ಸಂಜೆವಾಣಿ ವರದಿಗೆ ಎಚ್ಚೆತ್ತ ಅಧಿಕಾರಿಗಳು : ಸುಗಮ ಸಂಚಾರಕ್ಕೆ ಅನುವು

ಇಂಡಿ :ನ.27: ಸಮೀಪದ ಶಿರಗೂರಿನ ಸಿದರಾಯ ದೇವಸ್ಥಾನ ಬಲ ಭಾಗದಿಂದ ಪಡನೂರ ಗ್ರಾಮಕ್ಕೆ ತೆರಳುವ ರಸ್ತೆಯ ಎರಡೂ ಬದಿಗಳಲ್ಲಿ ಜಾಲಿ ಕಂಟಿ ಬೆಳೆದು, ರೈತರು ಹಾಗೂ ಜಾನುವಾರುಗಳ ಓಡಾಟಕ್ಕೆ ಅಡ್ಡಿಯಾಗಿತ್ತು. ರಸ್ತೆ ನುಂಗಿದ ಜಾಲಿಕಂಟಿ, ಎಂಬ ಶೀರ್ಷಿಕೆಯಡಿ ನ.12 ರಂದು ಸಂಜೆವಾಣಿ ವರದಿ ಪ್ರಕಟ ಹಿನ್ನೆಲೆ ಎಚ್ಚೆತ್ತಗೊಂಡ ಸಂಬಂಧಪಟ್ಟ ಆಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜೆಸಿಬಿ ಮೂಲಕ ಕಾಮಗಾರಿಕ್ಕೆ ನಡೆಸಿದರು.

ಸುಮಾರು 2.5 ಕಿಮಿ ಇರುವ ಈ ರಸ್ತೆಯುದ್ದಕ್ಕೂ ರಸ್ತೆಗೆ ಇಳಿದ ಜಾಲಿ ಕಂಟಿಗಳನ್ನು ಜೆಸಿಬಿ ಮೂಲಕ ಒತ್ತುವರಿಗೊಳ್ಳಿಸಿ ಹೊಲ ಗದ್ದೆಗೆ ತೆರಳುವ ರೈತರಿಗೆ ಹಾಗೂ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಂಡಲಾಯಿತ್ತು. ರಸ್ತೆ ಮಧ್ಯದಲ್ಲಿ ಅಪಾಘಾತಕ್ಕೆಂದು ಬಿದ್ದ ತೆಗ್ಗು ಗುಂಡಿಗಳನ್ನು ಜೆಸಿಬಿ ಅಂಚೆ ಮೂಲಕ ಮುಚ್ಚಲಾಯಿತ್ತು.

ಎತ್ತಿನಗಾಡಿ ಮೂಲಕ ತೆರಳುವ ರೈತರಂತೂ ಈ ರಸ್ತೆ ಮೂಲಕ ಸಾಗಲು ಸರ್ಕಸ್ ಮಾಡಬೇಕಾಗಿತ್ತು. ಹಾಗೂ ಹೊಲ ಗದ್ದೆಗಳಲ್ಲೇ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ರೈತರ ಮಕ್ಕಳೂ ಹಿಂದೆ ಇದೇ ರಸ್ತೆಯ ಮೂಲಕ ಗ್ರಾಮದ ಶಾಲೆಗೆ ತೆರಳಲು ಮಕ್ಕಳಿಗೆ ಬೇಸರ ಮನೆ ಮಾಡಿತ್ತು, ಆದರೆ ಇದ್ದೀಗಾ ಯಾವುದೇ ಭಯವಿಲ್ಲದೇ ರಸ್ತೆಯಲ್ಲಿ ಉತ್ಸಹದಿಂದ ಅಲ್ಲೇದಾಡುತ್ತಿದ್ದಾರೆ.