Home ಜಿಲ್ಲೆ ಸಾರ್ವಜನಿಕ ಶೌಚಾಲಯವಾಗಿ ಮಾರ್ಪಟ್ಟ ಹಳೆಯ ಸರ್ಕಾರಿ ಆಸ್ಪತ್ರೆ

ಸಾರ್ವಜನಿಕ ಶೌಚಾಲಯವಾಗಿ ಮಾರ್ಪಟ್ಟ ಹಳೆಯ ಸರ್ಕಾರಿ ಆಸ್ಪತ್ರೆ

ಗುರುಮಠಕಲ್.:ಏ.೬:ಗಡಿಮೊಹಲ್ಲಾ ವಾರ್ಡ್ ಸಂಖ್ಯೆ ೪ರಲ್ಲಿರುವ ಹಳೆಯ ಸರ್ಕಾರಿ ಆಸ್ಪತ್ರೆಯ ಕಟ್ಟಡವು ಇಂದು ‘ಭೂತ ಬಂಗಲೆ’ಯAತಾಗಿದ್ದು, ಅನೈರ್ಮಲ್ಯದ ಕೇಂದ್ರವಾಗಿ ಮಾರ್ಪಟ್ಟಿದೆ. ದಶಕಗಳ ಕಾಲ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಿದ್ದ ಈ ಕಟ್ಟಡ, ಇಂದು ಮೂತ್ರ ವಿಸರ್ಜನೆ ಹಾಗೂ ಬಯಲು ಶೌಚದ ತಾಣವಾಗಿ ಪರಿಣಮಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕಟ್ಟಡವು ಹಿಂದೆ ಸರ್ಕಾರಿ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆಸ್ಪತ್ರೆ ಸ್ಥಳಾಂತರಗೊAಡ ನಂತರ ಇಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ (IಖಿI) ಆರಂಭಿಸಲಾಗಿತ್ತು. ಈಗ ಕಾಲೇಜು ಕೂಡ ತನ್ನದೇ ಆದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊAಡಿದ್ದು, ಕಳೆದ ಹಲವು ವರ್ಷಗಳಿಂದ ಈ ವಿಶಾಲವಾದ ಜಾಗ ಮತ್ತು ಕಟ್ಟಡ ಅನಾಥವಾಗಿ ಬಿದ್ದಿದೆ.
ದುರ್ನಾತದ ನಡುವೆ ಜನಜೀವನಕಟ್ಟಡವು ಪಾಳುಬಿದ್ದಿರುವುದರಿಂದ ಸಾರ್ವಜನಿಕರು ಇದನ್ನು ಶೌಚಾಲಯವಾಗಿ ಬಳಸುತ್ತಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಮನೆಗಳ ನಿವಾಸಿಗಳು, ಪಕ್ಕದಲ್ಲೇ ಇರುವ ಅಂಗನವಾಡಿ ಕೇಂದ್ರ ಮತ್ತು ಅಂಚೆ ಕಚೇರಿಗೆ ಬರುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂಗನವಾಡಿ ಮಕ್ಕಳಿಗೆ ಆತಂಕ: ಪುಟ್ಟ ಮಕ್ಕಳು ಕಲಿಯುವ ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ಇಷ್ಟೊಂದು ಅನೈರ್ಮಲ್ಯ ಇರುವುದು ಸಾಂಕ್ರಾಮಿಕ ರೋಗಗಳ ಭೀತಿಯನ್ನು ಹುಟ್ಟುಹಾಕಿದೆ.
ಅಧಿಕಾರಿಗಳ ಮೌನ: ಹಲವು ಬಾರಿ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸರ್ಕಾರಿ ಕಚೇರಿಗಳಿಗೆ ಜಾಗದ ಕೊರತೆಗುರುಮಠಕಲ್ ತಾಲ್ಲೂಕಾಗಿ ಘೋಷಣೆಯಾಗಿ ವರ್ಷಗಳೇ ಕಳೆದರೂ, ಹಲವು ತಾಲ್ಲೂಕು ಮಟ್ಟದ ಕಚೇರಿಗಳಿಗೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಪಟ್ಟಣದ ಮಧ್ಯಭಾಗದಲ್ಲಿರುವ ಈ ವಿಶಾಲವಾದ ಜಾಗವನ್ನು ಸ್ವಚ್ಛಗೊಳಿಸಿ, ಹಳೆಯ ಕಟ್ಟಡವನ್ನು ತೆರವುಗೊಳಿಸಿದರೆ, ಹೊಸ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಇದು ಅತ್ಯಂತ ಸೂಕ್ತ ಸ್ಥಳವಾಗಿದೆ.


“ಹಳೆಯ ಆಸ್ಪತ್ರೆ ಈಗ ಶೌಚಾಲಯದ ತಾಣವಾಗಿದೆ. ಇದರಿಂದ ಬಡಾವಣೆಯ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಗಬ್ಬು ವಾಸನೆಯಿಂದಾಗಿ ರೋಗಗಳನ್ನು ಆಹ್ವಾನಿಸುವಂತಾಗಿದೆ. ಇದರ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ.”

  • ಸತೀಶ್ ತಿವಾರಿ, ಬಡಾವಣೆಯ ಮುಖಂಡರು.

“ಗುರುಮಠಕಲ್ ಪಟ್ಟಣದಲ್ಲಿ ಅನೇಕ ಸರ್ಕಾರಿ ಕಚೇರಿಗಳು ಖಾಸಗಿ ಜಾಗದಲ್ಲಿ ಬಾಡಿಗೆ ನೀಡಿ ನಡೆಯುತ್ತಿವೆ. ಇಂತಹ ವಿಶಾಲವಾದ ಸರ್ಕಾರಿ ಜಾಗವಿರುವಾಗ ಅದನ್ನು ಸದುಪಯೋಗ ಪಡಿಸಿಕೊಳ್ಳದೆ ಇರುವುದು ದುರಂತ. ಕೂಡಲೇ ಈ ಕಟ್ಟಡ ತೆರವುಗೊಳಿಸಿ ಕಚೇರಿಗಳನ್ನು ನಿರ್ಮಿಸಬೇಕು.”

  • ದೀಪಕ್ ಹಜಾರೆ, ಬಡಾವಣೆಯ ಮುಖಂಡರು.