೧೭ ರಂದು ಮಾದಿಗ ದಂಡೋರ ಸಮಿತಿಯಿಂದ ಅಮರಣಾಂತ ಉಪವಾಸ ಸತ್ಯಾಗ್ರಹ

ಯಾದಗಿರಿ :ಡಿ.೧೬: ಮೂರು ದಶಕಗಳ ಬೇಡಿಕೆಯಾಗಿದ್ದ ಒಳಮೀಸಲಾತಿಯಲ್ಲಿ ಮಾದಿಗ ಸಮಾಜಕ್ಕೆ ಪ್ರಸ್ತುತ ಸರಕಾರ ಮೀಸಲಾತಿಯಲ್ಲಿ ಸಂಪೂರ್ಣವಾಗಿ ನೀಡದೆ ಮೂಗಿಗೆ ತುಪ್ಪ ಸವರಿದಂತಾಗಿದೆ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮೀತಿ ಜಿಲ್ಲಾಧ್ಯಕ್ಷ ಕಾಶಪ್ಪ ಮಾದಿಗ ಹೆಗ್ಗಣಗೇರಾ ಹೇಳಿದರು.

ಸೋಮವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,

ಪ್ರಸ್ತುತ ಸರಕಾರ ಒಳಮೀಸಲಾತಿಯಲ್ಲಿ ಮಾದಿಗ ಸಮಾಜಕ್ಕೆ ಸಂಪೂರ್ಣತೆಯಾಗಿ ಮೀಸಲಾತಿ ನೀಡದೆ ಅನ್ಯಾಯ ಮಾಡಿದೆ ಇದರ ಸದುದ್ದೇಶದಿಂದ ಇದೇ ಬುಧವಾರ
ಚಲೋ ಬೆಳಗಾವಿ ಆಮರಣಾಂತ ಉಪವಾಸ ಸತ್ಯಾಗ್ರಹ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದ್ದು,
ಮಾದಿಗ ದಂಡೋರ ರಾಜ್ಯಾಧ್ಯಕ್ಷ ಬಿ. ನರಸಪ್ಪ ದಂಡೋರ ಇವರ ನೇತೃತ್ವದಲ್ಲಿ ಜರುಗಲಿದೆ ಎಂದರು.

ಪ್ರಸ್ತುತ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಸಂಪೂರ್ಣ ಒಳ ಮೀಸಲಾತಿ ಕಾನೂನಿನ ಕಾಯ್ದೆ ರೂಪದಲ್ಲಿ ಜಾರಿಗೆಗಾಗಿ ಮತ್ತು ರಾಜಕೀಯ ರಂಗದಲ್ಲಿ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆ, ಜಿಲ್ಲಾ ಮತ್ತು ತಾಲೂಕು,ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಮೀಸಲಾತಿಯ ನೀಡಬೇಕೆಂದು ಒತ್ತಾಯಿಸಿದರು .

ಈ ಒಂದು ಮೀಸಲಾತಿ ಜಾರಿಗೆಗಾಗಿ
ಹಲೋ ಮಾದಿಗರೇ ಚಲೋ ಬೆಳಗಾವಿ ,ಉಪವಾಸ ಧರಣಿ ಸತ್ಯಾಗ್ರಹ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ .
ಈ ಒಂದು ಹೋರಾಟದಲ್ಲಿ ಜಿಲ್ಲೆಯಿಂದ ಸಮಾಜದ ಹಿರಿಯ ನಾಯಕರು, ರಾಜಕೀಯ ಮುಖಂಡರು,
ಹೋರಾಟಗಾರರು,ವಿದ್ಯಾರ್ಥಿಗಳು, ಬುದ್ಧಿಜೀವಿಗಳು, ಹೆಚ್ಚಿನ ಸಂಖ್ಯೆಯಲ್ಲಿ
ಭಾಗವಹಿಸಲು ಕೋರಿದರು.

ಈ ವೇಳೆಯಲ್ಲಿ ತಾಲೂಕು ಅಧ್ಯಕ್ಷ ಅನೀಲ್ ಕುಮಾರ್ ದಾಸನಕೇರಿ,
ವಡಿಗೇರಾ ತಾಲೂಕು ವಿದ್ಯಾರ್ಥಿ ಘಟಕ ಅಧ್ಯಕ್ಷ ವಿಲ್ಸನ್ ಹಾಲಗೇರಾ , ಹಣಮಂತ, ಶಂಕರಪ್ಪ, ಇದ್ದರು.