
ಚನ್ನಮ್ಮನ ಕಿತ್ತೂರು, ಮೇ17: ತಾಲೂಕಿನ ಬೈಲೂರ ಗ್ರಾಮದ ಹುತಾತ್ಮ ಗಾಂಧಿ ಮಾರ್ಗದಲ್ಲಿರುವ ಜಲ ಸಂಗ್ರಹಾಲಯ (ನೀರಿನಟ್ಯಾಂಕ್) 3 ದಶಕಗಳ ಹಿಂದೆ ನಿರ್ಮಾಣವಾಗಿತ್ತು ಈಗ ಇದು ಶಿಥಿಲಾವಸ್ಥೆಯಲ್ಲಿದೆ ಇದನ್ನು ಸಿಮೆಂಟ್ ಪ್ಲಾಸ್ಟರ ಮಾಡಲಾಗಿತ್ತು ಅದು ಹಾಳಾಗಿದೆ. ಅದನ್ನು ಸಂಪೂರ್ಣ ಕಿತ್ತೆಸೆದು ಹೊಸ ಟ್ಯಾಂಕ್ ನಿರ್ಮಿಸಿ ಕೊಡಬೇಕೆಂದು ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದರು.
ಇದರ ಹಿನ್ನೆಲೆ ಸದರಿ ವಿಷಯದ ಕುರಿತು ಕಾರ್ಯಪಾಲಕ ಅಭಿಯಂತರರು ಗ್ರಾ.ಕು.ನೀ ನೈರ್ಮಲ್ಯ ಬೆಳಗಾವಿ ವಿಭಾಗದ ಕಿರಣ ಗೋರ್ಪಡೆ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರಾ.ಕು.ನೀ & ನೈರ್ಮಲ್ಯ ಬೈಲಹೊಂಗಲ ಉಪವಿಭಾಗಾಧಿಕಾರಿ ಅಜೀತ ಬೀರಾದರ ಸ್ಥಾನಿಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸದರಿ ಜಲ ಸಂಗ್ರಹಾಲಯ ಸುಸ್ಥಿತಿಯಲ್ಲಿ ಇರುವುದು ಆರ್.ಎಚ್. ಟೆಸ್ಟ್ ತಿಳಿಯಲಾಗಿ, ತಾತ್ಕಾಲಿಕ ದುರಸ್ತಿ ಮಾಡಲು ಸೂಚಿಸಿದರು.
ಈ ವೇಳೆ ಪಿಡಿಓ ಈಶ್ವರ ಹಡಪದ, ಕಾರ್ಯದರ್ಶಿ ಬಸವರಾಜ ಅಂಬಡಗಟ್ಟಿ, ಶಿವು ಹಿರೇಮಠ, ಶಶಿಧರ ಗಂಡಲಾಟಿ, ಸುನೀಲ್ ಇಟ್ನಾಳ, ಅಭಿಯಂತರ ಚಂದರಕಾಂತ ಅನಗೊಂಡ, ಸಂಬಂಧಿಸಿದ ಶಾಖಾಧಿಕಾರಿಗಳು, ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರಿದ್ದರು


























