Home ಜಿಲ್ಲೆ ಕಲಬುರಗಿ ಎನ್.ವಿ. ಕಾಲೇಜು ವಿದ್ಯಾರ್ಥಿಗಳ ಸೇವಾ ಮನೋಭಾವ ಅನುಕರಣೀಯ : ಡಾ. ಕರಿಗೂಳೇಶ್ವರ

ಎನ್.ವಿ. ಕಾಲೇಜು ವಿದ್ಯಾರ್ಥಿಗಳ ಸೇವಾ ಮನೋಭಾವ ಅನುಕರಣೀಯ : ಡಾ. ಕರಿಗೂಳೇಶ್ವರ

ಕಲಬುರಗಿ:ಏ.9:ಇಂದು ಹೆಚ್ಚಿನ ಮಹಾವಿದ್ಯಾಲಯಗಳಲ್ಲಿ ಎನ್.ಎಸ್.ಎಸ್. ಘಟಕಗಳಿವೆ. ಆದರೆ ಎನ್.ವಿ. ಕಾಲೇಜಿನ ಶಿಬಿರಾರ್ಥಿಗಳು ಅಳವಡಿಸಿಕೊಂಡಿರುವ ಸೇವಾ ಮನೋಭಾವ ಅನುಕರಣೀಯ ಹಾಗೂ ಶ್ಲಾಘನೀಯ
ಎಂದು ಡಾ. ಕರಿಗೂಳೇಶ್ವರ ಹೇಳಿದರು.

ಕಲಬುರಗಿ ಏಪ್ರಿಲ್ 06: ಇಂದು ಕಲುಬುರಗಿ ತಾಲೂಕಿನ ಔರಾದ(ಬಿ) ಗ್ರಾಮದ ಶ್ರೀಸ್ವಾಮಿಸಮರ್ಥ ದೇವಸ್ಥಾನದ ಆವರಣದಲ್ಲಿ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ, ಆಯ್.ಕ್ಯು.ಎ.ಸಿ. ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ರಾಷ್ಟ್ರೀಯ ಸೇವಾ ಯೋಜನೆಯ ಕೋಶದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಾಗಾಂವ್ ಕ್ರಾಸ್ ನ ಪದವಿ ಮಹಾವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ. ಕರಿಗೂಳೇಶ್ವರ ಅವರು ಮಾತನಾಡಿ ಎನ್.ಎಸ್.ಎಸ್.ಶಿಬಿರಗಳು ಹಸಿವಿನ ಮಹತ್ವ, ಸಮಯ ಪಾಲನೆ ಕುರಿತು ತಿಳಿಸಿಕೊಡುತ್ತವೆ. ಇಂಥ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರುವ ಕಾರ್ಯಗಾರಗಳಾಗಿವೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ನೂತನ ವಿದ್ಯಾಲಯ ಸಂಸ್ಥೆಯ ಕಾಲೇಜು ಶೈಕ್ಷಣಿಕ ಮಂಡಳಿಯ ಸದಸ್ಯರಾದ ಡಾ. ಸದಾಶಿವ ಆರ್. ಜಿಡಗೀಕರ್ ಅವರು ಮಾತನಾಡಿ ಶಿಬಿರಾರ್ಥಿಗಳು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಇಂಥ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ನೆರವಾಗುತ್ತವೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಮೋಹಿನಿ ಸದಾಶಿವ ಜಿಡಗೀಕರ್ ಅವರು ಮಾತನಾಡಿದರು. ವೇದಿಕೆಯ ಮೇಲೆ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಎನ್.ಎಸ್.ಎಸ್. ಅಧಿಕಾರಿ ಡಾ. ದಯಾನಂದ ಎಂ. ಶಾಸ್ತ್ರಿ, ಶ್ರೀಕಾಂತ್ ಪಂಡಿತ ಹಾಗೂ ಡಾ. ಮಲ್ಲಿನಾಥ ಎಸ್. ತಳವಾರ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅರವತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕುಮಾರಿ ಸ್ಪೂರ್ತಿ ಮತ್ತು ಕುಮಾರಿ ಪ್ರೀತಿ ಎನ್.ಎಸ್.ಎಸ್. ಗೀತೆ ಹಾಡಿದರು. ಆನಂದ, ಸ್ಪೂರ್ತಿ, ಸಾಕ್ಷಿ, ಭರತ್ ಪಾಟೀಲ್, ಸ್ಪೂರ್ತಿ… ವಿದ್ಯಾರ್ಥಿಗಳು ತಮ್ಮ ಅನಿಸಿಕೆ -ಅಭಿಪ್ರಾಯಗಳನ್ನು ಹಂಚಿಕೊಂಡರು. ಪೆÇ್ರ. ಶ್ರೀಕಾಂತ ಪಂಡಿತ ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣ ಮಾಡಿದರು. ಡಾ. ಮಲ್ಲಿನಾಥ ಎಸ್. ತಳವಾರ ನಿರೂಪಿಸಿದರು. ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಎನ್.ಎಸ್.ಎಸ್. ಅಧಿಕಾರಿ ಡಾ. ದಯಾನಂದ ಎಂ. ಶಾಸ್ತ್ರಿಯವರು ವಂದಿಸಿದರು.