Home ಜಿಲ್ಲೆ ಮೈಸೂರಿನಲ್ಲಿ ಒಂದು ದಿನದ ಲಗೋರಿ ಕಾರ್ಯಾಗಾರ

ಮೈಸೂರಿನಲ್ಲಿ ಒಂದು ದಿನದ ಲಗೋರಿ ಕಾರ್ಯಾಗಾರ

ವಿಜಯಪುರ, ಮೇ. 18:ಮೈಸೂರಿನ ಕೆ ಆರ್ ಎಸ್ ರಸ್ತೆ,ಪಂಪ್ ಹೌಸ್ ನಲ್ಲಿರುವ ಪರಂಪರೆ ಪರಿಸರ ಪಾಠಶಾಲಾ ಆವರಣದಲ್ಲಿ ಒಂದು ದಿನದ ಲಗೋರಿ ತರಬೇತಿ ಕಾರ್ಯಾಗಾರ ನಡೆಯಿತು.
ಪರಂಪರೆ ಪರಿಸರ ವತಿಯಿಂದ ಆಯೋಜಿಸಿದ ಕಾರ್ಯಗಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭಿವಾಯಿತು.
ಈ ತರಬೇತಿಯಲ್ಲಿ ಬಾಲಕ, ಬಾಲಕಿಯರು, ಪುರುಷರು, ಮಹಿಳೆಯರು, ವೃದ್ಧರು ಮತ್ತು ವಿವಿಧ ಇಲಾಖೆಯ ನಿವೃತ ಅಧಿಕಾರಿಗಳು ಭಾಗವಹಿಸಿದ್ದರು.
ಆಯೋಜಕರಾದ ಸುಪ್ರೀತ್ ಎಂ.ಎಸ್.
ಅವರ ನೇತೃತ್ವದಲ್ಲಿ 12 ತಂಡಗಳು ಭೂಮಿ, ವಾಯು, ಜಲ, ಅಗ್ನಿ, ಆಕಾಶ,ನಕ್ಷತ್ರ,ಸೂರ್ಯ, ಚಂದ್ರ ನವಗ್ರಹ, ನಿಷ್ಕಲಾ, ದೇಸಿ, ಎಂ ಫೈ ಎಂಬ ತಂಡಗಳು ಭಾಗವಸಿದ್ದವು. ಸಾಯಂಕ 6 ಗಂಟೆಗೆ ಪಡೆದ ಸಮಾರೋಪ ಸಮಾರಂಭದಲ್ಲಿ ಪ್ರಥಮ ಸ್ಥಾನ -ಜಲ ತಂಡ, ದ್ವಿತೀಯ ಸ್ಥಾನ -ಭೂಮಿ ತಂಡ,
ತೃತೀಯ ಸ್ಥಾನ – ಆಕಾಶ ತಂಡಗಳು ಜಯಗಳಿಸಿದರು. ಗೆದ್ದ ತಂಡಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಲಗೋರಿ ತರಬೇತಿಯನ್ನು ರಾಷ್ಟ್ರಿಯ ತರಬೇತಿದಾರ ಹಾಗೂ ನಿರ್ಣಾಯಕ ಬಸವರಾಜ ಬಾಗೇವಾಡಿ ಉತ್ನಾಳ ಅವರು ನೀಡಿದರು.
ಈ ಸಂದರ್ಭದಲ್ಲಿ ರೂತು ಜಾಕ್ಲಿನ್, ಮಹೇಶ್ ಸಾಕ್ರೆ, ಶಿವಕುಮಾರಸ್ವಾಮಿ,
ಆಯುಷ್ಮಾನ್ ಡಿ ಪಿ ಮತ್ತು ಮಕ್ಕಳು ಪೆÇೀಷಕರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.