತಿಯ ದೈಹಿಕ ಮತ್ತು ಮಾನಸಿಕ ಕಿರುಕುಳ ಹಾಗೂ ದೌರ್ಜನ್ಯದ ಬಗ್ಗೆ ಯಾವುದೇ ರೀತಿಯ ಪುರಾವೆಗಳು ಇಲ್ಲವೆಂದು ಕಂಡು ಬಂದಿರುತ್ತದೆ ಎಂದು ಸಮಿತಿಯ ಸರ್ವಸದಸ್ಯರ ಅಭಿಪ್ರಾಯದ ಮೇರೆಗೆ ಸಮಿತಿಯ ಅಧ್ಯಕ್ಷರು ವರದಿಯನ್ನು ನೀಡಿರುತ್ತಾರೆ.
ಆದ್ದರಿಂದ ಈ ಮೇಲಿನ ವರದಿ ಗಮನಿಸಿದ ನಂತರ ಶ್ರೀ ಪ್ರಕಾಶ ಮಾಳಗೆ ಅವರ ಮೇಲೆ ೬ ಜನ ಮಹಿಳಾ ಸ್ವಚ್ಛತಾ ಕರ್ಮಿಗಳು ಉದ್ದೇಶಪೂರ್ವಕವಾಗಿ ಷಡ್ಯಂತ್ರ ರಚಿಸಿ ದೌರ್ಜನ್ಯದ ಸುಳ್ಳು ಆರೋಪ ಮಾಡಿರುವುದು ಕಂಡು ಬರುತ್ತದೆ. ಆದ್ದರಿಂದ ಶ್ರೀ ಪ್ರಕಾಶ ಮಾಳಗೆ ಅವರ ಮೇಲೆ ದೌರ್ಜನ್ಯದ ಸುಳ್ಳು ಆರೋಪ ಮಾಡಿರುವ ಶ್ರೀಮತಿ ಲಕ್ಷಿö?? ಗಂಡ ಅಂಬಾಜಿ ಹಾಗೂ ಇತರರನ್ನು ಈ ಕೂಡಲೇ ತಮ್ಮ ಅಧ್ಯಕ್ಷತೆಯಲ್ಲಿರುವ ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ದೋದ್ದೇಶ ಸಹಕಾರ ಸಂಘದಿAದ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿದ ಈ ೬ ಜನ ಮಹಿಳೆ ಕಾರ್ಮಿಕರನ್ನು ಈ ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. ವಿನಃಕಾರಣ ಶ್ರೀ ಪ್ರಕಾಶ ಮಾಳಗೆ ಅವರ ಮೇಲೆ ಸುಳ್ಳು ಆರೋಪ ಮಾಡಿ ಬೀದರ ಜಿಲ್ಲೆಗೆ ಹಾಗೂ ಬ್ರೀಮ್ಸ್ ಆಸ್ಪತ್ರೆಗೆ ಹಾಗೂ ಜಿಲ್ಲೆಗೆ ಕಪ್ಪು ಚುಕ್ಕೆ ಹಚ್ಚಿ ಕೆಟ್ಟ ಹೆಸರು ತಂದಿರುವವರ ಮೇಲೆ ಸೂಕ್ತ ಕಾನೂನಿನ ಕಠಿಣ ಕ್ರಮಕೈಗೊಳ್ಳಬೇಕು ಮತ್ತು ಇವರ ಹಿಂದಿರುವ ಕಾಣದ ಕೈಗಳ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರ ಮೇಲೆಯು ಕಾನೂನಿನ ಕ್ರಮಕೈಗೊಳ್ಳಬೇಕೆಂದು ಮಾನ್ಯ ಜಿಲ್ಲಾಧಿಕಾರಿ ಅವರಿಗೆ ದಿನಾಂಕ: ೦೫/೦೫/೨೦೨೫ ರಂದು ಸಲ್ಲಿಸಿದ ಮನವಿ ಪತ್ರದಲ್ಲಿ ಒಂದು ವಾರದ ಗಡುವು ನೀಡಲಾಗಿತ್ತು ಒಂದು ವೇಳೆ ನಮ್ಮ ಮನವಿಗೆ ಒಂದು ವಾರದಲ್ಲಿ ಸ್ಪಂಧಿಸದಿದ್ದರೆ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ ಧರಣಿ ಸತ್ಯಗ್ರಹ ಮಾಡಲಾಗುವುದೆಂದು ತಿಳಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಅವರ ಮೇಲೆ ಯಾವುದೇ ಕ್ರಮಕೈಗೊಂಡಿರುವುದಿಲ್ಲ.
ಆದ್ದರಿಂದ ಪಾಶ್ ಕಮಿಟಿ ವತಿಯಿಂದ ನಡೆಸಲಾದ ವಿಚಾರಣಾ ವರದಿಯಲ್ಲಿ ಶ್ರೀ ಪ್ರಕಾಶ ಮಾಳಗೆ ವಿರುದ್ಧ ಯಾವುದೇ ಸಾಕ್ಷಾö??ಧಾರಗಳು, ಪೂರಾವೆಗಳು ಲಭ್ಯವಿಲ್ಲ ಎಂಬ ವರದಿ ನೀಡಿದ ಕಾರಣ ಶ್ರೀ ಪ್ರಕಾಶ ಮಾಳಗೆ ಅವರ ಮೇಲೆ ಮಾನಸಿಕ ಮತ್ತು ದೈಹಿಕ ಕಿರುಕುಳ ಹಾಗೂ ದೌರ್ಜನ್ಯದ ಸುಳ್ಳು ಆರೋಪ ಮಾಡಿ ಅವರನ್ನು ತೆಜ್ಯೊವಧೆ ಮಾಡುವ ಷಡ್ಯೆಂತ್ರ ರಚಿಸಿ ಬೀದರ ಜಿಲ್ಲಾ ಬ್ರೀಮ್ಸ್ ಆಸ್ಪತ್ರೆಗೆ ಹಾಗೂ ಜಿಲ್ಲೆಗೆ ಕಪ್ಪು ಚುಕ್ಕೆ ಹಚ್ಚಿ ಕೆಟ್ಟ ಹೆಸರು ತಂದಿರುವ ಶ್ರೀಮತಿ ಲಕ್ಷಿö?? ಗಂಡ ಅಂಬಾಜಿ ಅಷ್ಟೂರ ಮತ್ತು ಇತರ ೫ ಜನ ಮಹಿಳಾ ಸ್ವಚ್ಛತಾ ಕ್ರಮಿಗಳನ್ನು ಸೇವೆಯಿಂದ ವಜಾಗೊಳಿಸಿ ಅವರ ಮೇಲೆ ಸೂಕ್ತ ಕಾನೂನಿನ ಕಠಿಣ ಕ್ರಮ ಕೈಗೊಂಡು ಅವರನ್ನು ಶಿಕ್ಷೆಗೊಳಪಡಿಸಲು ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುಗಡೆ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ಮಾಡುವುದರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಒಂದು ವೇಳೆ ಸುಳ್ಳು ದೌರ್ಜನ್ಯದ ಆರೋಪ ಮಾಡಿರುವ ಈ ೬ ಜನ ಮಹಿಳಾ ಸ್ಚಚ್ಛತಾ ಕರ್ಮಿಗಳನ್ನು ಒಂದು ವಾರದಲ್ಲಿ ಸೇವೆಯಿಂದ ವಜಾಗೊಳಿಸದೇ ಇದ್ದಲ್ಲಿ ವಿವಿಧ ದಲಿತ ಸಂಘಟನೆಗಳು ಬೀದರ ವತಿಯಿಂದ ಬ್ರೀಮ್ಸ್ ಆಸ್ಪತ್ರೆ ಎದುರುಗಡೆ ಉಗ್ರವಾದ ಹೋರಾಟ ಮಾಡಲಾಗುವುದು ಎಚ್ಚರಿಸಲಾಯಿತು
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಚಂದ್ರಕಾAತ ನಿರಾಟೆ, ರಾಜಕುಮಾರ ಮೂಲಭಾರತಿ, ರಾಜಕುಮಾರ ಗುನ್ನಳ್ಳಿ, ಶಿವಕುಮಾರ ತುಂಗಾ, ರಾಘವೇಂದ್ರ ಮಿನಕೇರಾ, ನರಸಿಂಗ್ ಸಾಮ್ರಾಟ್, ಸಂತೋಷ ಏಣಕುರೆ, ಅಂಬೇಡ್ಕರ್ ಪಿ. ಬೌದ್ಧೆ, ರಾಹುಲ ಢಾಂಗೆ, ಅರವಿಂದ ದಯಾಳ, ಜಗನ್ನಾಥ ಹೋನ್ನಾ, ಡಿ. ಪ್ರಭಾಕರ ಏಕೆಂಬೆಕರ್, ನಿತೀಷ ಉಪ್ಪೆ, ಸಮಾಧಖಾನ್ ಗಾದಗಿ, ? ಪ್ರಲ್ಹಾದ ಬಿ. ಮಾಲೆಕರ್ ಹಾಗೂ ಇತರರು ಉಪಸ್ಥಿತರಿದ್ದರು.