
ಕಲಬುರಗಿ,ಜೂ.22-ಬೋರಾಬಾಯಿ ನಗರದ ಸಾರ್ವಜನಿಕ ರಸ್ತೆಯ ಮೇಲೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆರ್.ಜಿ.ನಗರ ಪೊಲೀಸ್ ಠಾಣೆ ಎಎಸ್‍ಐ ಚಂದ್ರಕಾಂತ, ಸಿಬ್ಬಂದಿಗಳಾದ ಶರಣಬಸವ, ಅರೇಶ, ಮುಜಾಹಿದ, ಉಮೇಶ್ ಅವರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ಬೋರಾಬಾಯಿ ನಗರದ ಅರವಿಂದ ತಂದೆ ಅರ್ಜುನ ಹಾದಿಮನಿ (30) ಎಂಬಾತನನ್ನು ಬಂಧಿಸಿ 1280 ರೂ.ಮೊತ್ತದ ಮದ್ಯ ಮತ್ತು 250 ರೂ.ನಗದು ಜಪ್ತಿ ಮಾಡಿದ್ದಾರೆ.
ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.