
ಕಲಬುರ್ಗಿ ,ಜ ,18: ನಗರದಲ್ಲಿರುವ ರಕ್ಷಿತಾ ಇಂಟಿಗ್ರೇಟೆಡ್ ರೂರೆಲ್ ಅಂಡ್ ಅರ್ಬನ್ ಡೆವಲಪ್ಮೆಂಟ್ ಸೊಸೈಟಿ ಕಾರ್ಯಾಲಯದಲ್ಲಿದ್ದು ಫೌಂಡೇಶನ್ ಫಾರ್ ಎಂಎಸ್‍ಎಂಇ ಕ್ಲಸ್ಟರ್ಸ್, ಹಾಗೂ ರಕ್ಷಿತಾ ಇಂಟಿಗ್ರೇಟೆಡ್ ರೂರೆಲ್ ಅಂಡ್ ಅರ್ಬನ್ ಡೆವಲಪ್ಮೆಂಟ್ ಸೊಸೈಟಿ ಅವರ ಸಹಯೋಗದಲ್ಲಿ ಒಂದು ದಿನದ ಎಂಎಸ್‍ಎಂಇಗಳಿಗೆ ಸೈಬರ್ ಭದ್ರತಾ ತರಬೇತಿ ಕಾರ್ಯಕ್ರಮಕ್ಕೆ ಎಂಎಸ್‍ಎಂಇ ಕ್ಲಸ್ಟರ್ಸ್‍ನ ರಾಜ್ಯ ಸಂಯೋಜಕರಾದ ರಾಕೇಶ್ ಅವರು ದೀಪ ಬೆಳಗಿಸಿ ಮಾತನಾಡಿದರು. ಈ ವೇಳೆಯಲ್ಲಿ ರಕ್ಷಿತಾ ಇಂಟೆಗ್ರಟೆಡ್ ರೂರಲ್ &ಚಿmಠಿ;ಅರ್ಬನ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷರಾದ ರೇವಣಸಿದ್ಧಪ್ಪಾ ಎಸ್. ಕಟ್ಟಿಮನಿ, ಸುರೇಶ್ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸೈಬರ್ ಅಪಾಯಗಳ ಪರಿಚಯ, ಫಿಶಿಂಗ್ ಮತ್ತು ರ್ಯಾನ್ಸಮ್‍ವೇರ್ ದಾಳಿಗಳಿಂದ ರಕ್ಷಣೆ, ಪಾಸ್‍ವರ್ಡ್ ನಿರ್ವಹಣೆ, ಡೇಟಾ ಭದ್ರತೆ, ಬ್ಯಾಕಪ್ ವ್ಯವಸ್ಥೆಗಳು ಹಾಗೂ ಸೈಬರ್ ಕಾನೂನುಗಳ ಕುರಿತು ಮಾಹಿತಿ ನೀಡಲಾಯಿತು. ಈ ತರಬೇತಿ ಎಂಎಸ್‍ಎಂಇ ಉದ್ಯಮಿಗಳಿಗೆ ಸೈಬರ್ ಜಾಗೃತಿ ಹೆಚ್ಚಿಸಿ, ಡಿಜಿಟಲ್ ವ್ಯವಹಾರಗಳಲ್ಲಿ ಭದ್ರತೆ ಮತ್ತು ವಿಶ್ವಾಸವನ್ನು ಬಲಪಡಿಸಲು ಸಹಕಾರಿ.
ಸುರೇಶ್ ಎಸ್. ಕಟ್ಟಿಮನಿ,

























