
ಕಲಬುರಗಿ: ಮೇ.21: ಭಯೋತ್ಪಾದನಾ ದಿನದ ಪ್ರಯುಕ್ತ ಸರ್ಕಾರ ಹಾಗೂ ಪ್ರಧಾನ ಕಛೇರಿಯ ಆದೇಶದಂತೆ ಕಲಬುರಗಿ ಕೇಂದ್ರ ಕಾರಾಗೃಹದ ಒಳಾವರಣದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಡಾ|| ಅನಿತಾ ಆರ್. ಅವರು ಬುಧವಾರ ಕಾರಾಗೃಹದ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳಿಗೆ ಭಯೋತ್ಪಾದನಾ ವಿರೋಧಿ ದಿನದ ಪ್ರಮಾಣ ವಚನವನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಕಚೇರಿ ಸಹಾಯಕ ಅಧೀಕ್ಷಕರಾದ ಚನ್ನಪ್ಪ, ಸಂಸ್ಥೆಯ ವೈದ್ಯಾಧಿಕಾರಿಗಳಾದ ಡಾ|| ರವೀಂದ್ರ ಬನ್ನೇರ್, ಜೈಲರ್‍ಗಳಾದ ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್ ಹಾಗೂ ಕಛೇರಿ ಅಧೀಕ್ಷಕರಾದ ಗುರುಶೇಶ್ವರ ಶಾಸ್ತ್ರಿ, ಸಂಸ್ಥೆಯ ಶಿಕ್ಷಕರಾದ ನಾಗರಾಜ ಮುಲಗೆ ಹಾಗೂ ಸಂಸ್ಥೆಯ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು ಭಾಗವಹಿಸಿದರು.